Urfi Javed : ಸಿನಿಮಾ, ಸೀರಿಯಲ್ ಅಥವಾ ಶೋಗಳಿಗಿಂತ ಹೆಚ್ಚಾಗಿ ತನ್ನ ಡ್ರೆಸ್ ಗಳಿಂದಲೇ ಸಾಕಷ್ಟು ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್. ನಟಿಯು ತನ್ನ ಚಿತ್ರ ವಿಚಿತ್ರ ಬೋಲ್ಡ್ ಡ್ರೆಸ್ ಗಳಿಂದಲೇ (bold dress) ಟ್ರೋಲ್ ಆಗುತ್ತಾರೆ. ಈಗ ನಟಿಯು ಇತ್ತೀಚೆಗೆ ಶೋವೊಂದರಲ್ಲಿ ಬೋಲ್ಡ್ ಆಗಿ ಮಾತನಾಡಿದ ವಿಚಾರದಿಂದ ಸುದ್ದಿಯಾಗಿದ್ದ ಮಾಡೆಲ್ ಕಂ ನಟಿ ಉರ್ಫಿ ಜಾವೇದ್(Urfi Javed) ತನಗಾದ ಕೆಟ್ಟ ಅನುಭದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಾಡೆಲ್ ಹಾಗೂ ನಟಿಯೂ ಆಗಿರುವ ಉರ್ಫಿ ಇತ್ತೀಚಿಗೆ ತನಗೆ ಹುಡುಗನೊಬ್ಬನಿಂದ ಆದಂತಹ ಒಂದು ಕೆಟ್ಟ ಅನುಭವದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬೇಸರ ಹೊರ ಹಾಕಿದ್ದಾರೆ ಮತ್ತು ನಟಿ ಹೇಳಿದ ವಿಷಯ ಕೇಳಿ ಅನೇಕರು ಶಾಕ್ ಆಗಿದ್ದಾರೆ.
ಬಾಲಕನೊಬ್ಬ ಉರ್ಫಿಯನ್ನ ಕೇಳಿದ ಅಸಭ್ಯ ಪ್ರಶ್ನೆಯಿಂದ ನಟಿ ಮುಜುಗರ ಪಡುವಂತಾಗಿದೆ.
ನಿನ್ನೆ ನನ್ನ ಕುಟುಂಬದವರ ಮುಂದೆ ನನಗೆ ಮುಜುಗರವಾಗುವ ವಿಚಾರವೊಂದು ನಡೆದಿದೆ. ಹುಡುಗರ ಗುಂಪೊಂದು ನಾನು ಪಾಪರಾಜಿಗಳಿಗೆ ಪೋಸ್ ನೀಡುವಾಗ ಕಾಮೆಂಟ್ ಮಾಡಿದರು. ಒಬ್ಬ ಹುಡುಗ ಕಾಮೆಂಟ್ ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ? ಅಂತ ಕೇಳಿದ. ಅವನಿಗೆ ಅಂದಾಜು 15 ವರ್ಷ ವಯಸ್ಸಿರಬಹುದು.
ನನ್ನ ಕುಟುಂಬ ಮತ್ತು ತಾಯಿಯ ಎದುರಲ್ಲಿ ಅವನು ಹಾಗೆ ಕೇಳಿದ. ಇದರಿಂದ ನನ್ನ ತಾಯಿಗೆ ಬೇಸರವಾಯಿತು. ಆ ಹುಡುಗನಿಗೆ ಅಲ್ಲೇ ಬಾರಿಸಬೇಕೆನಿಸಿತು. ಮಹಿಳೆಯರು ಹಾಗೂ ಇತರರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿಕೊಡಿ ಎಂದು ಉರ್ಫಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Bigg Boss: ಬದಲಾದ್ರು ಬಿಗ್ ಬಾಸ್ ನಿರೂಪಕ, ಹೊರ ಬಂತು ಅಧಿಕೃತ ಪ್ರೊಮೋ, ಇನ್ಮೇಲೆ ಹೊಸ ಹೋಸ್ಟ್ ಜೊತೆ ಹೊಸ ಸೀಸನ್