Pranitha Subhash: ಫ್ಯಾಂಟ್ ಫಿಟ್ ಆಗ್ತಿಲ್ಲಾ ಅಂತಾನೇ ಸಿಹಿ ಸುದ್ದಿ ಕೊಟ್ಟ ಪ್ರಣೀತಾ ಸುಭಾಷ್; 2ನೇ ಮಗು ನಿರೀಕ್ಷೆಯಲ್ಲಿ ನಟಿ

Written by Soma Shekar

Published on:

---Join Our Channel---

Pranitha Subhash: ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಏಪ್ರಿಲ್ ನಲ್ಲಿ ತಮ್ಮ ಮಗಳ ಎರಡನೇ ಜನ್ಮದಿನವನ್ನು ಖುಷಿಯಿಂದ ಸಂಭ್ರಮಿಸಿದ್ದರು. ಈಗ ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ನಟಿ ಬಹಳ ಖಾಸಗಿಯಾಗಿ ನಡೆದ ಮದುವೆಯಲ್ಲಿ ಪ್ರಣೀತಾ ಅವರು ಉದ್ಯಮಿ ನಿತಿನ್ ರಾಜು ಅವರೊಡನೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ನಟಿ ಕೂಡಾ ತಮ್ಮ ಖಾಸಗಿ ಜೀವನದ ವಿಷಯಗಳನ್ನು ಆದಷ್ಟು ಖಾಸಗಿಯಾಗಿಯೇ ಇರಿಸಿದ್ದಾರೆ.

ಬಹುಭಾಷಾ ನಟಿಯಾಗಿರುವ ಪ್ರಣೀತಾ ಅವರು ಇತ್ತೀಚಿಗೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲವಾದರೂ ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಸಕ್ರಿಯರಾಗಿದ್ದು, ಆಗಾಗ ಕೆಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ‌

ಪ್ರಣೀತಾ ಅವರು ರಾಮನ ಅವತಾರ, ತಂಕಮಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 2021 ರಲ್ಲಿ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ ಅನಂತರ ಹೊಸ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅದಾದ ನಂತರ ಅವರು ಈ ವರ್ಷ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಈಗ ಇವೆಲ್ಲವುಗಳ ನಡುವೆ ಪ್ರಣೀತಾ ಅವರು ತಾವು ಮತ್ತೆ ತಾಯಿಯಾಗುವ ವಿಷಯವನ್ನು ತಮ್ಮ ಹೊಸ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರೊಡನೆ ಹಂಚಿಕೊಂಡಿದ್ದಾರೆ. ನೆಟ್ಟಿಗರ ಇದನ್ನು ನೋಡಿ ನಟಿಗೆ ಶುಭ ಕೋರಿದ್ದಾರೆ.‌

ಪ್ರಣೀತಾ ಫೋಟೋಗಳನ್ನ ಶೇರ್ ಮಾಡಿ ರೌಂಡ್ 2, ಪ್ಯಾಂಟ್ ಈಗ ಫಿಟ್ ಆಗ್ತಿಲ್ಲ ಅಂತ ಬರ್ಕೊಂಡಿದ್ದಾರೆ. ನಟಿಯ ಬೇಬಿ ಬಂಪ್ ಫೋಟೋಗಳನ್ನ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ನಟಿಯು ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.

Parul Yadav: ಸೀರೆಯನ್ನು ಹೀಗೂ ಉಡಬಹುದಾ? ಪಾರುಲ್ ಗ್ಲಾಮರಸ್ ಲುಕ್, ಸ್ಟೈಲ್ ಗೆ ನಿದ್ದೆಗೆಟ್ಟ ಪಡ್ಡೆಗಳು

Leave a Comment