Radhika Kumaraswamy: 34 ಸಿನಿಮಾಗಳಲ್ಲಿ ನಟಿಸಿದ ನಟಿಯ ಆಸ್ತಿ ಎಷ್ಟಿದೆ ಗೊತ್ತಾ? ಸ್ಟಾರ್ ನಟಿಯರಿಗೇ ಶಾಕ್

Written by Soma Shekar

Published on:

---Join Our Channel---

Radhika Kumaraswamy: ಸಿನಿಮಾ ರಂಗದ ಸುಂದರವಾದ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ಒಬ್ಬರಾಗಿದ್ದಾರೆ. ಇವರು ನಟಿ ಮಾತ್ರವೇ ಅಲ್ಲದೇ ನಿರ್ಮಾಪಕಿಯಾಗಿಯೂ ಈಗಾಗಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಅಪರೂಪಕ್ಕೆ ಎನ್ನುವಂತೆ ಸಿನಿಮಾಗಳಲ್ಲಿ ನಟಿಸಿದರೂ ಒಂದಲ್ಲಾ ಒಂದು ವಿಚಾರವಾಗಿ ನಟಿ ಆಗಾಗ ಸುದ್ದಿಯಾಗುತ್ತಾರೆ. ನಟಿ ಸಿನಿಮಾ ರಂಗದಿಂದ ಅಂತರವನ್ನ ಕಾಯ್ದುಕೊಂಡು ಬರುತ್ತಿದ್ದರೂ ಅವರನ್ನು ಅಭಿಮಾನಿಸುವವರ ಸಂಖ್ಯೆ ಮಾತ್ರ ಕಡಿಮೆ ಏನಿಲ್ಲ.

ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ಸಿನಿಮಾರಂಗಕ್ಕೆ ನಿನಗಾಗಿ ಸಿನಿಮಾದ ಮೂಲಕ 2002ರಲ್ಲಿ ವಿಜಯ ರಾಘವೇಂದ್ರ (Vijaya Raghavendra) ಅವರಿಗೆ ನಾಯಕಿಯಾಗಿ ಎಂಟ್ರಿಯನ್ನ ನೀಡಿ, ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಮತ್ತು ಬೇಡಿಕೆಯನ್ನು ಪಡೆದುಕೊಂಡರು. ಸಿನಿಮಾಗಳು ಮತ್ತು ಬ್ಯುಸಿನೆಸ್ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಈ ನಟಿ ಕೋಟಿಗಳ ಒಡತಿ ಎನ್ನುವುದು ಜನರ ಮಾತಾಗಿದೆ.

ಖಾಸಗಿ ಕನ್ನಡ ಪೋರ್ಟಲ್ ಒಂದರ ಸುದ್ದಿಯ ಪ್ರಕಾರ ನಟನೆ, ನಿರ್ಮಾಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿಯ ಮೌಲ್ಯ 124 ಕೋಟಿ ರೂಪಾಯಿಗಳು ಎಂಬುದಾಗಿ ಹೇಳಲಾಗಿದೆ. ಇದು ಅಧಿಕೃತವಾದ ಮಾಹಿತಿ ಹೌದೋ, ಅಲ್ಲವೋ ಆದರೂ ರಾಧಿಕಾ ಅವರ ಲೈಫ್ ಸ್ಟೈಲ್ ಮಾತ್ರ ಐಶಾರಾಮಿಯಾಗಿದೆ ಅನ್ನೋದ್ರಲ್ಲಿ ಖಂಡಿತ ಅನುಮಾನವಿಲ್ಲ.

ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಬೈರಾದೇವಿ ಹಾಗೂ ಅಜಾಗೃತ ಎನ್ನುವ ಎರಡು ಸಿನಿಮಾಗಳನ್ನ ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವರ್ಷಗಳು ಕಳೆದರೂ ಯುವ ನಟಿಯರನ್ನು ನಾಚಿಸುವಂತಹ ಅಂದ ಮತ್ತು ಅಭಿನಯದ ಮೂಲಕ ಇಂದಿಗೂ ಅಸಂಖ್ಯಾತ ಸಿನಿ ಪ್ರೇಮಿಗಳ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ.

Leave a Comment