Kannada Serial TRP ಕನ್ನಡ ಸೀರಿಯಲ್ ಗಳ ಟಿಆರ್ಪಿ ಯಲ್ಲಿ (Kannada Serial TRP) ಇತ್ತೀಚಿನ ವಾರಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಂಬರ್ ಒನ್ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಸಮಯ ಬದಲಾದ ನಂತರ ಟಾಪ್ ಇದರಿಂದ ಹೊರ ಬಂದಿದೆ. ಇನ್ನು ಕಲರ್ಸ್ ವಾಹಿನಿಯ ಸೀರಿಯಲ್ ಗಳು ಟಾಪ್ ಐದಕ್ಕೆ ಎಂಟ್ರಿ ನೀಡಿ ಅಚ್ಚರಿಯನ್ನು ಮೂಡಿಸಿವೆ.
ಮುನ್ನೂರು ಎಪಿಸೋಡ್ ಗಳನ್ನು ಪೂರ್ತಿ ಮಾಡಿರುವ ಲಕ್ಷ್ಮೀ ನಿವಾಸ (Lakshmi Nivasa) ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಮಯ ಬದಲಾದ ಮೇಲೆ ನಂಬರ್ ಒನ್ ಸ್ಥಾನಕ್ಕೆ ಸೇರಿದ್ದು, ಅದೇ ಸ್ಥಾನವನ್ನು ಉಳಿಸಿಕೊಂಡು, ಈ ವಾರವೂ ಸಹಾ ಲಕ್ಷ್ಮೀ ನಿವಾಸ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಕ್ ಈ ವಾರ ಎರಡನೇ ಸ್ಥಾನಕ್ಕೆ ಬಂದು ಎಲ್ಲರಿಗೂ ಶಾಕ್ ನೀಡಿದೆ. ಕಲರ್ಸ್ ವಾಹಿನಿಯ ಸೀರಿಯಲ್ ಒಂದು ಇತ್ತೀಚಿನ ದಿನಗಳಲ್ಲಿ ಟಾಪ್ ಎರಡಕ್ಕೆ ಬಂದಿರುವುದು ಇದೇ ಮೊದಲು ಎನ್ನಬಹುದಾಗಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ಆರಂಭವಾದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಕಡಿಮೆ ಅವಧಿಯಲ್ಲೇ ಟಾಪ್ ಐದಕ್ಕೆ ಎಂಟ್ರಿ ನೀಡಿದ್ದು, ಈ ವಾರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಿಭಿನ್ನ ಕಥೆಯ ಈ ಸೀರಿಯಲ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ..
ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ (Amruthadhaare) ಸೀರಿಯಲ್ ಇದ್ದು, ಕಥೆಯಲ್ಲಿನ ಇತ್ತೀಚಿನ ಟ್ವಿಸ್ಟ್ ಗಳು ಎಲ್ಲರ ಗಮನವನ್ನು ಸೆಳೆದಿದೆ. ಕಳೆದ ಕೆಲವು ವಾರಗಳಲ್ಲಿ ಟಾಪ್ ಐದರಿಂದ ಹೊರಗೆ ಬಂದಿದ್ದ ಅಮೃತಧಾರೆ ಈಗ ಉತ್ತಮ ಟಿ ಆರ್ ಪಿಯನ್ನು ಪಡೆದುಕೊಳ್ಳುತ್ತಿದೆ.
ಐದನೇ ಸ್ಥಾನದಲ್ಲಿ ಈ ವಾರ ಅಣ್ಣಯ್ಯ (Annayya) ಮತ್ತು ರಾಮಾಚಾರಿ (RAMACHARI) ಎರಡೂ ಸೀರಿಯಲ್ ಗಳು ಇದ್ದು, ಅಣ್ಣಯ್ಯ ಆರಂಭವಾದ ಮೊದಲ ವಾರದಲ್ಲೇ ಟಾಪ್ ಎರಡಕ್ಕೆ ಬಂದಿತ್ತು. ಆದರೆ ಈಗ ಟಿ ಆರ್ ಪಿ ಕಡಿಮೆಯಾಗಿ ಐದನೇ ಸ್ಥಾನಕ್ಕೆ ಬಂದು ಸೇರಿದೆ..
Nagarjuna: ಮೊದಲ ಹೆಂಡ್ತಿ ದೂರಾದ ಒಂದೇ ವರ್ಷದಲ್ಲಿ ನಾಗಾರ್ಜುನ ಆಗಿತ್ತು ಅಮಲಾ ಮೇಲೆ ಲವ್