Hrithik Roshan: 8 ವರ್ಷಗಳ ನಂತರ ಕಂಗನಾಗಾಗಿ ಕರಗಿತು ಹೃತಿಕ್ ಮನಸ್ಸು, ಅಚ್ಚರಿಯ ಪ್ರತಿಕ್ರಿಯೆ ಕೊಟ್ಟ ನಟ

Written by Soma Shekar

Published on:

---Join Our Channel---

Hrithik Roshan: ಕಂಗನಾ ರಣಾವತ್ ?Kangana Ranaut) ಮತ್ತು ಹೃತಿಕ್ ರೋಷನ್ (Hrithik Roshan) ಒಂದು ಕಾಲದಲ್ಲಿ ಬಹಳ ಆತ್ಮೀಯರಾಗಿದ್ದರು. ಇವರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಬೇರೇನೋ ಇದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅನಂತರ ಇಬ್ಬರ ನಡುವೆ ಸಂಬಂಧವು ಹದಗೆಟ್ಟ ನಂತರ ಕಂಗನಾ ಹೃತಿಕ್ ರೋಷನ್ ಬಗ್ಗೆ ಬಹಿರಂಗವಾಗಿಯೇ ಮಾತನಾಡುವ ಮೂಲಕ ಸುದ್ದಿಯಾಗಿದ್ದರು. ನಟಿಯ ಮಾತುಗಳಿಗೆ 2016ರಲ್ಲಿ ಹೃತಿಕ್ ರೋಷನ್ ಲೀಗಲ್ ನೋಟಿಸ್ ಕೊಟ್ಟಿದ್ದರು. ಕೆಲವೊಂದು ಸಂದರ್ಶನಗಳಲ್ಲೂ ಕಂಗನಾ ಹೃತಿಕ್ ಬಗ್ಗೆ ಮಾತನಾಡಿದ್ದರು.

ಆದರೆ ಈಗ ಎಂಟು ವರ್ಷಗಳ ನಂತರ ಹೃತಿಕ್ ರೋಷನ್ ಕಂಗನಾ ಪರವಾಗಿ ನಿಲ್ಲುವ ಮೂಲಕ ಹಳೆಯ ವೈರತ್ವವನ್ನು ಮರೆತಂತೆ ಕಾಣುತ್ತಿದೆ. ಕಂಗನಾ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಗೆದ್ದು ಬೇಗಿದ್ದಾರೆ. ಇತ್ತೀಚಿಗೆ ನಟಿ ದೆಹಲಿಗೆ ತೆರಳಲು ಮೊಹಾಲಿ ವಿಮಾನ ನಿಲ್ದಾಣವನ್ನ ತಲುಪಿದ ಸಂದರ್ಭದಲ್ಲಿ ಅಲ್ಲಿನ ಸಿಐಎಸ್ಎಫ್ (CISF) ಗಾರ್ಡ್ ಕುಲ್ವಿಂದರ್ ಕೌರ್ ನಟಿಗೆ ಕಪಾಳ ಮೋಕ್ಷ ಮಾಡಿದ್ದರು.

ಈ ವಿಷಯ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿ ದೊಡ್ಡ ಸುದ್ದಿಯಾಯ್ತು. ಈ ಘಟನೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಪೋಸ್ಟ್ ಗಳು ಸಾಕಷ್ಟು ಹರಿದಾಡಿವೆ. ಇನ್ನು ಈ ಘಟನೆಯನ್ನು ಖಂಡಿಸಿ ಪತ್ರಕರ್ತರೊಬ್ಬರು ನಟಿಯ ಪರವಾಗಿ ಒಂದು ಪೋಸ್ಟನ್ನು ಶೇರ್ ಮಾಡಿದ್ದರು. ಇದಕ್ಕೆ ನಟ ಹೃತಿಕ್ ರೋಷನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಪತ್ರಕರ್ತರು ಶೇರ್ ಮಾಡಿದ ಪೋಸ್ಟಿಗೆ ಹೃತಿಕ್ ರೋಷನ್ ಅವರು ಲೈಕ್ ನೀಡುವ ಮೂಲಕ ಪರೋಕ್ಷವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.‌

ಹೃತಿಕ್ ರೋಷನ್ ಮಾತ್ರವೇ ಅಲ್ಲದೆ ಬಾಲಿವುಡ್ ನಟಿ ಅಲಿಯಾ ಭಟ್, ಅರ್ಜುನ್ ಕಪೂರ್ ಸೇರಿದಂತೆ ಇನ್ನೂ ಕೆಲವು ಸೆಲೆಬ್ರಿಟಿಗಳು ಈ ಪೋಸ್ಟ್ ಗೆ ಲೈಕ್ ಅನ್ನು ನೀಡಿ ಕಂಗನಾ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಬಾಲಿವುಡ್ ನ ಹಿರಿಯ ನಟಿ ಶಬಾನಾ ಆಜ್ಮಿ (Shabana Azmi) ಅವರು ಸೋಶಿಯಲ್ ಮೀಡಿಯಾ ಮೂಲಕ ಈ ಘಟನೆಯನ್ನು ಖಂಡಿಸುತ್ತಾ, ನಟಿ ಕಂಗನ ಅವರ ಪರವಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

Leave a Comment