Olympics: ಬೆಂಗಳೂರು ನಗರಕ್ಕಿಂತ ಚಿಕ್ಕ ದೇಶ, ಬಾಲ್ಯದಿಂದ ಸಂಘರ್ಷ, ಇಂದು ಬಂಗಾರದ ಪದಕ ವಿಜೇತೆ

Written by Soma Shekar

Published on:

---Join Our Channel---

Olympics: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ (Olympics) ಹಲವು ದೇಶಗಳ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ವಿಶ್ವದ ಮುಂದೆ ಪ್ರದರ್ಶನ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯೂ ಕೂಡಾ ತಮ್ಮ ದೇಶಕ್ಕಾಗಿ ಪದಕವನ್ನು ಗೆಲ್ಲುವ ಮೂಲಕ ತಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸುವುದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಿದ್ದಾರೆ.

ಈ ವೇಳೆಯಲ್ಲಿ ಶನಿವಾರ ನಡೆದಂತಹ ಮಹಿಳೆಯರ 100 ಮೀಟರ್ ಓಟದಲ್ಲಿ ಅಮೇರಿಕಾದ ಶಾ ಕ್ಯಾರಿ ರಿಚರ್ಡ್ಸನ್ ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ ಎನ್ನುವುದಾಗಿ ಎಲ್ಲರ ಊಹೆ ಮಾಡಿದ್ದರು. ಆದರೆ ಎಲ್ಲರ ಊಹೆ ಮತ್ತು ನಿರೀಕ್ಷೆಗಳನ್ನು ಮತ್ತೊಬ್ಬ ಆಟಗಾರ್ತಿ ಸುಳ್ಳು ಮಾಡುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ.

ಹೌದು ಕೆರೆಬಿಯನ್ ನಲ್ಲಿರುವ ಒಂದು ಸಣ್ಣ ದೇಶ ಸೇಂಟ್ ಲೂಸಿಯಾ. ಉತ್ತರ ಅಮೆರಿಕ ಖಂಡದ ಈ ಪೂರ್ವ ಕೆರೆಬಿಯನ್ ಬಹಳ ಚಿಕ್ಕದಾಗಿದೆ. ವಿಶ್ವ ಭೂಪಟದಲ್ಲಿ ಈ ದೇಶವನ್ನು ಹುಡುಕುವುದು ಕೂಡ ಸುಲಭವಾದ ಕೆಲಸವೇನಲ್ಲ.‌ ಈ ದೇಶ ಈ ಹಿಂದೆ ಪದಕ ಗೆಲ್ಲುವುದರಲಿ, ಒಲಂಪಿಕ್ಸ್ ನಲ್ಲಿ ಇಲ್ಲಿನ ಯಾವ ಕ್ರೀಡಾಪಟು ಭಾಗವಹಿಸಿರಲಿಲ್ಲ.

ಆದರೆ ಈಗ ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ (Julian Alfred) ಅಚ್ಚರಿಯನ್ನ ಮೂಡಿಸುವ ಮೂಲಕ 100 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು, ಸೇಂಟ್ ಲೂಸಿಯಾ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ 33ನೇ ಸ್ಥಾನಕ್ಕೆ ಏರಿದೆ. ಚಿಕ್ಕ ದೇಶವಾಗಿರುವ ಸೇಂಟ್ ಲೂಸಿಯಾದಿಂದ ಬಂದ ಈ ಕ್ರೀಡಾಪಟುವಿನ ಸಾಧನೆಗೆ ಅಪಾರ ಮೆಚ್ಚುಗೆಗಳು ಹರಿದು ಬರುತ್ತಿವೆ.

ಜೂಲಿಯನ್ ಆಲ್ಫ್ರೆಡ್ ಬಾಲ್ಯ ಬಹಳ ಸಂಘರ್ಷಗಳಿಂದ ಕೂಡಿತ್ತು. 12 ವರ್ಷ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡ ಅವರು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಜಮೈಕಾದಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 2018ರಲ್ಲಿ ಬ್ಯೂನೆಸ್ ಐರಿಸ್ ನಲ್ಲಿ ನಡೆದ ಯೂತ್ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವ ವೇಳೆಯಲ್ಲಿ ಅವರ ಚಿಕ್ಕಮ್ಮ ನಿಧನರಾದರು.

ಜೂಲಿಯನ್ ಯೂತ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಚಿಕ್ಕಮ್ಮನ ಸಾವಿನ ಆಘಾತದಿಂದ ತುಂಬಾ ನೋವು ಪಟ್ಟ ಜೂಲಿಯನ್ ಎರಡು ವರ್ಷಗಳ ಕಾಲ ಅಥ್ಲೆಟಿಕ್ಸ್ ನಿಂದ ದೂರ ಉಳಿದಿದ್ದರು. ಈಗ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Allu Arjun: ಭೂಕುಸಿತ ಸಂತ್ರಸ್ತರಿಗಾಗಿ ಮಿಡಿದ ಅಲ್ಲು ಅರ್ಜುನ್; 25 ಲಕ್ಷ ನೀಡಿ ಹೇಳಿದ್ದು ಅರ್ಥಪೂರ್ಣ ಮಾತು

Leave a Comment