Jyothi Rai: ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಅಶ್ಲೀಲ ವೀಡಿಯೋ ವೈರಲ್; ಸೋಶಿಯಲ್ ಮೀಡಿಯಾದಲ್ಲಿ ಸಂಚಲನ

Written by Soma Shekar

Published on:

---Join Our Channel---

Jyothi Rai: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿರುವ, ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ಮತ್ತು ವೆಬ್ ಸೀರೀಸ್ ಗಳಲ್ಲಿ ಸಕ್ರಿಯವಾಗಿರುವ ನಟಿ ಜ್ಯೋತಿರೈ (Jyothi Rai) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯ ರಾಗಿದ್ದಾರೆ. ನಟಿಯು ಆಗಾಗ ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮಾದಕತೆಯನ್ನು ಪ್ರದರ್ಶಿಸುತ್ತಾ, ನೆಟ್ಟಿಗರ ಮನಸ್ಸಿಗೆ ಮೋಡಿ ಮಾಡುವುದು ಮಾತ್ರವೇ ಇಲ್ಲದೆ ಪಡ್ಡೆಗಳ ಹೃದಯದಲ್ಲಿ ಕಿಚ್ಚನ್ನು ಹೊತ್ತಿಸುತ್ತಾರೆ.

ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಕೆಲವೊಂದು ಅಶ್ಲೀಲ ಎನ್ನುವಂತಹ ಫೋಟೋಗಳು ಶೇರ್ ಆಗುತ್ತಿವೆ. ಅಲ್ಲದೇ ನಟಿಯ ಅಶ್ಲೀಲ ವಿಡಿಯೋಗಳು ಲೀಕ್ ಆಗಿದೆ ಎಂದೂ, ಅವುಗಳನ್ನು ಶೀಘ್ರದಲ್ಲಿಯೇ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುತ್ತೇವೆ ಎಂದು ನಟಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಹಂಚಿಕೊಳ್ಳುವ ಮೂಲಕ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದಾರೆ.

ಸೀರಿಯಲ್ ಗಳಲ್ಲಿ ನಟಿಯು ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನು ಮಾಡುವ ಮೂಲಕ ಕನ್ನಡ ಮತ್ತು ತೆಲುಗು ಎರಡೂ ಕಡೆ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಹೆಸರು ಮತ್ತು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ನಟಿಯ ಎರಡನೇ ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದನ್ನ ಮಾಡಿತ್ತು. ತೆಲುಗಿನ ನಿರ್ದೇಶಕನ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡ ಫೋಟೋಗಳನ್ನು ಶೇರ್ ಮಾಡಿಕೊಂಡು ಶೀಘ್ರದಲ್ಲಿ ಸಪ್ತಪದಿ ತುಳಿಯುವ ಸುಳಿವನ್ನು ಕೊಟ್ಟಿದ್ದರು ನಟಿ.

ಇವೆಲ್ಲವುಗಳ ಬೆನ್ನಲ್ಲೇ ಈಗ ನಟಿಯ ಅಶ್ಲೀಲ ವಿಡಿಯೋಗಳು ಲೀಕಾಗಿದೆ ಅಂತ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾ ವೇದಿಕೆಯಾದ ಎಕ್ಸ್ ನಲ್ಲಿ EDIT_BY_ABHi ಎನ್ನುವ ಹೆಸರಿನ ಖಾತೆಯಲ್ಲಿ ನಟಿಯ ಫೋಟೋಗಳನ್ನ ಶೇರ್ ಮಾಡಲಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ಗೆ ಒಂದು ಸಾವಿರ ಜನ ಸಬ್ ಸ್ಕ್ರೈಬರ್ ಆದ ಕೂಡಲೇ ನಟಿಯ ವಿಡಿಯೋವನ್ನು ಅಪ್ಲೋಡ್ ಮಾಡುತ್ತೇವೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಜ್ಯೋತಿ ರೈಗೆ (Jyothi Rai Videos) ಸಂಬಂಧಪಟ್ಟಂತಹ ವಿಡಿಯೋ ತಮ್ಮ ಬಳಿ ಇದೆ ಎಂದೂ, ಅದರಲ್ಲಿನ ಸ್ಕ್ರೀನ್ ಶಾಟ್ ಗಳನ್ನು ಕೂಡಾ ಪೋಸ್ಟ್ ಮಾಡಿರುವುದು ಗಮನಾರ್ಹವಾಗಿದೆ. ವಾಟ್ಸಪ್ ನಲ್ಲಿಯೂ ಈಗ ತೆಲುಗು ರಾಜ್ಯಗಳಲ್ಲಿ ನಟಿಯ ಫೋಟೋಗಳು ಹರಿದಾಡಲು ಶುರುವಾಗಿದೆ. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಸಿಟಿ ಪೊಲೀಸರನ್ನು ಟ್ಯಾಗ್ ಮಾಡಿ ಈ ಬಗ್ಗೆ ಗಮನ ನೀಡಬೇಕೆಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಆದರೆ ಈ ವಿಚಾರವಾಗಿ ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಜ್ಯೋತಿ ರೈ ಅವರು ತೆಲುಗು ಸಿನಿಮಾ ನಿರ್ದೇಶಕ ಸುಕು ಪೂರ್ವಜ್ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಅವರು 20ನೇ ವಯಸ್ಸಿಗೆ ಮೊದಲ ಮದುವೆಯನ್ನು ಆಗಿದ್ದರು. ಆದರೆ ಅನಂತರ ವಿಚ್ಛೇದನವನ್ನು ಪಡೆದು ಪತಿಯಿಂದ ನಟಿ ದೂರಾಗಿದ್ದರು. ನಟಿಗೆ 11 ವರ್ಷದ ಒಬ್ಬ ಮಗ ಕೂಡಾ ಇದ್ದಾನೆ. ಈಗ ನಟಿಯ ಕುರಿತಾದ ವಿಡಿಯೋಗಳು ಮತ್ತು ಫೋಟೋಗಳ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಅನೇಕರಿಗೆ ಶಾಕ್ ನೀಡಿದೆ. ಈ ಫೋಟೋಗಳಲ್ಲಿ ಇರುವುದು ಅವರೇನ ಅಥವಾ ಬೇರೆಯವರ ಅನ್ನೋದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

Leave a Comment