Kannada Serial TRP: ಮತ್ತೆ ಹಿಂದೆ ಬಿದ್ದ ಪುಟ್ಟಕ್ಕನ ಮಕ್ಕಳು, ಈ ವಾರ ಟಾಪ್ 5 ರಲ್ಲಿರುವ ಸೀರಿಯಲ್ ಗಳು ಇವು

Written by Soma Shekar

Published on:

---Join Our Channel---

Kannada Serial TRP : ವೀಕೆಂಡ್ ಹತ್ರ ಬರ್ತಿದೆ ಅಂದಾಗ ಬಿಗ್ ಬಾಸ್ ಮಾತ್ರವೇ ಅಲ್ಲ, ಕಿರುತೆರೆಯ ಮನರಂಜನೆಯ ಬಹುದೊಡ್ಡ ಮೂಲವಾದ ಸೀರಿಯಲ್ ಗಳ ಟಿ ಆರ್ ಪಿ (Kannada Serial TRP) ಸಹಾ ಹೊರ ಬೀಳುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಯಾವ ಸೀರಿಯಲ್ ಗೆ ಯಾವ ಸ್ಥಾನ ಎನ್ನುವುದು ನಿರ್ಧಾರವಾಗುತ್ತದೆ. ಹಾಗಿದ್ದಲ್ಲಿ ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ಸಿಕ್ಕಿದೆ, ಟಾಪ್ ಐದು ಸೀರಿಯಲ್ ಗಳು ಯಾವುವು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪುಟ್ಟಕ್ಕನ ಮಕ್ಕಳು (Puttakkana Makkalu) ಮತ್ತೆ ಮೊದಲ ಸ್ಥಾನಕ್ಕೆ ಬಂದ ಮೇಲೆ ಲಕ್ಷ್ಮೀ ನಿವಾಸ (Lakshmi Nivasa)ಎರಡು ಮತ್ತು ಮೂರನೇ ಸ್ಥಾನಕ್ಕೂ ಇಳಿದಿತ್ತು. ಆದರೆ ಈ ವಾರ ಲೆಕ್ಕಾಚಾರ ಖಂಡಿತ ಬದಲಾಗಿದೆ. ಲಕ್ಷ್ಮೀ ನಿವಾಸ ಬೇರೆಲ್ಲಾ ಸೀರಿಯಲ್ ಗಳಿಗಿಂತ ಹೆಚ್ಚಿನ ಟಿವಿಆರ್ ಅನ್ನು ಪಡೆದುಕೊಂಡು ಮತ್ತೊಮ್ಮೆ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಇತ್ತೀಚಿಗೆ ಮತ್ತೆ ಟಾಪ್ ಒನ್ ಆಗಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಈ ವಾರ ಟಿ ಆರ್ ಪಿ ಯಲ್ಲಿ ಕಡಿಮೆ ಆಗಿರುವುದರಿಂದ ಎರಡನೇ ಸ್ಥಾನ ಪಡೆದಿದೆ. ಸ್ನೇಹ ಸಾವಿನ ನಂತರ ಕಂಠಿಯ ಕಣ್ಣೀರು ಮತ್ತು ನೋವು ನೋಡಲು ಪ್ರೇಕ್ಷಕರಿಗೆ ಬೇಸರವಾದ ಕಾರಣ ಟಿ ಆರ್ ಪಿ ಇಳಿಕೆ ಕಂಡಿರಬಹುದೆಂದು ಅಂದಾಜಿಸಲಾಗಿದೆ.

ಗೌತಮ್ ದಿವಾನ್ ಮತ್ತು ಭೂಮಿಕಾ ಜೋಡಿಯ ಒಂದು ಅತ್ಯಂತ ಸುಂದರವಾದ ಕಥೆಯೊಂದಿಗೆ, ಬೇರೆ ಸೀರಿಯಲ್ ಗಳಿಗಿಂತ ಭಿನ್ನವಾಗಿ ಕಥೆಯ ವೇಗ ಸಾಗುತ್ತಿರುವ ಅಮೃತಧಾರೆ ಸೀರಿಯಲ್ ಈ ವಾರ ಮೂರನೇ ಸ್ಥಾನ ಪಡೆದಿದೆ. ಹೊಸ ಪಾತ್ರಗಳ ಎಂಟ್ರಿ ಕಥೆಗೆ ಹೊಸ ತಿರುವನ್ನ ನೀಡಿದೆ.

ನಾಲ್ಕನೇ ಸ್ಥಾನದ ವಿಚಾರಕ್ಕೆ ಬಂದರೆ ಶಿವು ಪಾರು ಮತ್ತು ಶಿವನ ನಾಲ್ಕು ಜನ ಸಹೋದರಿಯರ ಕಥೆ ಅಣ್ಣಯ್ಯ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. ಪಾರು ಮತ್ತು ಶಿವು ಜೀವನದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು, ಅದರ ಪರಿಣಾಮವಾಗಿ ನಡೆಯುತ್ತಿರುವ ಘಟನೆಗಳು ಪ್ರೇಕ್ಷಕರ ಗಮನವನ್ನು ಸೆಳೆದಿದೆ.

ಕೆಲವೇ ವಾರಗಳ ಹಿಂದೆ ಟಾಪ್ ಎರಡನೇ ಸ್ಥಾನಕ್ಕೆ ತಲುಪಿದ್ದ ಶ್ರಾವಣಿ ಸುಬ್ರಹ್ಮಣ್ಯ ಈ ವಾರ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಈ ವಾರ ಸೀತಾರಾಮ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಗಳ ಸಂಗಮದ ಎಪಿಸೋಡ್ ಗಳು ಸಹಾ ನಡೆಯುತ್ತಿದ್ದು ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

Aishwarya Rai : ಮಗಳ ಬರ್ತಡೇಗೂ ಬರ್ಲಿಲ್ಲ ಅಭಿಷೇಕ್ ಬಚ್ಚನ್: ಹರಡಿದ್ದ ಸುದ್ದಿಗಳೇ ನಿಜವಾಯ್ತಾ

Leave a Comment