Srirastu Shubhamastu: ಎದುರಲ್ಲಿ ಕೋಪ, ಮನಸ್ಸಲ್ಲಿ ಪ್ರೀತಿ, ಕಣ್ಣಲ್ಲೇ ಮಾತಾಡೋ ಸಮರ್ಥ್ ಗೆ ಫ್ಯಾನ್ಸ್ ಫಿದಾ

Written by Soma Shekar

Published on:

---Join Our Channel---

Srirastu Shubhamastu: ಶ್ರೀರಸ್ತು ಶುಭಮಸ್ತು (Srirastu Shubhamastu) ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಇದರಲ್ಲಿನ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿವೆ. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಸಮರ್ಥ್ ಪಾತ್ರ ಪ್ರೇಕ್ಷಕರಿಂದ ವಿಶೇಷ ಮನ್ನಣೆ ಪಡೆಯುತ್ತಾ, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾದ್ರೆ ಸಮರ್ಥ್ ಪಾತ್ರದಲ್ಲಿ ಮಿಂಚುತ್ತಿರುವ ನಟನ ನಿಜವಾದ ಹೆಸರೇನು? ಅವರ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ತಿಳಿಯೋಣ ಬನ್ನಿ.

ಶ್ರೀರಸ್ತು ಶುಭಮಸ್ತು ಸೀರಿಯಲ್ ನ ಆರಂಭದಲ್ಲಿ ಸಮರ್ಥ್ ಪಾತ್ರವನ್ನು ನಿಭಾಯಿಸುತ್ತಿದ್ದ ನಟ ಆ ಪಾತ್ರದಿಂದ ಹೊರಗೆ ಬಂದ ಮೇಲೆ ಬೇರೊಬ್ಬ ನಟ ಆ ಪಾತ್ರಕ್ಕೆ ಎಂಟ್ರಿಯನ್ನು ಕೊಟ್ಟರು. ಅವರೇ ದರ್ಶಿತ್ ಗೌಡ (Darshit Gowda).

ದರ್ಶಿತ್ ಅವರು ಕನ್ನಡ ಕಿರುತೆರೆಗೆ ಹೊಸಬರೇನಲ್ಲ, ಈ ಹಿಂದೆ ಅವರು ದೊರೆಸಾನಿ ಸೀರಿಯಲ್ ನಲ್ಲಿ ನಟಿಸಿದ್ದರು. ಇದಲ್ಲದೇ ತೆಲುಗಿನಲ್ಲಿ ಅಮ್ಮ ಎನ್ನುವ ಸೀರಿಯಲ್ ನಲ್ಲಿ ನಟಿಸಿ ತೆಲುಗಿನಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಸೀರಿಯಲ್ ಮಾತ್ರವೇ ಅಲ್ಲದೇ ದರ್ಶಿತ್ ಅವರು ಕಣ್ಸೆಳೆವ ಮಾಯಾವಿ ಹೆಸರಿನ ಆಲ್ಬಂ ಸಾಂಗ್ ನಲ್ಲಿ ಸಹಾ ಇವರು ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್ ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ತುಳಸಿಯ ಮುದ್ದಿನ ಮಗ,‌ ತಾತನ ಅಚ್ಚು ಮೆಚ್ಚಿನ ಮೊಮ್ಮಗ ದಂಡಪಿಂಡ, ಸಿರಿಯ ಪ್ರೀತಿಯ ಗಂಡನಾಗಿ ಸಮರ್ಥ್ ಪಾತ್ರ ಇದ್ದು, ಅಮ್ಮನ ಮದುವೆ ಇಷ್ಟವಿಲ್ಲದೇ ಸಿಡಿಮಿಡಿಗೊಂಡಿರುವ ಸಮರ್ಥ್ ಅಮ್ಮನ ಸಾಧನೆಗೆ ಮನಸ್ಸಲ್ಲೇ ಖುಷಿ ಪಡುತ್ತಾನೆ.

ಎದುರಲ್ಲಿ ಹುಸಿ ಕೋಪ ತೋರುವ ಸಮರ್ಥ್ ಎಲ್ಲರ ಬಗ್ಗೆ ವಹಿಸುವ ಕಾಳಜಿ, ಕಣ್ಣಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಸ್ಟೈಲ್ ಗೆ ಪ್ರೇಕ್ಷಕರು ಫಿದಾ ಆಗಿದ್ದು ಸೀರಿಯಲ್ ನ ಅಸಲಿ ನಾಯಕ ಇವರೇ ಎನ್ನುವಷ್ಟು ಜನರ ಮೆಚ್ಚುಗೆ ಪಡೆದಿದ್ದಾರೆ ದರ್ಶಿತ್ ಗೌಡ.

Bhagyalakshmi: ಈ ಹರಿಕಥೆ ಬೇಕಿತ್ತಾ ಡೈರೆಕ್ಟರೇ, ಭಾಗ್ಯ ಬರೀ ಬಿಲ್ಡಪ್, ಭಾಗ್ಯ ಮೇಲೆ ಪ್ರೇಕ್ಷಕರ ಸಿಟ್ಟೇಕೆ

Leave a Comment