Srujan Lokesh: ಚಂದನ್ ನಿವೇದಿತಾ ಡಿವೋರ್ಸ್, ಸೃಜನ್ ಲೋಕೇಶ್ ಹೆಸರು ಟ್ರೋಲ್ ಆಗ್ತಿರೋದ್ಯಾಕೆ ?

Written by Soma Shekar

Published on:

---Join Our Channel---

Srujan Lokesh: ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ಅವರ ವಿಚ್ಚೇದನದ ಸುದ್ದಿ ಈಗಾಗಲೇ ವೈರಲ್ ಆಗಿದೆ. ಇವರ ವಿಚ್ಚೇದನ ಅನೇಕರಿಗೆ ಶಾಕಿಂಗ್ ಎನಿಸಿದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಇವರ ವಿಚ್ಚೇದನದ ಕಾರಣವೇನು ಎನ್ನುವ ವಿಷಯವಾಗಿ ಒಂದಷ್ಟು ಸುದ್ದಿಗಳು ಹರಿದಾಡುತ್ತಾ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಮಗು ವಿಚಾರಕ್ಕೆ, ವಿದೇಶದಲ್ಲಿ ನೆಲೆಸುವ ವಿಚಾರಕ್ಕೆ ಚಂದನ್ ಮತ್ತು ನಿವೇದಿತಾ ನಡುವೆ ವಿಚ್ಚೇದನ ಆಗಿದೆ ಎನ್ನುವ ಸುದ್ದಿಗಳು ಹರಿದಾಡಿದೆ. ‌

ಆದರೆ ಇವೆಲ್ಲವುಗಳ ನಡುವೆ ಈ ವಿಚಾರದಲ್ಲಿ ನಟ ಸೃಜನ್ ಲೋಕೇಶ್ (Srujan Lokesh( ಅವರ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಂದನ್ ನಿವೇದಿತಾ ಬೇರೆಯಾಗಿದ್ದಕ್ಕೆ ಸೃಜನ್ ಲೋಕೇಶ್ ಕಾರಣ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಸೃಜನ್ ಲೋಕೇಶ್ ಅವರು ನಿವೇದಿತಾ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಮತ್ತು ಸೃಜನ್ ಆಪ್ತರಾಗಿದ್ದಾರೆ. ಬಿಗ್ ಬಾಸ್ ನಂತರ ನಿವೇದಿತಾ ಸೃಜನ್ ಅವರು ತೀರ್ಪುಗಾರನಾಗಿರುವ ರಾಜಾ ರಾಣಿ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿದ್ದರು. ಗಿಚ್ಚಿ ಗಿಲಿಗಿಲಿ ಮೂಲಕ ನಿವೇದಿತಾ ಜನಪ್ರಿಯತೆ ಪಡೆದಿದ್ದರು. ಹೀಗೆ ಶೋ ಗಳ ಮೂಲಕ ಚಂದನ್ ಮತ್ತು ನಿವೇದಿತಾ ಸೃಜನ್ ಅವರಿಗೆ ಆತ್ಮೀಯರಾಗಿದ್ದರು. ಆದರೆ ಈಗ ಅವರ ಸ್ನೇಹವನ್ನೇ ದಾಳ ಮಾಡಿಕೊಂಡ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ವಿಚ್ಚೇದನದ ವಿಚಾರವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದು, ಆ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿದ ಕೆಲವರು ಅಲ್ಲಿಯೂ ಸಹಾ ಸೃಜನ್ ಲೋಕೇಶ್ ಅವರ ಹೆಸರನ್ನು ತೆಗೆದು ಕಾಮೆಂಟ್ ಗಳನ್ನು ಮಾಡುತ್ತಿರುವುದು ಸಹಾ ಕಂಡು ಬಂದಿದೆ. ಒಟ್ಟಿನಲ್ಲಿ ಕೆಲವರು ಸೃಜನ್ ಅವರ ಹೆಸರನ್ನು ಕೆಡಿಸುವ ಕೆಲಸಕ್ಕೆ ಕೈ ಹಾಕಿದಂತೆ ಕಾಣುತ್ತಿದೆ.

Leave a Comment