Namratha Gowda: ಕೆಂಪು ಗುಲಾಬಿಯ ಹಾಗೆ ಕಂಡ ನಮ್ರತಾ; ಹೊಸ ಲುಕ್ ಗೆ ಜನರು ಫಿದಾ

Written by Soma Shekar

Published on:

---Join Our Channel---

Namratha Gowda: ಕಿರುತೆರೆಯ ನಟಿ, ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ (Nanratha Gowda) ಅವರು ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಸಾಕಷ್ಟು ಸದ್ದನ್ನು ಮಾಡಿದ ಸ್ಪರ್ಧಿಯಾಗಿದ್ದವರು ಮತ್ತು ಬಿಗ್ ಬಾಸ್ ನಂತರ ಇನ್ನಷ್ಟು ಜನಪ್ರಿಯತೆಯನ್ನು ಅವರು ಪಡೆದುಕೊಂಡರು. ಬಿಗ್ ಬಾಸ್ ನಂತರವು ನಟಿ ಆಗಾಗ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಗಮನವನ್ನು ಸೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಮ್ರತಾ ಅವರು ಆಗಾಗ ತಮ್ಮ ಫೋಟೋಗಳು ಮತ್ತು ಡ್ಯಾನ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಾರೆ. ಈಗ ಮತ್ತೊಮ್ಮೆ ಹೊಸದೊಂದು ಅತ್ಯಾಕರ್ಷಕ ಡ್ರೆಸ್ ಧರಿಸಿದ ಹೊಸ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

ಕಡುಕೆಂಪು ಬಣ್ಣದ ನೂತನ ವಿನ್ಯಾಸದ ಡ್ರೆಸ್ ಅನ್ನು ಧರಿಸಿರುವ ನಮ್ರತಾ ಅವರು ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದು, ರೆಡ್ ಚೆರ್ರಿ ಹಣ್ಣಿನಂತೆ ಕಂಗೊಳಿಸಿದ್ದಾರೆ. ನಟಿಯ ಬ್ಯೂಟಿಯನ್ನು ನೋಡಿ ಫ್ಯಾನ್ಸ್ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅಂದ್ರೆ ಸುಳ್ಳಲ್ಲ.

ಬಿಗ್ ಬಾಸ್ ನಂತರ ನಟಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಹೊರತಾಗಿ ಇನ್ನೂ ನಟಿಯ ಯಾವುದೇ ಹೊಸ ಸಿನಿಮಾ ಅಥವಾ ಸೀರಿಯಲ್ ಕುರೀತಾಗಿ ಅಪ್ಡೇಟ್ ಹೊರ ಬಂದಿಲ್ಲ. ಅಭಿಮಾನಿಗಳು ನಟಿಯನ್ನು ತೆರೆಯ ಮೇಲೆ ನೋಡೋ ನಿರೀಕ್ಷೆಯಲ್ಲಿ ಇದ್ದಾರೆ.

ಈಗ ನಟಿ ಶೇರ್ ಮಾಡಿರೋ ಫೋಟೋಗಳಿಗೆ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಗಳು ಹರಿದು ಬಂದಿದೆ. ಕಾಮೆಂಟ್ ಗಳನ್ನು ಮಾಡಿದವರು, ತುಂಬಾ ಸುಂದರವಾಗಿದೆ, ಅಂದವಾದ ಫೋಟೋಗಳು, ಬಹಳ ಕ್ಯೂಟ್ ಆಗಿ ಕಾಣ್ತಾ ಇದ್ದೀರಿ, ಗಾರ್ಜಿಯಸ್ ಎಂದೆಲ್ಲಾ ಹಾಡಿ ಹೊಗಳಿದ್ದಾರೆ.

ನಟಿಯು ಬಿಗ್ ಬಾಸ್ ನಂತರ ಈವೆಂಟ್ ಗಳಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ತಂದೆ ತಾಯಿಯ ಜೊತೆಗೆ ಪ್ರವಾಸಕ್ಕೆ ಹೋಗಿದ್ದಂತಹ ಫೋಟೋಗಳನ್ನು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ಸ್ಟಾಗ್ರಾಂ ನಲ್ಲಿ ಡ್ಯಾನ್ಸ್ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

Leave a Comment