Hrithik Roshan: ನಿಮಗೆ ನಾಚಿಕೆ ಆಗಲ್ವಾ? ಹೃತಿಕ್ ಮೇಲೆ ಫ್ಯಾನ್ಸ್ ಆಕ್ರೋಶ, ಒಂದು ವೀಡಿಯೋ ಹಚ್ಚಿದ ಕಿಚ್ಚು

Written by Soma Shekar

Updated on:

---Join Our Channel---

Hrithik Roshan: ಹೃತಿಕ್ ರೋಷನ್ (Hrithik Roshan) ಬಾಲಿವುಡ್ ನ ಸ್ಪುರದ್ರೂಪಿ ನಟಿ, ಅದ್ಭುತ ಮೈಕಟ್ಟು, ಆಕರ್ಷಕ ನೋಟ ಯುವತಿಯರ ಎದೆಯಲ್ಲಿ ಕಿಚ್ಚನ್ನೇ ಹೊತ್ತಿಸುತ್ತಿದೆ. ಇನ್ನು ಈ ನಟನ ಡ್ಯಾನ್ಸ್ ಸ್ಟೈಲ್ ಗೆ ಫಿದಾ ಆಗದವರಿಲ್ಲ. ಆದರೆ ಈಗ ನಟನ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಬಾಲಿವುಡ್ ನ (Bollywood) ಕೆಲವು ನಟರು ಈಗಾಗಲೇ ಪಾನ್ ಮಸಾಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಟ್ರೋಲ್ ಆಗಿದ್ದಾರೆ. ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದಾರೆ. ಈಗ ಆ ಸಾಲಿಗೆ ಹೃತಿಕ್ ರೋಶನ್ ಅವರು ಸಹಾ ಸೇರ್ಪಡೆ ಆಗಿದ್ದು ಇದನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರವನ್ನು ಹೊರ ಹಾಕಿದ್ದಾರೆ.

ಹೌದು, ಹೃತಿಕ್ ರೋಶನ್ ಪಾನ್ ಮಸಾಲವನ್ನು ಪ್ರಮೋಟ್ ಮಾಡುವ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.‌ ಸ್ಟೈಲಿಶ್ ಲುಕ್ ನಲ್ಲಿ ಹುಡುಗಿಯನ್ನು ಪಾನ್ ಮಸಾಲ ಮೂಲಕ ಇಂಪ್ರೆಸ್ ಮಾಡುವ ದೃಶ್ಯವನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಜಾಹೀರಾತಿನ ವೀಡಿಯೋ ಏನೋ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಆದರೆ ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಾಹೀರಾತು ನೋಡಿದ ಮೇಲೆ ಅನೇಕರು ನಟ ಇಂತಹ ಹಾಹೀರಾತನ್ನು ಹೇಗೆ ಒಪ್ಪಿಕೊಂಡ್ರು? ಇಂದಿನಿಂದ ಅವರ ಮೇಲಿನ ಗೌರವ ಹೋಯ್ತು, ಇದು ನಾಚಿಕೆಗೇಡಿನ ಕೆಲಸ. ಸ್ಟಾರ್ ನಟನಾಗಿ ಇಂತಹ ಜಾಹೀರಾತು ನಿಮಗೆ ಸರಿಯಲ್ಲ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿ ಅನೇಕರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

Om Parvat : ಇತಿಹಾಸದಲ್ಲೇ ಮೊದಲ ಸಲ ಓಂ ಪರ್ವತದ ಮೇಲೆ ಕಣ್ಮರೆಯಾದ ಹಿಮ, ಕಾದಿದೆಯಾ ಕಂಟಕ?

Orion Spins casino review

Leave a Comment