Hardik Pandya: ಹಾರ್ದಿಕ್ ಚಾಲಾಕಿತನ, ನತಾಶೆಗೆ ಸಿಗಲ್ಲ ನಯಾಪೈಸೆ; ಪ್ರಿಯತಮೆ ಮೋಸ ಮೊದ್ಲೇ ಗೊತ್ತಿತ್ತಾ?

Written by Soma Shekar

Published on:

---Join Our Channel---

Hardik Pandya: ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ ಸ್ಟಾನ್ ಕೋವಿಕ್ (Natasha Stankovic) ವಿಚ್ಚೇದನದ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಮಾದ್ಯಮಗಳಲ್ಲಿ ಬಹುಚರ್ಚಿತ ವಿಷಯವಾಗಿ ಬದಲಾಗಿದೆ. ಹಾರ್ದಿಕ್ ಮತ್ತು ನತಾಶಾ ವಿಚ್ಚೇದನ ಪಡೆಯಲಿದ್ದು (Hardik Natasha divorce), ಈಗ ವಿಚ್ಚೇದನದ ನಂತರ ನತಾಶಾ ಹಾರ್ದಿಕ್ ಅವರ ಆಸ್ತಿಯಲ್ಲಿ 70% ಅನ್ನು ಜೀವನಾಂಶವಾಗಿ ಪಡೆಯಲಿದ್ದಾರೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿರುವಾಗಲೇ ಇದಕ್ಕೆ ಸಂಬಂಧಿಸಿ ಮತ್ತೊಂದು ವಿಚಾರ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಹೌದು, ಹಾರ್ದಿಕ್ ಪಾಂಡ್ಯ ಇಂತದೊಂದು ದಿನ ಬರಬಹುದು ಅಂತ ಮೊದಲೇ ಆಲೋಚನೆ ಮಾಡಿ ಚಾಣಾಕ್ಷತನದಿಂದ ಮಾಡಿರುವ ಕೆಲಸದಿಂದ ಈಗ ನತಾಶಾಗೆ ಅಂದುಕೊಂಡಷ್ಟು ಮೊತ್ತದ ಪರಿಹಾರ ಸಿಗೋದೇ ಅನುಮಾನ ಎನ್ನಲಾಗಿದೆ. ಇಷ್ಟಕ್ಕೂ ಏನಿದು ವಿಷಯ ಅನ್ನೋದಾದ್ರೆ ಹಿಂದೊಮ್ಮೆ ಪ್ರಮುಖ ಮಾದ್ಯಮವೊಂದರ ವರದಿಯ ಪ್ರಕಾರ ಹಾರ್ದಿಕ್ ಮತ್ತು ನತಾಶಾಗೆ ವಿಚ್ಛೇದನ ದೊರೆತರೆ ಅವರ ಆಸ್ತಿಯ 70% ನತಾಶಾಗೆ ಪರಿಹಾರವಾಗಿ ನೀಡಬೇಕಾಗುತ್ತದೆ.

ನತಾಶಾ ಸರ್ಬಿಯನ್ ದೇಶದವರಾಗಿರುವುದರಿಂದ ಅವರು ಸರ್ಬಿಯನ್ ದಿನಾರ್ ಗಳಲ್ಲೇ ಜೀವನಾಂಶ ಪಡೆಯುವರು ಎನ್ನಲಾಗಿದ್ದು, ಆದರೆ ಈಗ ನಿರೀಕ್ಷಿಸಿದಷ್ಟು ದೊಡ್ಡ ಮೊತ್ತ ಜೀವನಾಂಶವಾಗಿ ಸಿಗುವ ಅವಕಾಶಗಳು ಇಲ್ಲ ಎನ್ನಲಾಗಿದೆ. ಹಿಂದೊಮ್ಮೆ ಹಾರ್ದಿಕ್ ಸಂದರ್ಶನವೊಂದರಲ್ಲಿ ಮಾತನಾಡುವಾಗ, ತಾನು ಹೆಚ್ಚು ಆಸ್ತಿಯನ್ನು ತನ್ನ ಹೆಸರಿನಲ್ಲಿ ಇಟ್ಟಿಲ್ಲ ಬದಲಾಗಿ ತಂದೆ ತಾಯಿಯ ಹೆಸರಿನಲ್ಲಿ ಮಾಡಿರುವುದಾಗಿ ಹೇಳಿಕೊಂಡಿದ್ದರು.

ಸಂದರ್ಶನದಲ್ಲಿ ಹಾರ್ದಿಕ್, ಜಾಹಿರಾತು, ಕ್ರಿಕೆಟ್​ ಹಾಗೂ ಬೇರೆ ಬೇರೆ ಮೂಲಗಳಿಂದ ತಾನು ಗಳಿಸುತ್ತಿರುವ ಹಣವನ್ನು ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ಇರುವಂತಹ ಕಾರು, ಬಂಗಲೆ ಎಲ್ಲವೂ ಕೂಡಾ ತಂದೆ,ತಾಯಿ ಮತ್ತು ಸಹೋದರನ ಹೆಸರಿನಲ್ಲೇ ಇದೆ. ಆದ ಕಾರಣ ಮುಂದೆ ಏನಾದರೂ ಸಮಸ್ಯೆ ಎದುರಾದಾಗ ನಾನು ನನ್ನ ಆಸ್ತಿಯಲ್ಲಿ ಯಾರಿಗೂ ಕೂಡಾ 50% ಜೀವನಾಂಶ ಸಹಾ ಕೊಡಬೇಕಾಗಿಲ್ಲ ಎಂದು ಹೇಳಿದ್ದರು.

ಅಂದು ಹಾರ್ದಿಕ್ ಮಾತನಾಡಿದ್ದ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಅಲ್ಲದೇ ಇದನ್ನ ನೋಡಿದ ನೆಟ್ಟಿಗರು ಓಹೋ ಹಾರ್ದಿಕ್ ಗೆ ತನ್ನ ಪತ್ನಿ ಮುಂದೆ ಹೀಗೆ ಮಾಡಬಹುದು ಅನ್ನೋ ಸುಳಿವು ಮೊದಲ ಇದ್ದ ಹಾಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಒಳ್ಳೇದಾಯ್ತು ಬುದ್ಧಿವಂತಿಕೆಯಿಂದ ಆಸ್ತಿ ಉಳೀತು ಎಂದು ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.

Leave a Comment