Chaithra J Achar: ಬಿಕಿನಿ ತೊಟ್ಟ ಚೈತ್ರ ಲುಕ್ ಗೆ ಫಿದಾ ಆದ ಕಿಶನ್, ಶಾನ್ವಿ ಮತ್ತು ರುಕ್ಮಿಣಿ ವಸಂತ್; ಕಿಚ್ಚು ಹೊತ್ತಿಸಿದ ಹಾಟ್ ಲುಕ್

Written by Soma Shekar

Published on:

---Join Our Channel---

Chaithra J Achar : ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಇಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಚಿತ್ರಗಳನ್ನು ಶೇರ್ ಮಾಡಿಕೊಂಡು ಅಚ್ಚರಿ ಮೂಡಿಸುತ್ತಾರೆ. ಆದರೆ ಕನ್ನಡದ ಕೆಲವು ನಟಿಯರು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡಾಗ ತಮ್ಮ ಖಾತೆಯಲ್ಲಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿ ಬಿಡುತ್ತಾರೆ. ಆದರೆ ಈಗ ನಟಿ ಚೈತ್ರ ಆಚಾರ್ (Chaithra J AChar) ಅವರು ಕಾಮೆಂಟ್ ಸೆಕ್ಷನ್ ಆಫ್ ಮಾಡಿಲ್ಲ.

ಕನ್ನಡದಲ್ಲಿ ಗಿಲ್ಕಿ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಗಮನವನ್ನು ಸೆಳೆದಿರುವ ನಟಿ ಚೈತ್ರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಮತ್ತು ಬೋಲ್ಡ್ ಆಗಿ ಪೋಸ್ ನೀಡಿ ಕಿಚ್ಚನ್ನು ಹೊತ್ತಿಸುತ್ತಾರೆ ಈ ನಟಿ.

ನಟಿಯಾಗಿ ಮಾತ್ರವೇ ಅಲ್ಲದೇ ಗಾಯಕಿಯಾಗಿಯೂ ಗುರ್ತಿಸಿಕೊಂಡಿರುವ ಚೈತ್ರಾ ಅವರನ್ನ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸುತ್ತಿದ್ದು, ನಟಿ ಶೇರ್ ಮಾಡುವ ಫೋಟೋಗಳು ಬಹಳ ಬೇಗ ವೈರಲ್ ಆಗಿ ಸುದ್ದಿಯಾಗುತ್ತವೆ.

ನಟಿ ಈಗ ಬಹಳ ಹಾಟ್ ಆಗಿ ಕಟ್ ಔಟ್ ಮೊನಾಕಿನಿ ಧರಿಸಿ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಟೀಕೆ ಮಾಡೋರಿಗೆ ನಾನೇಕೆ ಹೆದರಬೇಕೆನ್ನುವ ಹಾಗೆ ಕಾಮೆಂಟ್ ಸೆಕ್ಷನ್ ನ ಆಫ್ ಮಾಡದೇ ಹಾಗೇ ಬಿಟ್ಟಿದ್ದಾರೆ.

ಸಾಮಾನ್ಯವಾಗಿ ನಟಿಯರು ಇಂತಹ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ ಸಂದರ್ಭಗಳಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬರುವ ಹಾಗೆಯೇ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಹರಿದು ಬರುವ ಕಾರಣ ಹಲವು ನಟಿಯರು ಫೋಟೋ ಗಳ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿ ಬಿಡುತ್ತಾರೆ.

ನಟಿ ಶೇರ್ ಮಾಡಿದ ಫೋಟೋಗಳನ್ನು ನೋಡಿ ಮತ್ತೊಬ್ಬ ನಟಿ ಶಾನ್ವಿ ಶ್ರೀ ವಾಸ್ತವ ಕಾಮೆಂಟ್ ಮಾಡಿ, ಮೇಡಂ ಬಿಕಿನಿ ಫೋಟೋಸ್ ಫೈರ್ ಅಂತ ಇಮೋಜಿ ಹಾಕಿದ್ದು, ಇದಕ್ಕೆ ಚೈತ್ರ ಅವರು ರಿಪ್ಲೈ ಕೊಡ್ತಾ, ನೀನು ನಿನ್ನೆ ನೆನಪಿಸಿದ್ದಕ್ಕೆ ಈ ಫೋಟೋಗಳನ್ನು ಶೇರ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಟಿ ರುಕ್ಮಿಣಿ ವಸಂತ್ ಮತ್ತು ಕಿಶನ್ ಬಿಳಗಲಿ ಸಹಾ ಚೈತ್ರ ಅವರ ಫೋಟೊಗಳಿಗೆ ಕಾಮೆಂಟ್ ಗಳನ್ನು ಮಾಡಿ ತಮ್ಮ ಮೆಚ್ಚುಗೆಗಳನ್ನು ನೀಡಿದ್ದಾರೆ. ಇನ್ನು ನೆಟ್ಟಿಗರು ಇದಕ್ಕೆ ಹೇಗೆ ಪ್ರತಿಕ್ರಿಯೆಗಳನ್ನು ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ನಟಿ ಕಾಮೆಂಟ್ಸ್ ಸೆಕ್ಷನ್ ಆನ್ ಇಟ್ಟಿದ್ದರೂ ಲಿಮಿಟೆಡ್ ಕಾಮೆಂಟ್ ಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ.

Leave a Comment