Dileep Raj ಗೋವಾದಲ್ಲಿ ನೀನಾದೆ ನಾ ಜೋಡಿ, ಫೋಟೋ ನೋಡಿ ಬೇಗ ಖುಷಿ ಸುದ್ದಿ ಕೊಡಿ ಅಂತಿದ್ದಾರೆ ಫ್ಯಾನ್ಸ್

Written by Soma Shekar

Published on:

---Join Our Channel---

Dileep Raj : ಸ್ಟಾರ್ ಸುವರ್ಣ ವಾಹಿನಿಯ ನೀನಾದೆ ನಾ ಸೀರಿಯಲ್ ಜೋಡಿ ವಿಕ್ರಂ ವೇದ ಅಂದರೆ ನಟ ದಿಲೀಪ್ ರಾಜ್ (Dileep Raj) ಮತ್ತು ನಟಿ ಖುಷಿ ಶಿವು (Khushi Shivu) ಜೋಡಿ ಅಂದ್ರೆ ಸಾಕು ಅಭಿಮಾನಿಗಳಿಗೆ ಒಂದು ವಿಶೇಷವಾದ ಪ್ರೀತಿ ಇರೋದನ್ನ ನಾವು ನೋಡಬಹುದು.‌ ಈ ಜೋಡಿ ಎಷ್ಟು ಜನಪ್ರಿಯ ಅಂದ್ರೆ ನೀನಾದೆ ನಾ ಮುಗಿದ ನಂತರ ಇದೇ ಜೋಡಿ ಮುಖ್ಯ ಪಾತ್ರಗಳಲ್ಲಿ ಇರೋ ನೀನಾದೆ ನಾ ಹೊಸ ಅಧ್ಯಾಯ ಶುರುವಾಗಿದೆ.

ತೆರೆ ಮೇಲೆ ಇವರನ್ನ ನೋಡಿ ಖುಷಿ ಪಡೋ ಅವರ ಫ್ಯಾನ್ಸ್ ನಿಜ ಜೀವನದಲ್ಲೂ ಸಹಾ ಇವರನ್ನು ಜೋಡಿಯಾಗಿ ನೋಡೋದಕ್ಕೆ ಆಸೆ ಪಡ್ತಿದ್ದಾರೆ ಅನ್ನೋದು ಸತ್ಯ. ಇದೀಗ ದಿಲೀಪ್ ರಾಜ್ ಮತ್ತು ಖುಷಿ ಶಿವು ಅವರು ಗೋವಾ ಟೂರ್ ಮಾಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಖುಷಿ ಶಿವು ಅವರ ತಂದೆ ಹಾಗೂ ದಿಲೀಪ್ ಅವರ ಸಹೋದರ ಧೀರಜ್ ಶೆಟ್ಟಿ ಹಾಗೂ ತಾಯಿ ಒಟ್ಟು ಐದು ಜನರು ಗೋವಾಕ್ಕೆ ಹಾರಿದ್ದು ಅಲ್ಲಿ ಖುಷಿಯಿಂದ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದು, ಇದನ್ನ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.‌

ಇಬ್ಬರೂ ಫ್ಯಾಮಿಲಿ ಜೊತೆಯಲ್ಲಿ ಪ್ರವಾಸ ಮಾಡಿರೋದನ್ನ ನೋಡಿದ ಅಭಿಮಾನಿಗಳು ಈ ವಿಚಾರವಾಗಿ ಗುಸು ಗುಸು ಆರಂಭಿಸಿದ್ದಾರೆ.‌ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ್ದು ಏನೋ ಇದೆ ಎನ್ನುವುದಾಗಿ ಅಭಿಮಾನಿಗಳು ಮಾತನಾಡುತ್ತಿದ್ದಾರೆ.‌

ಆದಷ್ಟು ಬೇಗ ಗುಡ್ ನ್ಯೂಸ್ ಕೊಡಿ. ನಿಮ್ಮಿಬ್ಬರ ಜೋಡಿ ಸೂಪರ್ ಆಗಿದೆ. ನೀವು ಮದ್ವೆ ಆಗಿ ರಿಯಲ್ ಲೈಫ್ ನಲ್ಲಿ ಸಹಾ ಜೋಡಿಯಾಗಿ ಎಂದೆಲ್ಲಾ ಹಾರೈಸುತ್ತಿದ್ದಾರೆ. ತೆರೆ ಮೇಲೆ ಜನ ಮೆಚ್ಚಿದ ಜೋಡಿಯಾಗಿರುವ ಇವರು ತೆರೆಯ ಹಿಂದೆ ಕೂಡಾ ಉತ್ತಮವಾದ ಸ್ನೇಹವನ್ನು ಹೊಂದಿದ್ದಾರೆ.‌

Amruthadhaare ಗಂಡನ ರಾಸಲೀಲೆ ಕಂಡು ದಂಗಾದ ಮಲ್ಲಿ; ಇವಳಿಗೆ ಹೀಗೆ ಆಗಬೇಕು ಅಂದ ನೆಟ್ಟಿಗರು

Leave a Comment