Lakshmi Nivasa: ಹುಡ್ಗೀರು ಮದ್ವೆ ಆಗಲ್ಲ, ಆದ್ರೆ ಜಯಂತ್ ಗಾಗಿ ನಾವು ಸೀರಿಯಲ್ ನೋಡೋದು; ಪರ ವಿರೋಧ ಚರ್ಚೆ ಜೋರು

Written by Soma Shekar

Published on:

---Join Our Channel---

Lakshmi Nivasa: ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಬೇರೆಲ್ಲಾ ಪಾತ್ರಗಳಿಗಿಂತ ಭಿನ್ನವಾಗಿರುವ ಪಾತ್ರ ಜಯಂತ್ (Jayanth) ಪಾತ್ರವಾಗಿದ್ದು, ಪ್ರತಿದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಈ ಪಾತ್ರದ ಕುರಿತಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಸೀರಿಯಲ್ ಒಂದರ ಪಾತ್ರದ ಕುರಿತಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದು ಇದೇ ಮೊದಲು ಎನ್ನಬಹುದಾಗಿದೆ. ಜಯಂತ್ ಮತ್ತು ಜಾಹ್ನವಿ ?Jahnavi) ಕಥೆಯೇ ಬಹಳ ವಿಚಿತ್ರ ಮತ್ತು ವಿಭಿನ್ನವಾಗಿದೆ. ಜಯಂತ್ ಪಾತ್ರ ಸೀರಿಯಲ್ ನಲ್ಲಿ ಎಂಟ್ರಿ ಕೊಟ್ಟಾಗ ಪ್ರೇಕ್ಷಕರು ಆ ಪಾತ್ರವನ್ನು ಹಾಡಿ ಹೊಗಳಿ ಮೆಚ್ಚುಗೆಗಳನ್ನು ನೀಡಿದ್ದರು.

ಆದರೆ ಈಗ ಜಯಂತ್ ಒಬ್ಬ ಸೈಕೋ ಪ್ರೇಮಿ ಅಂತ ಗೊತ್ತಾದ ಮೇಲೆ ಸೀರಿಯಲ್ ನಲ್ಲಿ ಬರಿ ಇವನ ಕಥೆಯನ್ನೇ ತೋರಿಸ್ತಾ ಇದ್ದೀರಾ, ನಮಗೆ ಬೇಜಾರಾಗ್ತಾ ಇದೆ ಅಂತ ಅಸಮಾಧಾನವನ್ನು ಸಹಾ ಪ್ರೇಕ್ಷಕರು ಹೊರ ಹಾಕಿದ್ದಾರೆ. ಈ ಪಾತ್ರದ ಕುರಿತಾಗಿ ಒಂದಷ್ಟು ಪರ ಮತ್ತು ವಿರೋಧ ಚರ್ಚೆಗಳು ನಡೀತಾ ಇದೆ. ಹೊಸ ಎಪಿಸೋಡ್ ನಲ್ಲಿ ಜಯಂತ್ ತನ್ನ ಪ್ರೀತಿಯ ಪತ್ನಿಯನ್ನು ಸುತ್ತಾಡೋಣ ಅಂತ ಹೇಳಿ ಮನೆಯಿಂದ ಹೊರಗೆ ಕರ್ಕೊಂಡು ಬಂದಿದ್ದಾನೆ.. ಈ ವೇಳೆ ಜಾಹ್ನವಿ ಪಂಜರದ ಗಿಳಿ ಹೊರಗಡೆ ಬಂದ ಹಾಗೆ ಇದೆ ಅಂತ ತನ್ನ ಮನಸ್ಸಿನ ಮಾತನ್ನು ಹೇಳ್ತಾಳೆ.

ಆಗ ಜಯಂತ್ ನನ್ನ ಹೃದಯ ಗೂಡು ಇದ್ದ ಹಾಗೆ, ತುಂಬಾ ಸಣ್ಣದು ನಿಮಗೆ ಅಲ್ಲಿ ಜಾಗ ಇಲ್ಲ ಅಂತ ಅರ್ಥನಾ ಎಂದು ಕೇಳ್ತಾನೆ, ಹಾಗೆ ತನ್ನ ಹೆಂಡತಿಯ ಜೊತೆಗೆ ಪ್ರೀತಿಯಿಂದ ಮಾತಾಡ್ತಾ ಅವಳನ್ನ ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿಬಿಡುತ್ತಾನೆ. ನಂತರ ಜಾಹ್ನವಿಗೆ ಸ್ವಿಮ್ಮಿಂಗ್ ಬರೋದಿಲ್ಲ ಅಂತ ಗೊತ್ತಾಗಿ ಕಣ್ಣೀರು ಹಾಕ್ತಾ ಪರಿಪರಿಯಾಗಿ ಕ್ಷಮೆಯನ್ನು ಕೇಳ್ತಾನೆ. ಜಯಂತ್ ನ ಇಂಥದೊಂದು ಸೈಕೋ ಪಾತ್ರವನ್ನು ನೋಡಿ ವೀಕ್ಷಕರು ಚರ್ಚೆಗಳಲ್ಲಿ ತೊಡಗಿಕೊಂಡಿದ್ದಾರೆ.

ಕಾಮೆಂಟ್ ಗಳಲ್ಲಿ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜಾನು ನೀನು ಜಯಂತ್ ‌ ಬದುಕಿನಲ್ಲಿ ಒಂದು ಪಂಜರದ ಗಿಳಿ ಆಗಿದ್ದೀಯಾ, ಹಾರೋ ಹಕ್ಕಿಗೆ ರೆಕ್ಕೆಗಳನ್ನು ಕತ್ತರಿಸಿದ ಹಾಗೆ ನಿನ್ನ ಪಾಡಾಗಿದೆ. ಈ ಸೈಕೋ ಜೊತೆ ಅದು ಹೇಗೆ ಬದುಕ್ತಿದಿಯೋ, ಇದು ಇನ್ನೂ ಜಸ್ಟ್ ಆರಂಭ ಮಾತ್ರ, ಮುಂದೆ ಇನ್ನೂ ಏನು ಕಾದಿದೆಯೋ ಕರ್ಮ, ಡೈರಕ್ಟರೇ ಇವರ ಕಥೆಯನ್ನ ಮುಗಿಸಿ, ಇವರ ಅವಶ್ಯಕತೆ ಇಲ್ಲ ಅನ್ಸುತ್ತೆ ಅಂತ ಕಮೆಂಟ್ ಮಾಡುತ್ತಿದ್ದಾರೆ.

ಇವನು ನಾಗವಲ್ಲಿ ತರ ಸಡನ್ ಆಗಿ ಬದಲಾಗೋದನ್ನ ಜಾನು ಅರ್ಥಮಾಡಿಕೊಳ್ಳಬೇಕಾಗಿದೆ. ಇವನು ಸರಿ ಇಲ್ಲ ಮನುಷ್ಯ ರೂಪದಲ್ಲಿರುವ ರಾಕ್ಷಸ ಇವನು. ಇವನ ಎಪಿಸೋಡ್ಗಳನ್ನು ನೋಡ್ತಾ ಬೋರ್ ಆಗಿ ಸೀರಿಯಲ್ ನೋಡೋ ಇಂಟರೆಸ್ಟ್ ಇರೋದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ನಲ್ಲಿ ಸೀರಿಯಲ್ ನೋಡಿದ ಹುಡುಗಿಯರು ನಿಜವಾಗಲೂ ಮದುವೆ ಆಗಲ್ಲ, ಜಯಂತ್ ಬಂದ್ರೆ ಸಿಕ್ಕಾಪಟ್ಟೆ ಭಯ ಆಗುತ್ತೆ . ಈ ಸೀರಿಯಲ್ ನ ನೋಡಲ್ಲ, ಹುಡುಗರ ಬಗ್ಗೆ ಕೆಟ್ಟ ಅಭಿಪ್ರಾಯ ಬರೋ ಹಾಗೆ ಕಾಣ್ತಿದೆ ಎಂದಿದ್ದಾರೆ.

ಇನ್ನು ಕೆಲವರು ಆರಂಭದಲ್ಲಿ ಇವರ ಜೋಡಿಯನ್ನು ನೋಡಿದಾಗ ಬಹಳ ಚೆನ್ನಾಗಿರೋ ಜೋಡಿಯ ಅನಿಸ್ತಿತ್ತು. ಆದರೆ ಈಗ ಹಾಗೆ ಅನಿಸ್ತಿಲ್ಲ ಅಂತ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಮತ್ತೊಬ್ಬರು ನಾನು ಸೀರಿಯಲ್ ನೋಡೋದೇ ಜಯಂತವರಿಗೋಸ್ಕರ. ಇಲ್ಲಾಂದ್ರೆ ಈ ಸೀರಿಯಲ್ ನಲ್ಲಿ ನೋಡೋದಕ್ಕೆ ಏನಿದೆ? ಫ್ಯಾಮಿಲಿ ಡ್ರಾಮಾ, ಅಜ್ಜ ಅಜ್ಜಿ, ಆಂಟಿ ಅಂಕಲ್ ಗಳ ಗೋಳು ಯಾರು ನೋಡ್ತಾರೆ ಅಂತಿದ್ದಾರೆ.

ಜಯಂತ್ ಪಾತ್ರ ಎಷ್ಟು ಸರಿ ಎಷ್ಟು ತಪ್ಪು ಅನ್ನುವುದನ್ನು ಪಕ್ಕಕ್ಕಿಟ್ಟರೆ, ಜಯಂತ್ ಪಾತ್ರದಲ್ಲಿ ನಟ ಅದ್ಬುತವಾಗಿ ಅಭಿನಯಿಸ್ತಾ ಇದ್ದಾರೆ ಅಂತ ಬಹಳಷ್ಟು ಜನ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ. ಹೆಂಡತಿಯ ಮುಂದೆ ಪ್ರೀತಿಸೋ ಗಂಡನಾಗಿ, ಇನ್ನೊಂದು ಕಡೆ ಸೈಕೋ ರೂಪದಲ್ಲಿ, ಮತ್ತೊಂದು ಕಡೆ ಒಬ್ಬ ಬಿಸ್ನೆಸ್ ಮ್ಯಾನ್ ಆಗಿ , ಅತ್ತೆ ಮಾವನ ಮುಂದೆ ವಿನಯವಂತಿಕೆಯ ಅಳಿಯನಾಗಿ ತಮ್ಮ ಪಾತ್ರವನ್ನ ಬಹಳ ನಾಜೂಕಾಗಿ ನಿಭಾಯಿಸ್ತಿದ್ದಾರೆ ಅಂತ ಮೆಚ್ಚುಗೆಗಳು ಹರಿದು ಬರುತ್ತಿದೆ.

Leave a Comment