Atlee Kumar: ಜವಾನ್ ಗೆದ್ದ ಮೇಲೆ ಆ್ಯಟ್ಲಿ ಗೆ ಸೌತ್ ಹೀರೋಗಳು ಕಾಣಿಸ್ತಾ ಇಲ್ವಾ? ಆಗ ಶಾರೂಖ್ ಈಗ ಸಲ್ಮಾನ್

Written by Soma Shekar

Published on:

---Join Our Channel---

Atlee Kumar : ಈಗ ಬಾಲಿವುಡ್ ನಲ್ಲಿ (Bollywood) ಸ್ಟಾರ್ ನಟರಿಗೆ ದಕ್ಷಿಣ ಸಿನಿಮಾಗಳ ನಿರ್ದೇಶಕರ ಮೇಲೆ ಮೊದಲಿಗಿಂತ ಒಲವು ಹೆಚ್ಚಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಶಾರೂಖ್ ಖಾನ್ (Shah Rukh Khan) ನಾಯಕನಾಗಿದ್ದ ಜವಾನ್ ಸಿನಿಮಾವನ್ನು ಆ್ಯಟ್ಲಿ ನಿರ್ದೇಶನ ಮಾಡಿದ್ದರು, ಈಗ ಸಲ್ಮಾನ್ ಖಾನ್ ಅವರ ಸಿಖಂದರ್ ಸಿನಿಮಾವನ್ನು ತಮಿಳಿನ ಮುರುಗದಾಸ್ ಅವರು ನಿರ್ದೇಶನ ಮಾಡ್ತಿದ್ದಾರೆ.

ಈಗ ಇದರ ಬೆನ್ನಲ್ಲೇ ಮತ್ತೊಂದು ಹೊಸ ಅಪ್ಡೇಟ್ ಹೊರಗೆ ಬಂದಿದೆ. ಜವಾನ್ ಸಿನಿಮಾದ ಅದ್ಭುತ ಸಕ್ಸಸ್ ನ ನಂತರ ಆ್ಯಟ್ಲಿ ( Atlee Kumar ) ಈಗ ಮತ್ತೊಬ್ಬ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ಹೊಸ ಸಿನಿಮಾವನ್ನು ಮಾಡಲು ಸಜ್ಜಾಗುತ್ತಿದ್ದು, ಸಲ್ಮಾನ್ ಜೊತೆಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.‌

ಬಾಲಿವುಡ್ ನಲ್ಲಿ ಶಾರೂಖ್ ಜೊತೆ ಸಿನಿಮಾ ಮಾಡಿ ಗೆದ್ದ ನಂತರ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಜೋಡಿಯಾಗಿರುವ ಮತ್ತೊಂದು ಬಾಲಿವುಡ್ ಸಿನಿಮಾವನ್ನು ಆ್ಯಟ್ಲಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮೊದಲೇ ಆ್ಯಟ್ಲಿ ಸಲ್ಮಾನ್ ಗಾಗಿ ಹೊಸ ಕಥೆಯನ್ನ ಸಿದ್ಧಪಡಿಸಿದ್ದಾರೆ.

ಸಿನಿಮಾ ಕಥೆಯನ್ನು ಸಹಾ ಸಲ್ಮಾನ್ ಗೆ ಹೇಳಿದ್ದಾರೆ. ಸಲ್ಮಾನ್ ಖಾನ್ (Salman Khan) ಸಹಾ ಆ್ಯಟ್ಲಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರದಲ್ಲೇ ಈ ಹೊಸ ಸಿನಿಮಾದ ಅಧಿಕೃತ ಘೋಷಣೆ ಆಗುವ ನಿರೀಕ್ಷೆಗಳಿದೆ. ಶಾರೂಖ್ ನಂತರ ಈಗ ಆ್ಯಟ್ಲಿ ಸಲ್ಮಾನ್ ಗಾಗಿ ಎಂತ ಸಿನಿಮಾ ಮಾಡ್ತಾರೆ ಅನ್ನೋದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

Puttakkana Makkalu Serial: ಶುರುವಾಗುತಿದ್ಯಾ ಪುಟ್ಟಕ್ಕನ‌ ಮಕ್ಕಳ ಹೊಸ ಪರ್ವ? ಪ್ರೊಮೊದಲ್ಲೇ ಸಿಕ್ತು ಸುಳಿವು

Leave a Comment