Kannada Serial TRP: ಕಿರುತೆರೆ ಅಂದರೆ ನೆನಪಾಗೋದು ಸೀರಿಯಲ್ ಗಳು ಮತ್ತು ರಿಯಾಲಿಟಿ ಶೋಗಳು. ಅದರಲ್ಲೂ ಮನರಂಜನೆ ವಿಚಾರದಲ್ಲಿ ಸೀರಿಯಲ್ ಗಳದ್ದೇ ಮೇಲುಗೈ. ಪ್ರತಿದಿನ ಪ್ರಸಾರವಾಗುವ ವೈವಿದ್ಯಮಯ ಸೀರಿಯಲ್ ಗಳು ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಗಳಾಗಿ ಅವುಗಳಲ್ಲಿ ಟಾಪ್ ಸೀರಿಯಲ್ ಗಳಾಗಿ ಸ್ಥಾನವನ್ನು (Kannada Serial TRP) ಪಡೆದುಕೊಂಡಿವೆ. ಇನ್ನು ಈ ವಾರ ಯಾವ ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನ ಪಡೆದಿವೆ ಅನ್ನೋದನ್ನ ತಿಳಿಯೋಣ ಬನ್ನಿ.
ಕನ್ನಡ ಸಿನಿಮಾಗಳ ಹಿರಿಯ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಎಂದಿನಂತೆ ಈ ವಾರವೂ ಸಹಾ ಟಾಪ್ ಒಂದನೇ ಸ್ಥಾನವನ್ನು ಅಲಂಕಿರಿಸಿದ್ದು, ಸೀರಿಯಲ್ ನ ಹೊಸ ತಿರುವುಗಳು, ಸ್ನೇಹಾನ ಬಂಗಾರಮ್ಮ ಸೊಸೆ ಅಂತ ಒಪ್ಪಿಕೊಂಡಿದ್ದು, ಮಗಳನ್ನು ಹುಡುಕಲು ಲ ಪುಟ್ಟಕ್ಕ ಮಾಡುವ ಪ್ರಯತ್ನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಕ್ಸಸ್ ಆಗಿದೆ.
ಎರಡನೇ ಸ್ಥಾನದಲ್ಲಿ ಕಳೆದ ವಾರದ ಹಾಗೆಯೇ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ. ಜಯಂತ್ ಮೇಲೆ ಅಜ್ಜಿಗೆ ಬಂದ ಅನುಮಾನ, ಹರೀಶ ಮನೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಸಿದ್ಧು ಪೂರ್ವಿ ಎಂಗೇಜ್ಮೆಂಟ್ ಈ ವಾರ ಹೈಲೈಟ್ ಗಳಾಗಿದ್ದು, ಜನರಿಗೆ ಮನರಂಜನೆ ನೀಡಿದೆ.
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮೂರನೇ ಸ್ಥಾನವನ್ನು ಪಡೆದಿದೆ. ಮಿನಿಸ್ಟರ್ ಮಗಳು ಮತ್ತು ಅವರ ಬಲಗೈ ಬಂಟ ಸುಬ್ಬು ನಡುವಿನ ಸ್ನೇಹ, ಶ್ರಾವಣಿಗಾಗಿ ಸುಬ್ಬು ಜೈಲು ಸೇರಿದ್ದು, ಶ್ರೀವಲ್ಲಿ ಶ್ರಾವಣಿ ಇಬ್ಬರೂ ಸೇರಿ ಸುಬ್ಬನ ಜೈಲಿನಿಂದ ಬಿಡಿಸಿದ್ದು, ಮದನ್ ಗೆ ಶ್ರಾವಣಿ ಹಿಗ್ಗಾ ಮುಗ್ಗಾ ಬಾರಿಸಿದ್ದು ಈ ವಾರದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದವು.
ಈ ವಾರ ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ ಸೀರಿಯಲ್ ಇದ್ದು, ಗೌತಮ್ ಭೂಮಿಕಾ ನಡುವೆ ಮೂಡಿದ ಪ್ರೇಮದ ನಡುವೆಯೇ ಅಪೇಕ್ಷಾ ಮದುವೆಗೆ ಸಿದ್ಧತೆಗಳು, ಮಲ್ಲಿಯನ್ನ ಕೊಲ್ಲಲು ಜೈದೇವ್ ಮಾಡಿದ ಪ್ರಯತ್ನಕ್ಕೆ ಅವನಿಗೆ ಎಚ್ಚರಿಕೆಯನ್ನು ನೀಡಿದ ಭೂಮಿಕಾ, ಶಕುಂತಲಾ ಮತ್ತೊಂದು ಹೊಸ ಕುತಂತ್ರ ಈ ವಾರ ಗಮನ ಸೆಳೆದಿದೆ.
ಇನ್ನು ಐದನೇ ಸ್ಥಾನದಲ್ಲಿ ಸೀತಾ ರಾಮ ಸೀರಿಯಲ್ ಇದೆ. ಸೀತಾ ರಾಮನ ಮದುವೆ ನಿಶ್ಚಯವಾಗಿದೆ. ಇಬ್ಬರ ಎಂಗೇಜ್ಮೆಂಟ್ ಬಹಳ ಅದ್ದೂರಿಯಾಗಿ ನಡೆದಿದೆ. ಮತ್ತೊಂದು ಕಡೆ ಭಾರ್ಗವಿ ಹೊಸ ಹೊಸ ತಂತ್ರಗಳನ್ನು ಮಾಡ್ತಾನೇ ಇದ್ದಾಳೆ. ಸೀತಾ ರಾಮ ಆರಂಭದಲ್ಲಿ ಟಾಪ್ ಎರಡರ ಸ್ಥಾನಕ್ಕೆ ಬಂದಿತ್ತು. ಆದರೆ ಅನಂತರ ಅದರ ಸ್ಥಾನದಲ್ಲಿ ಕುಸಿತ ಕಂಡಿದೆ.