Sreeleela : ಟಾಲಿವುಡ್ ನ ಆ ಸ್ಟಾರ್ ಸಿನಿಮಾಕ್ಕೆ NO ಹೇಳಿ ರಿಜೆಕ್ಟ್ ಮಾಡಿದ ಶ್ರೀಲೀಲಾ; ಶುರುವಾಯ್ತು ಬಿಸಿ ಬಿಸಿ ಚರ್ಚೆ

Written by Soma Shekar

Published on:

---Join Our Channel---

Sreeleela : ಕನ್ನಡದಿಂದ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ನಟಿ ಶ್ರೀಲೀಲಾ (Sreeleela) ಪ್ರಸ್ತುತ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ತನ್ನ ಅಂದ,‌ ಅಭಿನಯ ಮತ್ತು ಡ್ಯಾನ್ಸ್ ಮೂಲಕ ಬಹು ಬೇಡಿಕೆಯ ನಾಯಕಿಯಾಗಿದ್ದಾರೆ. ಈಗ ತೆಲುಗಿನಿಂದ ಬಾಲಿವುಡ್ ಕಡೆಗೆ ಹಾರಲು ನಟಿ ಸಜ್ಜಾಗಿದ್ದಾರೆ.

ಇವೆಲ್ಲವುಗಳ ನಡುವೆ ಈಗ ಶ್ರೀಲೀಲಾ ಕುರಿತಾದ ಒಂದು ಸಖತ್ ಹಾಟ್ ಟಾಪಿಕ್ ಸದ್ದು ಮಾಡಿದೆ.. ಹೌದು,‌ಈ ನಟಿಯು ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಖ್ಯಾತಿಯನ್ನು ಪಡೆದಿರುವ ಹಿರಿಯ ಸ್ಟಾರ್ ನಟ ಚಿರಂಜೀವಿ ಅವರ (Megastar Chiranjeevi) ಸಿನಿಮಾವನ್ನು ರಿಜೆಕ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ನಟ ಚಿರಂಜೀವಿ ಅವರ ಮುಂದಿನ ಪ್ರಾಜೆಕ್ಟ್ ಫ್ಯಾಂಟಸಿ ಸಿನಿಮಾ ವಿಶ್ವಂಭರ ಆಗಿದ್ದು ಈ ಬಿಗ್ ಬಜೆಟ್ ಸಿನಿಮಾದಲ್ಲಿ ಚಿರಂಜೀವಿ ಜೊತೆ ತ್ರಿಷಾ (Trisha), ಆಶಿಕಾ ರಂಗನಾಥ್ (Ashika Ranganath) ಸೇರಿದಂತೆ ಹಲವು ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಶ್ರೀಲೀಲಾ ಮುಂದೆ ಬೇಡಿಕೆ ಇಟ್ಟಿದೆ ಚಿತ್ರತಂಡ.

ಶ್ರೀಲೀಲಾ ಅದಕ್ಕೆ ಒಪ್ಪಿಗೆ ನೀಡಿಲ್ಲ.‌ ವಿಶೇಷ ಹಾಡಿಗೆ ಹೆಜ್ಜೆಯನ್ನು ಹಾಕಲು ನಟಿಗೆ ದುಬಾರಿ ಸಂಭಾವನೆ ನೀಡುವ ಆಫರ್ ಕೊಟ್ಟರೂ ನಟಿ ಅದನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ. ‌

Leave a Comment