Bigg Boss Kannada 11: ಪ್ರೇಕ್ಷಕರು ಮಿಸ್ ಮಾಡ್ಕೊಂಡ ಆ ವಿಷ್ಯಗಳು ಈ ಸಲ ಬಿಗ್ ಬಾಸ್ ನಲ್ಲಿ ಇರುತ್ತಾ? ಇಲ್ವಾ?

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ (Bigg Boss Kannada 11) ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ವಾಹಿನಿ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆ ಮಾಡಿ ಕುತೂಹಲವನ್ನು ಕೆರಳಿಸಿರುವಾಗಲೇ ಒಂದಷ್ಟು ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿದೆ. ಕಳೆದ ಸೀಸನ್ ನಲ್ಲಿ ಮಿಸ್ ಆದ ಆ ವಿಷಯಗಳು ಈ ಸೀಸನ್ ನಲ್ಲಿ ಇರುತ್ತಾ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು.

ಹೌದು, ಬಿಗ್ ಬಾಸ್ ಮನೆಯಲ್ಲಿ ಇದ್ದ ಸೀಕ್ರೆಟ್ ರೂಮ್ (secret room bigg boss) ಕಾನ್ಸೆಪ್ಟ್ ಈಗ ಮರೆಯಾಗಿದೆ. ಮನೆಯಲ್ಲಿ ಒಬ್ಬರನ್ನ, ಇಬ್ಬರನ್ನ ಎಲಿಮಿನೇಟ್ ಅಂತ ತೋರಿಸಿ ಅವರನ್ನ ಸೀಕ್ರೆಟ್ ರೂಮ್ ನಲ್ಲಿ ಇಡ್ತಾ ಇದ್ರು. ಅಲ್ಲಿಂದ ಅವರು ಮನೆ ಮಂದಿಯ ಮಾತು ಕೇಳಿಸಿಕೊಂಡು, ಯಾರು ಹೇಗೆ ಅನ್ನೋದನ್ನ ನೋಡಿ ಮತ್ತೆ ಮನೆಯೊಳಗೆ ಬಂದ ಮೇಲೆ ಆಟಕ್ಕೆ ಹೊಸ ಟ್ವಿಸ್ಟ್ ಕೊಡ್ತಾ ಇದ್ರು.

ಈ ಸಲ ಸೀಕ್ರೆಟ್ ರೂಮ್ ಇರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಇನ್ನು ಕಳೆದ ಸೀಸನ್ ನಲ್ಲಿ ಹಾಸ್ಯ, ಮನರಂಜನೆ, ಡ್ಯಾನ್ಸ್ ಇಂತಹ ಚಟುವಟಿಕೆಗಳಿಗಿಂತ ಕಿತ್ತಾಟವೇ ಹೆಚ್ಚಾಗಿತ್ತು. ಹೆಚ್ಚು ದನಿ ಎತ್ತಿದರೆ ಹೆಚ್ಚು ದಿನ ಮನೆಯಲ್ಲಿ ಉಳಿಯಬಹುದು ಅನ್ನೋ ಆಲೋಚನೆ ಮಾಡೋ ಸ್ಪರ್ಧಿಗಳು ಸಹಾ ಸಾಮಾನ್ಯ ಆಗಿದ್ದಾರೆ.

ಈ ಸಲ ಕೇವಲ ಕಿತ್ತಾಟ ಅಲ್ಲದೇ ಮನರಂಜನೆ ಸಿಗುತ್ತಾ ಅನ್ನೋದಕ್ಕೆ ಕಾಯಲೇಬೇಕಾಗಿದೆ. ಎಲಿಮಿನೇಟ್ ಆಗಿ ಹೊರ ಬಂದವರ ಬಳಿ ಕಿಚ್ಚ ಸುದೀಪ್ ಅವರ ಮಾತುಕತೆ ಕೆಲವೇ ನಿಮಿಷಗಳಿಗೆ ಅಥವಾ ನಾಲ್ಕೈದು ಪ್ರಶ್ನೆಗಳಿಗೆ ಸೀಮಿತವಾಗಿದೆ. ಈ ಸಲ ಅವರಿಗೆ ಹೆಚ್ಚು ಸಮಯವನ್ನು ಕೊಡ್ತಾರಾ ಅನ್ನೋದನ್ನು ಸಹಾ ಕಾದು ನೋಡಬೇಕಾಗಿದೆ. ಈ ಸಲ ಏನೆಲ್ಲಾ ಹೊಸತನ ಇರುತ್ತೆ ಅನ್ನೋದು ನಿರೀಕ್ಷೆಯಾಗಿದೆ.

Astrology: ಈ ರಾಶಿಯವರಿಗೆ 18 ವರ್ಷ ರಾಜ ವೈಭೋಗ, ಬಯಸಿದ ಸುಖ, ಸಂಪತ್ತು ಸಿಗುವ ಕಾಲ ಬಂದಾಯ್ತು

Leave a Comment