Jhanvi Kapoor: ಆ ನಟನ ಜೊತೆ ನಟಿಸೋಕೆ ನಾನ್ ವೆಜ್ ಬಿಟ್ಟು 12 ದಿನ ವ್ರತ ಮಾಡಿದ್ದೆ; ಜಾನ್ವಿಯ ಅಭಿಮಾನ ನಟ ಯಾರು?

Written by Soma Shekar

Published on:

---Join Our Channel---

Jhanvi Kapoor : ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Jhanvi Kapoor) ಸದ್ಯ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ತೆಲುಗಿನಲ್ಲಿ ತಮ್ಮ ಎಂಟ್ರಿಯನ್ನೇ ಯಂಗ್ ಟೈಗರ್ ಜೂನಿಯರ್ ಎನಿ ಟಿ ಆರ್ ಅವರ ದೇವರ ಸಿನಿಮಾ ಮೂಲಕ ಮಾಡ್ತಿರೋ ಜಾನ್ವಿ, ಮುಂದಿನ ಸಿನಿಮಾವನ್ನು ರಾಮ್ ಚರಣ್ ಜೊತೆಗೆ ಮಾಡ್ತಾರೆ ಅನ್ನೋದು ಮತ್ತೊಂದು ವಿಶೇಷವಾಗಿದೆ. ಆದರೆ ನಟಿ ಜಾನ್ವಿ ಒಬ್ಬ ನಟನ ಜೊತೆ ನಟಿಸೋದಕ್ಕೆ ಸಸ್ಯಾಹಾರಿಯಾಗಿ ದೇವರ ಪೂಜೆ ಮಾಡಿದ್ರು ಅಂದ್ರೆ ಎಲ್ಲರಿಗೂ ಅಚ್ಚರಿ ಆಗಬಹುದು.

ಹೌದು, ಜಾನ್ವಿ ಕಪೂರ್ ಬಾಲಿವುಡ್ ನ ಒಬ್ಬ ಪ್ರತಿಭಾವಂತ ನಟನ ಜೊತೆಗೆ ನಟಿಸೋದಕ್ಕೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರಂತೆ. ಹಾಗಾದ್ರೆ ಯಾರು ಆ ನಟ ತಿಳಿಯೋಣ ಬನ್ನಿ. ಬಾಲಿವುಡ್ ನಲ್ಲಿ ನಟ ಪಂಕಜ್ ತ್ರಿಪಾಠಿ (Pankaj Tripati) ಇಂದು ಬಹಳ ದೊಡ್ಡ ಹೆಸರನ್ನು ಪಡೆದಿರುವ ನಟ. ಇವರು ತಮ್ಮ ಪ್ರತಿಭೆಯಿಂದ ಎತ್ತರಕ್ಕೆ ಬೆಳೆದವರು. ಸೀರಿಯಲ್, ವೆಬ್ ಸಿರೀಸ್, ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಿಂದ ಆರಂಭಿಸಿ ಇಂದು ತಮ್ಮದೇ ಆದ ಸ್ಟಾರ್ ಡಂ ಪಡೆದಿರುವ ನಟನಾಗಿದ್ದಾರೆ.

ಬಾಲಿವುಡ್ ನಲ್ಲಿ ಹಲವು ಸ್ಟಾರ್ ಗಳು ಪಂಕಜ್ ತ್ರಿಪಾಠಿ ಅವರ ಅಭಿಮಾನಿಗಳು. ಅಂತಹವರ ಸಾಲಿನಲ್ಲಿ ಜಾನ್ವಿ ಸಹಾ ಒಬ್ಬರು. ಜಾನ್ವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಗುಂಜನ್ ಸಕ್ಸೇನಾ (Gunjan Saxena) ಸಿನಿಮಾದಲ್ಲಿ ನನಗೆ ಬಹಳ ವಿಶೇಷವಾದ ಸಿನಿಮಾ ಆಗಿದೆ. ಆ ಸಿನಿಮಾದಲ್ಲಿ ನನ್ನ ತಂದೆಯ ಪಾತ್ರವನ್ನು ಪಂಕಜ್ ತ್ರಿಪಾಠಿ ಅವರು ಮಾಡಬೇಕು ಅನ್ನೋದು ನನ್ನ ಆಸೆಯಾಗಿತ್ತು.

ಪಂಕಜ್ ತ್ರಿಪಾಠಿ ಅವರನ್ನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಸಿದೆವು. ನಾನು ಅವರ ಇಂದಿಗೂ ಅವರ ದೊಡ್ಡ ಅಭಿಮಾನಿ. ಅವರು ನನ್ನ ಸಿನಿಮಾ ಮಾಡಲು ಒಪ್ಪಬೇಕೆಂದು ನಾನು ಹತ್ತು ಹನ್ನೆರಡು ದಿನಗಳ ಕಾಲ ನಾನ್ ವೆಜ್ ತಿನ್ನದೇ ದೇವರಲ್ಲಿ ಪ್ರಾರ್ಥನೆ ಮಾಡಿದೆ. ಹಾಗೆ ಮಾಡಿದರೆ ಅವರು ಖಂಡಿತ ಒಪ್ಪಬಹುದು ಅಂತ ನನಗೆ ಅನಿಸಿತ್ತು ಎನ್ನುವ ಮಾತುಗಳೊಂದಿಗೆ ತಾನು ಪಂಕಜ್ ಅವರ ಎಂತಹ ಹುಚ್ಚು ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

Leave a Comment