Railway Rules : ಭಾರತೀಯ ರೈಲ್ವೆಯಲ್ಲಿ (Railway Rules) ಸಂಚಾರ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕು. ಆದ್ದರಿಂದಲೇ ಕೆಲವು ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯಲು ಅವಕಾಶವೇ ಇಲ್ಲ. ಆದರೂ ಕೆಲವರು ರೈಲಿನಲ್ಲಿ ಮದ್ಯ (Alcohol) ಕೊಂಡೊಯ್ಯುವ ಅವಕಾಶ ಇದ್ಯ ಎನ್ನುವ ಪ್ರಶ್ನೆ ಕೇಳುತ್ತಾರೆ ಮತ್ತು ಇಂತಹ ಒಂದು ಅನುಮಾನವನ್ನು ಇಟ್ಟುಕೊಂಡಿದ್ದಾರೆ.
ಕೆಲವರು 1989 ರ ರೈಲ್ವೆ ಆ್ಯಕ್ಟ್ ನ ಮುಂದೆ ಇಟ್ಟು ಎರಡು ಲೀಟರ್ ಮದ್ಯ ತಗೊಂಡು ಹೋಗಬಹುದು ಅಂತ ಹೇಳ್ತಾರೆ, ಆದರೆ ಈ ವಿಷಯ ನಿಜಾನಾ ಅಂದ್ರೆ ಖಂಡಿತ ಅಲ್ಲ ಅಂತಾನೇ ಹೇಳಬೇಕು. ಏಕೆಂದರೆ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ರೈಲಿನಲ್ಲಿ ಮದ್ಯ ಕೊಂಡಯ್ಯಲು ಅವಕಾಶವನ್ನು ನೀಡಲಾಗಿಲ್ಲ. ಮದ್ಯಕ್ಕೆ ಬೆಂಕಿ ಹೊತ್ತಿ ಕೊಳ್ಳಬಹುದು ಎನ್ನುವ ಕಾರಣಕ್ಕೆ ಅದಕ್ಕೆ ರೈಲಿನಲ್ಲಿ ಅನುಮತಿ ಇಲ್ಲ.
ಸೀಲ್ಡ್ ಬಾಟಲ್ ಇದ್ದರೂ ಪ್ರಯಾಣಿಕರು ಮದ್ಯ ಒಯ್ಯುವ ಅನುಮತಿ ಭಾರತೀಯ ರೈಲಿನಲ್ಲಿ ಇಲ್ಲ. ಈ ನಿಯಮ ಉಲ್ಲಂಘನೆ ಮಾಡಿದರೆ ದುಬಾರಿ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ರೈಲಿನಲ್ಲಿ ಮದ್ಯದ ಬಾಟಲಿಯೊಂದಿಗೆ ಸಿಕ್ಕಿ ಬಿದ್ದರೆ 1 ಸಾವಿರ ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.
ರೈಲಿನಲ್ಲಿ ಕೇವಲ ಮದ್ಯ ಮಾತ್ರವೇ ಅಲ್ಲ ಸ್ಟೌವ್, ಗ್ಯಾಸ್ ಸಿಲಿಂಡರ್, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುವಂತಹ ರಾಸಾಯನಿಕ ಪದಾರ್ಥಗಳು, ಆ್ಯಸಿಡ್, ಗ್ರೀಸ್ ಸೇರಿದಂತೆ ಇತರ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಸಹಾ ನಿರ್ಬಂಧವಿದೆ. ಕೆಲವು ಮೆಟ್ರೊಗಳಲ್ಲಿ 2 ಲೀಟರ್ ಮದ್ಯ ಒಯ್ಯಲು ಅಂದರೆ ಸೀಲ್ಡ್ ಆಲ್ಕೋಹಾಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.
BBK 11 : ಕೆಲವೊಂದು ಸಲ ಮೂವ್ ಆನ್ ಆಗಬೇಕು; ಕಿಚ್ಚ ಸುದೀಪ್ ಬಿಗ್ ಬಾಸ್ ಗೆ ಗುಡ್ ಬೈ ?