Samantha : ಟಾಲಿವುಡ್ ನ ಕ್ಯೂಟ್ ಕಪಲ್ ಆಗಿದ್ದಂತಹ ಸಮಂತಾ ಮತ್ತು ನಾಗ ಚೈತನ್ಯ ?Nagachaitanya) ವಿಚ್ಚೇದನ ಪಡೆದು ಈಗಾಗಲೇ ಎರಡೂವರೆ ವರ್ಷಗಳಾಗಿದೆ. ವಿಚ್ಚೇದನದ ನಂತರ ಸಮಂತಾ ಒಂಟಿಯಾಗಿಯೇ ಇದ್ದಾರೆ. ಆದರೆ ನಾಗಚೈತನ್ಯ ಶೋಭಿತಾ ಧೂಳಿಪಾಲ (Shobhita Dhulipala) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮತ್ತೆ ಜಂಟಿಯಾಗಿದ್ದಾರೆ.
ಶೀಘ್ರದಲ್ಲೇ ನಾಗಚೈತನ್ಯ ಮತ್ತು ಶೋಭಿತಾ ಮದುವೆ ನಡೆಯಲಿದೆ. ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥದ ನಂತರ ಈಗ ಇದೀಗ ಸಮಂತಾ ಒಂಟಿತನಕ್ಕೆ ಗುಡ್ ಬೈ ಹೇಳಿ ಎರಡನೇ ಮದುವೆ ಆಗ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ವಿಚ್ಚೇದನದ ನಂತರ ನಟಿ ವಿದೇಶ ಪ್ರವಾಸ, ಆಧ್ಯಾತ್ಮಿಕ ಚಿಂತನೆ, ಆರೋಗ್ಯದ ಕಾಳಜಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.
ಸಮಂತಾ (Samantha) ಸಹಾ ಜೀವನದಲ್ಲಿ ಸಂಗಾತಿಯನ್ನು ಆರಿಸಿಕೊಳ್ಳಬೇಕು ಎನ್ನುವುದು ಈಗ ಅನೇಕರ ಮಾತಾಗಿದೆ. ಇವೆಲ್ಲವುಗಳ ನಡುವೆ, ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಅಭಿಮಾನಿಯೊಬ್ಬರಿಂದ ಮದುವೆ ಪ್ರಸ್ತಾಪ ಬಂದಿದೆ. ವಿಶೇಷ ಏನೆಂದರೆ ಅಭಿಮಾನಿಯ ಈ ಮದುವೆ ಪ್ರಸ್ತಾಪಕ್ಕೆ ಸಮಂತಾ ಅವರು ಸಹಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅಭಿಮಾನಿಯು ಸಮಂತಾಗೆ ಪ್ರಪೋಸಲ್ ಇಟ್ಟ ಅಭಿಮಾನಿ, ಸಮಂತಾಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ ಅದರಲ್ಲಿ ನಾನೂ ಒಬ್ಬ, ಒಂದೇ ಒಂದು ಅಭಿಮಾನಿ ಇದ್ದರೆ, ಅದು ನಾನು. ಈ ಜಗತ್ತು ಸಮಂತಾ ವಿರುದ್ಧವಾದರೆ, ನಾನು ಜಗತ್ತಿನ ವಿರುದ್ಧ” ಎಂದಿದ್ದಾರೆ. ಅಲ್ಲದೇ ಆತ ಮತ್ತೊಂದು ಕಾಮೆಂಟ್ ನಲ್ಲಿ ಇನ್ನೊಂದಷ್ಟು ಮಾತುಗಳನ್ನ ಹೇಳಿದ್ದಾರೆ.
ಸಮಂತಾ ದುಃಖ ಪಡಬೇಡ. ನಿನಗಾಗಿ ನಾನಿದ್ದೇನೆ. ಎರಡು ವರ್ಷದಲ್ಲಿ ಹಣ ಗಳಿಸುತ್ತೇನೆ. ಇಷ್ಟವಾದರೆ ಮದುವೆಯಾಗೋಣ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗೆ ಪ್ರತಿಕ್ರಿಯೆ ನೀಡಿರುವ ಸಮಂತಾ, “ನನಗೆ ಅರಿವಾಗಿದೆ” ಎಂದು ಉತ್ತರ ಕೊಟ್ಟಿದ್ದಾರೆ. ಸಮಂತಾ ಅವರ ಪ್ರತಿಕ್ರಿಯೆ ನೋಡಿ ಅನೇಕರು ನಟಿ ಎರಡನೇ ಮದುವೆಗೆ ಮನಸ್ಸು ಮಾಡಿರಬಹುದು ಎನ್ನುತ್ತಿದ್ದಾರೆ.
John Abraham : ಗುಟ್ಕಾ ಪಾನ್ ಮಸಾಲ ಸ್ಟಾರ್ ಗಳು, ಸಾವಿನ ವ್ಯಾಪಾರಿಗಳು; ಜಾನ್ ಅಬ್ರಹಾಂ ಸಿಟ್ಟು