Jyothi Rai: ಕನ್ನಡ ನಟಿ ಜ್ಯೋತಿ ರೈ (Jyothi Rai) ಅವರು ಸದ್ಯಕ್ಕೆ ತೆಲುಗು ಕಿರುತೆರೆಯಲ್ಲಿ ಹಾಗೂ ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೋತಿ ರೈ ಅವರು ಕನ್ನಡ ಸೀರಿಯಲ್ ಗಳು ಮತ್ತು ಸಿನಿಮಾಗಳಲ್ಲಿ ಸಹಾ ನಟಿಸಿದ್ದಾರೆ. ಪ್ರಸ್ತುತ ನಟಿ ತೆಲುಗಿನಲ್ಲೇ (Tollywood) ಹೆಚ್ಚು ಸಕ್ರಿಯರಾಗಿದ್ದು, ನಟಿ ತಮ್ಮ ಸಿನಿಮಾ, ಸೀರಿಯಲ್ ಗಳ ವಿಚಾರಕ್ಕಿಂತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ.
ಜ್ಯೋತಿ ರೈ ಅವರು ತಮ್ಮ ಖಾಸಗಿ ಜೀವನದ ವಿಚಾರವಾಗಿಯೂ ಸಾಕಷ್ಟು ಸುದ್ದಿಯಾಗಿದ್ದಾರೆ. ನಟಿ ತೆಲುಗಿನ ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆಗೆ ಮದುವೆಯಾಗಿದ್ದಾರೆ ಎನ್ನುವುದು ಅವರ ಸೋಶಿಯಲ್ ಮೀಡಿಯಾ ಫೋಟೋಗಳಿಂದಲೇ ತಿಳಿಯುತ್ತದೆ.ಕೆಲವೇ ದಿನಗಳ ಹಿಂದೆ ನಟಿಯದ್ದು ಎನ್ನಲಾದ ಒಂದಷ್ಟು ಫೋಟೋಗಳು, ವೀಡಿಯೋಗಳು ವೈರಲ್ ಆಗಿದ್ದವು.
ನಟಿ ಈ ವಿಚಾರವಾಗಿ ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು. ಈಗ ಇವೆಲ್ಲವುಗಳ ಬೆನ್ನಲ್ಲೇ ನಟಿಯು ತಮಗೆ ಕೆಟ್ಟ ಮೆಸೆಜ್ ಗಳನ್ನು ಕಳುಹಿಸುವವರನ್ನು ಬ್ಲಾಕ್ ಮಾಡಿರುವುದಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ಮತ್ಯಾರಿಗೋ ಟಾಂಗ್ ಕೊಡೋ ತರ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗಾದರೆ ಜ್ಯೋತಿ ರೈ ಅವರ ಪೋಸ್ಟ್ ನಲ್ಲಿ ಏನಿದೆ ??
ಇನ್ಸ್ಟಾಗ್ರಾಂ ನ (Instagram) ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದುಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ.
ಧನಾತ್ಮಕ ಪರಿಸರವನ್ನು ರಚನೆ ಮಾಡಲು ನೀವೂ ಇಂಥ ಟೂಲ್ಗಳನ್ನು ಬಳಸಿಕೊಳ್ಳಿ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕೆಟ್ಟ ಮೆಸೆಜ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ದೊಡ್ಡ ಸುದ್ದಿಯಾಗಿರುವಾಗ ಜ್ಯೋತಿ ರೈ ಅವರ ಪೋಸ್ಟ್ ಗಮನ ಸೆಳೆದಿದೆ.
Varamahalakshmi Festival : ನಾಳೆ ಶ್ರೀ ಲಕ್ಷ್ಮಿಯನ್ನು ಪೂಜಿಸುವ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ