Rakshit Shetty: 20 ಲಕ್ಷ ಠೇವಣಿ ಇಡಿ, ರಕ್ಷಿತ್ ಶೆಟ್ಟಿಗೆ ಹೈಕೋರ್ಟ್ ನ ನಿರ್ದೇಶನ, ನಟನ ಮುಂದಿನ ಹೆಜ್ಜೆ ಏನು

Written by Soma Shekar

Published on:

---Join Our Channel---

Rakshit Shetty: ನಟ ರಕ್ಷಿತ್ ಶೆಟ್ಟಿ ಅವರು ತಮ್ಮ‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಿದ ‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾದಲ್ಲಿ ಅನುಮತಿಯನ್ನು ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿದ್ದಾರೆನ್ನುವ ಕಾರಣಕ್ಕೆ ಎಂಆರ್ ಟಿ (MRT) ಮ್ಯೂಸಿಕ್ ಸಂಸ್ಥೆಯು ನಟನ ವಿರುದ್ಧ ದೆಹಲಿ ಹೈಕೋರ್ಟ್ (Delhi, High Court) ಮೆಟ್ಟಿಲನ್ನು ಏರಿತ್ತು ಹಾಗೂ ಕಾಪಿ ರೈಟ್ ಉಲ್ಲಂಘನೆ ಆಗಿದೆ‌ ಎನ್ನುವ ವಿಚಾರವನ್ನು ಉಲ್ಲೇಖ ಮಾಡಿತ್ತು.‌

ಇದೀಗ ದೆಹಲಿ ಹೈಕೋರ್ಟ್ ಈ ವಿಚಾರವಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರಿಗೆ ಮತ್ತು ಅವರ ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನವನ್ನು ನೀಡಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನ್ಯಾಯ ಎಲ್ಲಿದೆ ಮತ್ತು ಒಮ್ಮೆ ನಿನ್ನನ್ನು ಹಾಡುಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿತ್ತು.

ಈ ಎರಡೂ ಹಾಡುಗಳ ಮೇಲೆ ಎಂ.ಆರ್.ಟಿ ಹಕ್ಕು ಹೊಂದಿರೋ ಕಾರಣ ರಕ್ಷಿತ್ ಶೆಟ್ಟಿ ಅವರು ಅನುಮತಿ ಪಡೆಯದೇ ಹಾಡುಗಳ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಆರೋಪವಾಗಿತ್ತು. ಇದಕ್ಕೆ ಸಂಬಂಧಿಸಿದ ಹಾಗೆ ನಟ ರಕ್ಷಿತ್ ಅವರು ಸಹಾ ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ ಎಂದು ಪ್ರಶ್ನೆಯನ್ನು ಮಾಡಿದ್ದರು.

ನಟ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಹಾ ಮಾಡಿದ್ದರು. ಹೈ ಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗಿರಲಿಲ್ಲ ಎನ್ನಲಾಗಿದ್ದು, ಈಗ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ಅವುಗಳನ್ನ ತೆಗೆದುಹಾಕಬೇಕು ಮತ್ತು 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

Dr.Bro: ಹೊಸ ಕಂಪನಿ ಶುರು ಮಾಡಿದ ಡಾ.ಬ್ರೋ; ಇನ್ಮೇಲೆ ಟ್ರಾವೆಲ್ ವೀಡಿಯೋ ಮಾಡಲ್ವಾ? ನೆಟ್ಟಿಗರ ಪ್ರಶ್ನೆ

Leave a Comment