Jyothi Rai: ಇದು ರಿಯಲ್ ವೀಡಿಯೋ, ವೈರಲ್ ಮಾಡೋ ಧಮ್ಮು ಇದ್ಯಾ? ಜ್ಯೋತಿರೈ ಓಪನ್ ಸವಾಲ್

Written by Soma Shekar

Published on:

---Join Our Channel---

Jyothi Rai: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಜ್ಯೋತಿರೈ (Jyothi Rai) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ (abscene video) ವೈರಲ್ ಆಗುವ ಮೂಲಕ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ವಿಚಾರವಾಗಿ ಎಲ್ಲಾ ಕಡೆಯಲ್ಲೂ ಸಾಕಷ್ಟು ಸುದ್ದಿಗಳು ಹರಿದಾಡುವ ವೇಳೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿರೈ ಅವರು ಇನ್ನಷ್ಟು ಆಕ್ಟಿವ್ ಆಗಿದ್ದು, ಅಕ್ಷಯ ತೃತೀಯದ ದಿನದಂದು ಕೆಲವೊಂದು ಹೊಸ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದೇ ವೇಳೆ ನಟಿಯು ತಮ್ಮದೆಂದು ಹೇಳಲಾಗಿರುವ ವಿಡಿಯೋಗಳನ್ನು ವೈರಲ್ ಮಾಡಿರುವ ವ್ಯಕ್ತಿಗಳಿಗೆ ನೇರವಾಗಿ ಸವಾಲನ್ನು ಹಾಕಿದ್ದಾರೆ. ನಟಿಯು ತಾವು ಶೇರ್ ಮಾಡಿಕೊಂಡಿರುವ ವಿಡಿಯೋದ ಕುರಿತಾಗಿ ಕೆಲವು ಸಾಲುಗಳನ್ನು ಬರೆದುಕೊಂಡು, ಈ ವೀಡಿಯೋವನ್ನು ವೈರಲ್ ಮಾಡಿದ ಧೈರ್ಯ ನಿಮ್ಮಲ್ಲಿ ಇದೆಯಾ, ಇದು ನಿಜವಾದ ವೀಡಿಯೋ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಕೆಳಗಿನ ಸಾಲು ಕೆಲವು ಹತಾಶ, ಕೆಲಸವಿಲ್ಲದ, ಅಶಿಕ್ಷಿತ ಟೈಮ್ ಪಾಸ್ ಚಿಲ್ಲರೆ ವ್ಯಕ್ತಿಗಳಿಗೆ ಎಂದು ಹೇಳಿದ್ದಾರೆ.

ಜಗತ್ತು ಶಾಡೋಗಳನ್ನು ಶ್ಯಾಡೋಗಳನ್ನು ಎಸೆದಾಗ, ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ಕತ್ತಲೆ ನನ್ನ ಬೆಳಕಿಗೆ ಇಂಧನವನ್ನು ತುಂಬುತ್ತದೆ. ನಿರಾಶವಾದದ ಬೂದಿಯಿಂದ ಸಾಧ್ಯತೆಯ ಫಿನಿಕ್ಸ್ ಮೇಲೆ ಏರುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು, ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹಾರುತ್ತೇನೆ ಎಂದು ಸ್ಪೂರ್ತಿದಾಯಕ ವಾಕ್ಯಗಳನ್ನ ಬರೆದುಕೊಂಡಿದ್ದಾರೆ ಜ್ಯೋತಿರೈ ಅವರು.

ಇಷ್ಟಕ್ಕೂ ಜ್ಯೋತಿರೈ ಅವರು ಹಂಚಿಕೊಂಡಿರುವ ವೀಡಿಯೋ ಯಾವುದು ಎನ್ನುವುದಾದರೆ, ಕೆಲವೇ ದಿನಗಳ ಹಿಂದೆಯಷ್ಟೇ ಹಣಕಾಸು ಸಮಸ್ಯೆಯಿಂದ ದಿನಗೂಲಿ ಕಾರ್ಮಿಕನಾಗಿ ಕೆಲಸವನ್ನು ಮಾಡುತ್ತಿರುವ ಪದ್ಮಶ್ರೀ ವಿಜೇತ ಕಿನ್ನಾರ ಮೊಗಳಯ್ಯ (Kinnara Mogalayya) ಅವರಿಗೆ ಜ್ಯೋತಿ ರೈ ಅವರು ಧನಸಹಾಯವನ್ನು ಮಾಡಿದ್ದಾರೆ. ಇದರ ಕುರಿತಾದ ವಿಡಿಯೋವನ್ನು ಅವರು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಕ್ಷಯ ತೃತೀಯದ ಶುಭದಿನದಂದು, ಜನಪ್ರಿಯತೆಯ ಹೊರತಾಗಿಯೂ ವೈಯಕ್ತಿಕವಾಗಿ ಮತ್ತು ವೃತ್ತಿ ಪರವಾಗಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಪದ್ಮಶ್ರೀ ಕಿನ್ನಾರ ಮೊಗಳಯ್ಯ ಅವರಿಗೆ 50,000ಗಳ ಆರ್ಥಿಕ ನೆರವನ್ನು ನೀಡಿದ್ದೇನೆ. ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅವರ ಹೋರಾಟದ ಬಗ್ಗೆ ನನ್ನ ಪಿಆರ್ ಮಾಹಿತಿ ನೀಡಿದರು. ನಾನು ಪ್ರಸ್ತುತ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದೇನೆ ಆದರೂ ನನ್ನೊಳಗಿನ ಬೆಳಕು ಅವರನ್ನು ತಲುಪಲು ತಕ್ಷಣವೇ ಪ್ರೇರೇಪಿಸಿತು.

ಊಟದ ವ್ಯವಸ್ಥೆಯನ್ನು ಮಾಡಿ ದೇಣಿಗೆ ನೀಡಿದೆ. ಅವರ ಕಲೆಗೆ ಬೆಂಬಲವನ್ನು ನೀಡುತ್ತಿದ್ದೇನೆ. ನಾನು ಇನ್ನೂ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ. ಆದರೆ ಈಗ ನನ್ನ ಕೈಲಾದಷ್ಟು ಮಾಡಿದ್ದೇನೆ. ಬೇರೆ ಯಾರಾದರೂ ಅವರನ್ನು ಬೆಂಬಲಿಸಲು ಬಯಸಿದರೆ ನಾವು ಒಟ್ಟಾಗಿ ಸಹಾಯ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಮೊಗಳಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಸಹಾಯ ಮಾಡಿದ ವಿಡಿಯೋವನ್ನು ಜ್ಯೋತಿರೈ ಹಂಚಿಕೊಂಡಿದ್ದು, ಇದನ್ನು ವೈರಲ್ ಮಾಡೋ ಧೈರ್ಯ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

Leave a Comment