Jr NTR ಸಂಭ್ರಮದಿ ನಡೆದ Jr.NTR ಸಿನಿಮಾ ಮುಹೂರ್ತ, ಕೊನೆಗೂ ಪ್ರಶಾಂತ್ ನೀಲ್ ಸಿನಿಮಾ ಅಪ್ಡೇಟ್ ಹೊರ ಬಂತು

Written by Soma Shekar

Published on:

---Join Our Channel---

Jr. Ntr : ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ. ಎನ್‌ ಟಿ ಆರ್ (Jr.Ntr) ಕಾಂಬಿನೇಷನ್‌ನ ಹೊಸ ಸಿನಿಮಾ ಘೋಷಣೆ ಯಾಗಿ ಬಹಳ ಸಮಯ ಕಳೆದರೂ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಹೌದು, ಈ ಹೊಸ ಸಿನಿಮಾದ ಮುಹೂರ್ತ ಹೈದರಾಬಾದ್‌ನಲ್ಲಿ ಸರಳವಾಗಿ ನಡೆದಿದೆ.

‘ದೇವರ’ (Devara Film) ಸಿನಿಮಾ ನಂತರ ಈಗ ಎನ್ ಟಿ ಆರ್ ಅವರ ಹೊಸ ಸಿನಿಮಾಕ್ಕೆ ಅಧಿಕೃತ ಚಾಲನೆ‌ ದೊರೆತಿದೆ. ಹೈದ್ರಾಬಾದ್ ನಲ್ಲಿರುವ ರಾಮಾನಾಯ್ಡು ಸ್ಟಡಿಯೋದಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆದಿದೆ.‌ ಇದು ಜೂ.ಎನ್ ಟಿ ಆರ್ ಅವರ ವೃತ್ತಿ ಜೀವನದಲ್ಲಿ 31 ನೇ ಸಿನಿಮಾ ಆಗಿದೆ.

ಈ ಸಿನಿಮಾವನ್ನು 2026ರ ಜನವರಿ 9ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ‌ ಘೋಷಣೆ ಮಾಡಿದೆ. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಎನ್ನಲಾಗಿದೆ. ‌ನಾಯಕಿಯ ಕುರಿತಾಗಿ ಚಿತ್ರತಂಡ‌ ಅಧಿಕೃತ ಮಾಹಿತಿಯನ್ನು ತಿಳಿಸಬೇಕಾಗಿದೆ.

ಪ್ರಶಾಂತ್ ನೀಲ್ ಮತ್ತು ಜೂ. ಎನ್ ಟಿ ಆರ್ ಅವರ ಸಿನಿಮಾ ಘೋಷಣೆಯಾದ‌ ನಂತರ ಹೊಸ ಅಪ್ಡೇಟ್ ಬಂದೇ ಇರಲಿಲ್ಲ. ಆದರೆ ಈಗ ಮುಹೂರ್ತದ ಜೊತೆಗೆ ಸಿನಿಮಾ ಬಿಡುಗಡೆ ಘೋಷಣೆಯನ್ನು ಸಹಾ ಮಾಡಿರುವುದು ಅಭಿಮಾನಿಗಳು ಖುಷಿಯಾಗಿದ್ದಾರೆ.

Actor Yash: ನಮಗಿಂತ ಎತ್ತರ ಬೆಳೀಬೇಕು, ಕಂಠಿಗೆ ಕರೆ ಮಾಡಿದ ರಾಕಿಂಗ್ ಸ್ಟಾರ್ ಮಾತಿಗೆ ಧನುಷ್ ಫುಲ್ ಖುಷ್

Leave a Comment