Nivedita Chandan Divorce: ಕ್ಯೂಟ್ ಕಪಲ್ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್ ಗೆ ಮುಂದಾದ ಚಂದನ್ ನಿವೇದಿತಾ

Written by Soma Shekar

Published on:

---Join Our Channel---

Nivedita Chandan Divorce: ರ್ಯಾಪರ್ ಚಂದನ್ ಗೌಡ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿಯೊಂದು ಈಗ ಎಲ್ಲೆಡೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇಬ್ಬರೂ ವಿಚ್ಚೇದನ (Nivedita Chandan Divorce) ಪಡೆಯಲು ಮುಂದಾಗಿದ್ದಾರೆ ಎನ್ನುವ ವಿಷಯ ಈಗ ಎಲ್ಲಾ ಪ್ರಮುಖ ಮಾದ್ಯಮಗಳಲ್ಲಿ ಸಹಾ ಸುದ್ದಿಯಾಗಿದ್ದು, ಈ ಜೋಡಿಯ ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನು ನೀಡಿದ್ದು, ಎಲ್ಲರೂ ಅಚ್ಚರಿ ಪಡುವಂತಾಗಿದೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರು ಇಂದು ಅಂದರೆ ಜೂನ್ 7 ರಂದು ವಿಚ್ಚೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರು ಕನ್ನಡದ ಬಿಗ್ ಬಾಸ್ ಸೀಸನ್ ಐದರಲ್ಲಿ (Bigg Boss Kannada 5) ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದರು. ಅಲ್ಲಿ ಇವರ ನಡುವೆ ಸ್ನೇಹ ಮೂಡಿತ್ತು. ಆ ಸ್ನೇಹ ಪ್ರೀತಿಯಾಗಿ ಬದಲಾಗಿ, ಚಂದನ್ ಅವರು ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ್ದರು.

ನಂತರ ಇಬ್ಬರೂ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಹೀಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಮೇಲೆ ತಮ್ಮ ಫೋಟೋಗಳನ್ನು ಮತ್ತು ರೀಲ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಈ ಜೋಡಿಯನ್ನು ಸಾಕಷ್ಟು ಟ್ರೋಲ್ ಸಹಾ ಮಾಡಲಾಗುತ್ತಿತ್ತು. ಚಂದನ್ ಶೆಟ್ಟಿ ಸ್ಯಾಂಡಲ್ವುಡ್ ನಲ್ಲಿ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹೆಸರನ್ನು ಪಡೆದರೆ, ನೀವೇದಿತಾ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ.

ವೃತ್ತಿ ಜೀವನಕ್ಕೆ ಸಂಬಂಧಿಸಿದ ಹಾಗೆ ಇವರಲ್ಲಿ ಭಿನ್ನಾಭಿಪ್ರಾಯ ಮಾಡಿರಬಹುದು ಎನ್ನಲಾಗುತ್ತಿದೆ. ಕೆರಿಯರ್ ದೃಷ್ಟಿಯಿಂದ ಇಬ್ಬರೂ ಪರಸ್ಪರ ಒಪ್ಪಿಕೊಂಡು ವಿಚ್ಚೇದನವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇಂದು ಈ ಜೋಡಿ ಶಾಂತಿನಗರ ಕೋರ್ಟ್ ನಲ್ಲಿ ವಿಚ್ಚೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಈ ವಿಷಯವನ್ನು ಕೇಳಿ ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ.

Leave a Comment