Ana Carolina Vieira: ಪ್ಯಾರಿಸ್ ಒಲಂಪಿಕ್ಸ್ 2024ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ದೇಶಗಳನ್ನು ಪ್ರತಿನಿಧಿಸುತ್ತಾ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವುದಕ್ಕೆ ಶ್ರಮ ಪಡುತ್ತಿದ್ದಾರೆ. ಬ್ರೆಜಿಲಿಯನ್ ಈಜುಗಾರ್ತಿ ಆ್ಯನಾ ಕೆರೊಲಿನಾ ವಿಯೆರಾ (Ana Carolina Vieira) ಈಗ ಒಲಿಂಪಿಕ್ಸ್ ನಲ್ಲಿ ಭಾಗವಹಿಸದೇ ಇರುವುದುಬಹಳ ದೊಡ್ಡ ಆಘಾತವನ್ನು ಉಂಟು ಮಾಡಿದೆ.
ಅವರನ್ನು ಒಲಂಪಿಕ್ಸ್ (Olympics) ಕ್ರೀಡಾಪಟುಗಳ ಗ್ರಾಮದಿಂದ ಹೊರಹಾಕಲಾಗಿದೆ. ಹೌದು, ಒಲಂಪಿಕ್ಸ್ ನಿಯಮಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ಈ ಸ್ಪರ್ಧಿಯ ವಿರುದ್ಧ ಇಂತಹ ಕಠಿಣ ಕ್ರಮವನ್ನು ಜರುಗಿಸಲಾಗಿದೆ. ಜುಲೈ 26ರಂದು ಆ್ಯನಾ ತನ್ನ ಗೆಳೆಯನೊಂದಿಗೆ ರಾತ್ರಿ ವೇಳೆ ಪ್ಯಾರಿಸ್ ನ ಐಫೆಲ್ ಟವರ್ ನೋಡಲು ಹೋಗಿದ್ದರು. ಆದರೆ ಹೊರಡುವ ಮುನ್ನ ಯಾರ ಅನುಮತಿಯನ್ನು ಪಡೆದುಕೊಂಡಿರಲಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಆಕೆ ಶೇರ್ ಮಾಡಿಕೊಂಡ ಪೋಸ್ಟ್ ನಿಂದ ವಿಷಯ ತಿಳಿದ ಒಲಂಪಿಕ್ಸ್ ಅಧಿಕಾರಿಗಳು ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಆಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರೆಜಿಲ್ ಈಜು ಸಮಿತಿಯ ಮುಖ್ಯಸ್ಥ ಗುಟ್ಸಾವೋ ಒಟ್ಸುಕಾ ಮಾತನಾಡಿ ನಾನು ಒಲಂಪಿಕ್ ಕ್ರೀಡಾ ಗ್ರಾಮಕ್ಕೆ ಕಷ್ಟಪಟ್ಟು ಕೆಲಸ ಮಾಡಿ ಬಂದಿದ್ದೇನೆ.
ದೇಶದ ಜನರು ದೇಶಕ್ಕಾಗಿ ಆಟ ಆಡೋದಕ್ಕೆ ಮತ್ತು ಪದಕಗಳನ್ನ ಗೆಲ್ಲುವುದಕ್ಕೆ ಬಯಸುತ್ತಾರೆ ಆದರೆ ಕೆರೋಲಿನ ನಿಯಮಗಳ ವಿರುದ್ಧವಾಗಿ ವರ್ತಿಸಿದ್ದರಿಂದ ಒಲಂಪಿಕ್ ಸಮಿತಿಯ ಗಮನಕ್ಕೆ ಅದನ್ನ ತಂದಿದ್ದೇವೆ. ಅಧಿಕಾರಿಗಳು ವಿವರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
Olympics: ಬೆಂಗಳೂರು ನಗರಕ್ಕಿಂತ ಚಿಕ್ಕ ದೇಶ, ಬಾಲ್ಯದಿಂದ ಸಂಘರ್ಷ, ಇಂದು ಬಂಗಾರದ ಪದಕ ವಿಜೇತೆ