ಪುಟ್ಟ ಮಕ್ಕಳ ಡೈಪರ್ ಬದಲಿಸ್ತಿದ್ದ ಹುಡುಗಿ ಇಂದು ಬಹುಬೇಡಿಕೆಯ ಸ್ಟಾರ್ ನಟಿ; ಅದೃಷ್ಟ ಅನ್ನೋದು ಇದನ್ನೇ

Written by Soma Shekar

Published on:

---Join Our Channel---

Bollywood Actress: ಸಿನಿಮಾ ರಂಗಕ್ಕೆ ಸ್ಟಾರ್ ಕಿಡ್ ಗಳು (Star Kids) ಬರುವಷ್ಟು ಸುಲಭವಾಗಿ ಹೊರಗಿನವರು ಬರುವುದು ಇತ್ತೀಚಿನ ವರ್ಷಗಳಲ್ಲಿ ಬಹಳ ಕಷ್ಟ ಎಂದೇ ಹೇಳಬಹುದು.‌ ಬಂದರೂ ಕೂಡಾ ಅವಕಾಶಗಳು ಸಿಗುತ್ತದೆ ಎನ್ನುವುದೂ ಅನುಮಾನವೇ. ಸ್ಟಾರ್ ಕಿಡ್ ಗಳು ಜನಪ್ರಿಯತೆ ಪಡೆದಿರುವ ಕಾರಣ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಸಿಗುತ್ತೆ ಆದರೆ ಹೊರಗಿನವರಿಗೆ ಅಂತಹ ಅವಕಾಶ ಸಿಗೋದು ತೀರಾ ವಿರಳ, ಕೆಲವೊಂದು ಸಲ ಇಲ್ಲವೇ ಇಲ್ಲ ಅಂತಾನೇ ಹೇಳಬಹುದಾಗಿದೆ.

ಆದರೆ ಎಲ್ಲಾ ಅಡೆತಡೆಗಳನ್ನು ದಾಟಿ ಒಂದಷ್ಟು ಜನರು ಸ್ಟಾರ್ ಗಳಾಗಿ ಬೆಳೆದಿದ್ದಾರೆ. ಅನೇಕ ನಟಿಯರು ಕೂಡಾ ಚಿತ್ರರಂಗದಲ್ಲಿ ಕೆರಿಯರ್ ಆರಂಭ ಮಾಡಿದ ದಿನಗಳಲ್ಲಿ ಒಂದಷ್ಟು ಅವಮಾನಗಳನ್ನು ಎದುರಿಸಿ ಸಾಧನೆಯನ್ನು ಮಾಡಿದ್ದಾರೆ. ಅಂತಹ ನಟಿಯರ ಸಾಲಿನಲ್ಲಿ ಒಬ್ಬ ನಟಿ ಇಂದು ಬಾಲಿವುಡ್ ನಲ್ಲಿ (Bollywood Actress) ಸ್ಟಾರ್ ನಟಿಯಾಗಿಯೂ, ಬಹುಬೇಡಿಕೆಯ ನಟಿಯಾಗಿಯೂ ಮಿಂಚುತ್ತಿದ್ದಾರೆ.

ಹೌದು, ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಕಿಯಾರಾ ಅಡ್ವಾಣಿಗೆ (Kiara Advani) ಇಂದು ಪರಿಚಯದ ಅಗತ್ಯವೇನೂ ಇಲ್ಲ. ಬಾಲಿವುಡ್ ಮತ್ತು ಟಾಲಿವುಡ್ ನಲ್ಲೂ ನಟಿಸಿರುವ ಈ ನಟಿ ಹೆಚ್ಚು ಗುರುತಿಸಿಕೊಂಡಿರುವುದು ಬಾಲಿವುಡ್ ನಲ್ಲಿ. ಕಿಯಾರಾ ಬಾಲಿವುಡ್ ನಲ್ಲಿ ಎಂಟ್ರಿ ಕೊಟ್ಟಾಗ ಸೋಲನ್ನು ಅನುಭವಿಸಿದ್ದರು. ಅನಂತರ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಸಕ್ಸಸ್ ನ ಹಾದಿಯಲ್ಲಿ ಸಾಗಿದರು ಕಿಯಾರಾ.

ಕಿಯಾರಾ ಸ್ಟಾರ್ ಆದ ಮೇಲೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಿನಿಮಾ ರಂಗಕ್ಕೆ ಅಡಿಯಿಡೋದಕ್ಕೆ ಮೊದಲು ತಾನು ಮಕ್ಕಳ ಡೈಪರ್ ಬದಲಾಯಿಸುತ್ತಿದೆ ಅನ್ನೋ ವಿಚಾರವನ್ನು ಹೇಳಿಕೊಂಡಿದ್ದಾರೆ. ನಟಿ ತಾನು ಬೆಳಿಗ್ಗೆ ಏಳು ಗಂಟೆಗೆ ಪ್ರೀ ಸ್ಕೂಲ್ ಗೆ ಹೋಗಿ ಮಕ್ಕಳನ್ನು ನೋಡಕೊಳ್ತಿದ್ದೆ. ಮಕ್ಕಳಿಗೆ ರೈಮ್ಸ್, ಟೇಬಲ್ಸ್ ಕಲಿಸ್ತಾ ಇದ್ದೆ. ಅವರನ್ನು ನಿರ್ವಹಣೆ ಮಾಡೋದಕ್ಕೆ ಅಲ್ಲಿ ಎಲ್ಲಾ ಕೆಲಸಗಳನ್ನು ಮಾಡಿದ್ದೆ.

ಇದೇ ವೇಳೆ ಮಕ್ಕಳ ಡೈಪರ್ ಗಳನ್ನು ಸಹಾ ಬದಲಿಸಿದ್ದೆ ಎನ್ನುವ ಮಾತನ್ನು ಅವರು ಹೇಳಿಕೊಂಡಿದ್ದಾರೆ. ಕಿಯಾರಾ ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ (M S Dhoni, the untold story) ಸಿನಿಮಾದಲ್ಲಿ ಧೋನಿ ಅವರ ಪತ್ನಿ ಸಾಕ್ಷಿಯ ಪಾತ್ರವನ್ನು ಮಾಡಿದ್ದರು. ‌ಈ ಪಾತ್ರವು ನಟಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತು. ತೆಲುಗಿನಲ್ಲಿ ರಾಮ್ ಚರಣ್, ಮಹೇಶ್ ಬಾಬು ರಂತಹ ಸ್ಟಾರ್ ಗಳ ಜೊತೆಗೆ ನಟಿ ತೆರೆಯನ್ನು ಹಂಚಿಕೊಂಡಿದ್ದಾರೆ.

Leave a Comment