Kannada Serial TRP: ಬದಲಾಯ್ತು ಸೀರಿಯಲ್ ಗಳ ಸ್ಥಾನ, ಸೀತಾರಾಮನ ವಿವಾಹ ಟಾಪ್ ಸೀರಿಯಲ್ ಗಳ ಸ್ಥಾನ ಪಲ್ಲಟ

Written by Soma Shekar

Published on:

---Join Our Channel---

Kannada Serial TRP: ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್ ಗಳು ಶುರುವಾಗ್ತಿದೆ. ಹಳೆ ಸೀರಿಯಲ್ ಗಳ ಜೊತೆಗೆ ಪೈಪೋಟಿಗೆ ಇಳೀತಿವೆ. ಹೊಸ ಕಥೆಗಳ ಮೂಲಕ ಪ್ರೇಕ್ಷಕರ ಮನಸ್ಸನ್ನ ಗೆಲ್ಲುವ ಪ್ರಯತ್ನವನ್ನು ಮಾಡ್ತಿವೆ. ಹೊಸ ಹಳೆ ಧಾರಾವಾಹಿಗಳ ಈ ಪೈಪೋಟಿ ನಡುವೆಯೇ ಈಗ ಜುಲೈ ಎರಡನೇ ವಾರದ ಟಿ ಆರ್ ಪಿ (Kannada Serial TRP) ಹೊರಗೆ ಬಂದಿದ್ದು, ಯಾವ ಸೀರಿಯಲ್ ಯಾವ ಸ್ಥಾನ ಪಡೆದಿದೆ ನೋಡೋಣ ಬನ್ನಿ.

ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳನ್ನು (Puttakkana Makkalu) ಯಾವ ಸೀರಿಯಲ್ ಕೂಡಾ ಹಿಂದೆ ಹಾಕಲು ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ತಿಂಗಳುಗಳಿಂದಲೂ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲೇ ಇದೆ. ಈಗ ಕಥೆಯಲ್ಲಿ ಹೊಸ ತಿರುವು ಅನ್ನೋ ಹಾಗೆ ಸಿಂಗಾರಮ್ಮನ ಎಂಟ್ರಿ ಆಗಿದೆ. ಕಥೆ ಮುಂದೆ ಹೇಗಿರುತ್ತೆ ಅನ್ನೋ ರೋಚಕತೆಯನ್ನು ಈಗ ಮೂಡಿಸಿದೆ.

ಬಹಳಷ್ಟು ಜನ ಕಲಾವಿದರೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಎರಡನೇ ಸ್ಥಾನದಲ್ಲಿದೆ. ಸಿದ್ಧೇಗೌಡ್ರು ಭಾವನಾಗೆ ತಾಳಿ ಕಟ್ಟಿದ್ದು, ಭಾವನಾ ಕೊರಳಲ್ಲಿರೋ ತಾಳಿಯನ್ನ ಲಕ್ಷ್ಮೀ ನೋಡಿದ್ದು ಎಲ್ಲವೂ ಸಹಾ ಕಥೆಯನ್ನ ಆಸಕ್ತಿಕರ ಮಾಡಿದೆ. ಮತ್ತೊಂದು ಕಡೆ ನಿವೃತ್ತಿ ಪಡೆದ ಶ್ರೀನಿವಾಸ್ ಅದನ್ನ ಮನೆಯಲ್ಲಿ ಹೇಳದೇ ಇರೋದು ಸಹಾ ಕುತೂಹಲ ಮೂಡಿಸಿದೆ.

ಈ ವಾರ ಮೂರನೇ ಸ್ಥಾನಕ್ಕೆ ಸೀತಾ ರಾಮ (SeethaRama) ಎಂಟ್ರಿ ಕೊಟ್ಟಿದೆ. ಬಹಳ ದಿನಗಳ ನಂತರ ಸೀತಾರಾಮ ಸೀರಿಯಲ್ ಟಾಪ್ ತ್ರೀ ನಲ್ಲಿ ಸ್ಥಾನ ಪಡೆದಿದೆ. ಸೀತಾ ರಾಮ್ ಮದುವೆ ಸಂಭ್ರಮ, ಭಾರ್ಗವಿ ಹೊಸ ಆಟಕ್ಕೆ ಸಿಹಿ ಗುರಿಯಾಗ್ತಾಳಾ ಅನ್ನೋ ಪ್ರಶ್ನೆಗಳು ಸೀರಿಯಲ್ ಬಗ್ಗೆ ಆಸಕ್ತಿಯನ್ನು ಮೂಡಿಸಿದೆ.

ಕಳೆದ ಕೆಲವು ವಾರಗಳಿಂದ ಮೂರನೇ ಸ್ಥಾನದಲ್ಲಿದ್ದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಈ ವಾರ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಸೀರಿಯಲ್ ನಲ್ಲಿ ನಾಯಕ ಮತ್ತು ನಾಯಕಿಯ ಮನೆಯವರು ಸಾಲಿಗ್ರಾಮಕ್ಕೆ ಹೋಗೋ ಸಿದ್ದತೆ ನಡೆಸಿದ್ದು, ಅಲ್ಲಿ ಕಥೆಯಲ್ಲಿ ಇನ್ನಷ್ಟು ತಿರುವುಗಳು ಮೂಡಿ ಬರೋ ಲಕ್ಷಣಗಳು ಕಂಡಿದ್ದು ಪ್ರೇಕ್ಷಕರು ಸಹಾ ಅದಕ್ಕೆ ಕಾತರರಾಗಿದ್ದಾರೆ.

ಐದನೇ ಸ್ಥಾನದಲ್ಲಿ ಅಮೃತಧಾರೆ (Amruthadhaare) ಸೀರಿಯಲ್ ಇದೆ. ಆಷಾಡದ ಸಂಪ್ರದಾಯ ಅಂತ ಭೂಮಿಕಾ ತವರು ಮನೆಗೆ ಬಂದಿದ್ದರೂ ಸದಾ ಗೌತಮ್ ದೇ ಧ್ಯಾನ ಮಾಡ್ತಿದ್ದಾಳೆ. ಇನ್ನೊಂದು ಕಡೆ ಗೌತಮ್ ಕೂಡಾ ಹೆಂಡತಿಯನ್ನು ಮಿಸ್ ಮಾಡ್ಕೊಳ್ತಾ ಇದ್ದಾರೆ. ಇವರಿಬ್ಬರ ಈ ಪ್ರೀತಿಯನ್ನು ಪ್ರೇಕ್ಷಕರು ಸಹಾ ಖುಷಿಯಿಂದ ಎಂಜಾಯ್ ಮಾಡ್ತಾ ಇದ್ದಾರೆ.

Leave a Comment