Jr. NTR ಕಾಂತಾರ 1 ನಲ್ಲಿ ಜೂ. ಎನ್ ಟಿ ಆರ್ ? ಮಾದ್ಯಮಗಳ ಮುಂದೆಯೇ ಸ್ಪಷ್ಟ ಮಾಹಿತಿಯನ್ನು ನೀಡಿದ ನಟ

Written by Soma Shekar

Published on:

---Join Our Channel---

Jr. NTR : ಟಾಲಿವುಡ್ ನಟ ಜೂ. ಎನ್ ಟಿ ಆರ್ (Jr. NTR) ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು ಉಡುಪಿ, ಕೊಲ್ಲರೂ ಹೀಗೆ ಪುಣ್ಯಕ್ಷೇತ್ರಗಳಿಗೆ ಭೇಟಿಯನ್ನು ನೀಡುತ್ತಾ ದೇವರ ದರ್ಶನವನ್ನು ಮಾಡುತ್ತಿದ್ದು, ಡಿವೈನ್ ಸ್ಟಾರ್ ಖ್ಯಾತಿಯ ನಟ ರಿಷಬ್ ಶೆಟ್ಟಿ (Rishab Shetty) ಅವರು ಜೂ.ಎನ್ ಟಿ ಆರ್ ಅವರಿಗೆ ಸಾಥ್ ನೀಡಿದ್ದು, ಇಬ್ಬರೂ ಜೊತೆಯಾಗಿ ದಿವ್ಯಧಾಮಗಳಿಗೆ ಭೇಟಿ ನೀಡಿದ ಫೋಟೋಗಳು, ವೀಡಿಯೋಗಳು ವೈರಲ್ ಆಗ್ತಿದೆ.

ಈ ವೇಳೆ ಮಾದ್ಯಮಗಳ ಮುಂದೆ ಜೂ.ಎನ್ ಟಿ ಆರ್ ನಾಗೇಶರಾವ್ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ವಿಶೇಷವೆಂದರೆ ಅವರು ಬಹಳ ಅಚ್ಚುಕಟ್ಟಾಗಿ ಕನ್ನಡದಲ್ಲೇ ಮಾತನಾಡಿ, ಕನ್ನಡದಲ್ಲೇ ಮಾದ್ಯಮಗಳ ಪ್ರಶ್ನೆಗೆ ಉತ್ತರ ನೀಡುತ್ತಾ ಜನರ ಮನಸ್ಸನ್ನು ಗೆದ್ದಿದ್ದಾರೆ.

ಈ ವೇಳೆ ಮಾದ್ಯಮಗಳು ಕಾಂತಾರ ಚಾಪ್ಟರ್ (Kantara 1) ಒನ್ ನಲ್ಲಿ ನೀವು ನಟಿಸುತ್ತೀರೆನ್ನುವ ಸುದ್ದಿಗಳಿವೆ ಅದರ ಬಗ್ಗೆ ಏನು ಹೇಳ್ತೀರಾ ಎಂದು ಜೂ. ಎನ್ ಟಿ ಆರ್ ಅವರನ್ನು ಪ್ರಶ್ನೆ ಮಾಡಲಾಗಿದೆ. ಈ ವೇಳೆ ಅವರು ದೇವಸ್ಥಾನದಲ್ಲಿ ಸಿನಿಮಾ ವಿಚಾರಗಳ ಬಗ್ಗೆ ಮಾತನಾಡೋದು ಬೇಡ ಎನ್ನುತ್ತಲೇ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ಕಾಂತಾರ ಸಿನಿಮಾದಲ್ಲಿ ನಟಿಸುವ ಬಗ್ಗೆ ರಿಷಬ್ ಶೆಟ್ಟಿ ಅವರೇ ಪ್ಲಾನ್ ಮಾಡಬೇಕು, ಒಂದು ವೇಳೆ ಅವರು ಅವಕಾಶ ಕೊಟ್ಟರೆ ನಾನು ನಟಿಸೋದಕ್ಕೆ ಸದಾ ಸಿದ್ಧವಾಗಿರ್ತೀನಿ ಎನ್ನುವ ಮಾತುಗಳನ್ನ ಜೂ. ಎನ್ ಟಿ ಆರ್ ಅವರು ಹೇಳುವ ಮೂಲಕ ಮಾದ್ಯಮಗಳಲ್ಲಿ ಹರಡಿದ್ದ ಸುದ್ದಿಗಳಿಗೆ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.

BBK 11 : ಬೆಂಕಿ ಬಿರುಗಾಳಿಯ ಸುಳಿವು, ಕಿಚ್ಚನ ನಿರೂಪಣೆ ಪಕ್ಕಾ, ಬಿಡುಗಡೆ ಆಯ್ತು ಬಿಗ್ ಬಾಸ್ 11ರ ಪ್ರೊಮೋ

Leave a Comment