Jaya Bachchan: ಬಾಲಿವುಡ್ ನ ಹಿರಿಯ ನಟಿ, ರಾಜ್ಯಸಭಾ ಸದಸ್ಯೆ ಆಗಿರುವ ಅಮಿತಾಬ್ ಬಚ್ಚನ್ ಅವರ ಮಡದಿ ಜಯಾ ಬಚ್ಚನ್ (Jaya Bachchan) ಅವರು ಈಗ ತಮ್ಮ ಹೆಸರಿನ ಜೊತೆಗೆ ಪತಿಯ ಹೆಸರನ್ನು ಸೇರಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಘಟನೆ ನಡೆದಿದ್ದು, ಈ ವಿಚಾರ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಜಯಾ ಅವರ ಇಂತಹ ಕೋಪ ಅನೇಕರಿಗೆ ಅಚ್ಚರಿಯನ್ನು ಮೂಡಿಸಿದೆ.
ಜಯಾಬಚ್ಚನ್ ಅವರು ಇತ್ತೀಚಿನ ವರ್ಷಗಳಲ್ಲಿ ಮಾದ್ಯಮಗಳ ಮುಂದೆ ತಮ್ಮ ಸಿಡುಕುತನವನ್ನ ಪ್ರದರ್ಶಿಸುವ ಮೂಲಕವೇ ಟ್ರೋಲಾಗಿ ಸುದ್ದಿಯಾಗುತ್ತಾರೆ. ನೆಟ್ಟಿಗರು ಸಹಾ ಜಯಾ ಬಚ್ಚನ್ ಅವರ ಆಟಿಟ್ಯೂಡ್ ಬಗ್ಗೆ ಅಸಮಾಧಾನವನ್ನು ಹೊರ ಹಾಕುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಗಂಡನ ಹೆಸರಿನ ವಿಚಾರಕ್ಕೆ ಜಯಾ ಬಚ್ಚನ್ ಸಿಟ್ಟಾಗಿದ್ದಾರೆ.
ರಾಜ್ಯಸಭೆಗೆ ತಮ್ಮನ್ನು ಪರಿಚಯಿಸುವ ವೇಳೆ, ಅವರ ಹೆಸರಿನ ನ ಜೊತೆಗೆ ಪತಿ ಹೆಸರು ಅಮಿತಾಭ್ ಎಂದು ಸೇರಿಸಿದ್ದರಿಂದ ಸಮಾಜ ವಾದಿ ಪಕ್ಷದ ಸಂಸದೆಯಾದಂತಹ ಜಯಾ ಬಚ್ಚನ್ ಅಸಮಧಾನಗೊಂಡಿದ್ದಾರೆ. ಮೇಲ್ಮನೆ ಕಲಾಪದಲ್ಲಿ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ‘ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ನಿಮ್ಮ ಸರದಿ’ ಎಂದಿದ್ದರು.
ಪತಿಯ ಹೆಸರನ್ನು ಜೊತೆಗೆ ಸೇರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಯಾ, ಮಹಿಳೆಯರಿಗೂ ಅವರದ್ದೇ ಆದ ಸ್ಥಾನಮಾನಗಳಿವೆ. ಅವರದ್ದೇ ಆದ ಸಾಧನೆ ಇರುತ್ತದೆ. ಪತಿಯ ಹೆಸರನ್ನು ಸೇರಿಸಿ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಕೇವಲ ‘ಜಯಾ ಬಚ್ಚನ್ ಎಂದರೆ ಸಾಕು’ ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
Actor Dhanush: ಧನುಷ್ ಹೊಸ ಸಿನಿಮಾಗಳಿಗೆ ಭಾರೀ ಸಂಕಷ್ಟ; ನಿರ್ಮಾಪಕರ ಆಕ್ರೋಶಕ್ಕೆ ಸ್ಟಾರ್ ನಟ ಸುಸ್ತು