Aryan Khan: ನಿಮ್ಮ ಮಗನನ್ನ ಹೀರೋ ಮಾಡ್ತೀವಿ, ಶಾರೂಖ್ ಮಗನಿಗಾಗಿ ಬಾಲಿವುಡ್ ನಲ್ಲಿ ಸ್ಪರ್ಧೆ ಶುರುವಾಯ್ತು

Written by Soma Shekar

Published on:

---Join Our Channel---

Aryan Khan: ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ (Shah Rukh Khan) ಅವರ ಮಕ್ಕಳು ಸಹಾ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದ್ದಾರೆ. ಶಾರೂಖ್ ಅವರ ಮಗಳು ಸುಹಾನಾ ನಟಿಯಾಗಿ ಮತ್ತು ಮಗ ಆರ್ಯನ್ ಖಾನ್ (Aryan Khan)ನಿರ್ದೇಶನದ ಕಡೆಗೆ ಗಮನ ನೀಡಿದ್ದಾರೆ. ಆದರೆ ಹೀರೋ ಲುಕ್ ಇರೋ ಆರ್ಯನ್ ನ ಹೀರೋ ಆಗಿ ಲಾಂಚ್ ಮಾಡೋಕೆ ಬಹಳಷ್ಟು ಜನ ನಿರ್ಮಾಪಕರು ಕಾಯ್ತಿದ್ದಾರೆ.

ಶಾರೂಖ್ ಖಾನ್ ಪುತ್ರನನ್ನ ಲಾಂಚ್ ಮಾಡೋದು ಒಂದು ಪ್ರತಿಷ್ಠೆಯ ವಿಚಾರ ಅನ್ನೋದು ಕೆಲವರ ಭಾವನೆ ಆಗಿದ್ದು, ಕರಣ್​ ಜೋಹರ್​, ಆದಿತ್ಯ ಚೋಪ್ರಾ, ಫರ್ಹಾ ಖಾನ್​, ರಾಕೇಶ್​ ಓಂ ಪ್ರಕಾಶ್​ ಮೆಹ್ರಾ ಮುಂತಾದ ಜನಪ್ರಿಯ ನಿರ್ಮಾಪಕರು ಈ ವಿಚಾರವಾಗಿ ಶಾರುಖ್​ ಖಾನ್​ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಆದರೆ ಶಾರೂಖ್ ಈ ಬಗ್ಗೆ ಯಾವುದೇ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತನ್ನು ನೀಡಿಲ್ಲ‌ ಎನ್ನಲಾಗಿದೆ. ಮಗ ನಿರ್ದೇಶನ ಮಾಡುತ್ತಿರುವ ವೆಬ್ ಸೀರೀಸ್ ಮೊದಲು ಮುಗಿಯಲಿ ಎನ್ನುವುದು ಸದ್ಯ ಶಾರೂಖ್ ಅವರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಆದರೆ ನಿರ್ಮಾಪಕರಂತೂ ಆರ್ಯನ್ ಕಡೆ ಹೆಚ್ಚು ಗಮನ ನೀಡಿದ್ದಾರೆ.

ಆರ್ಯನ್ ಖಾನ್ ಸ್ಟಾರ್ ಡಮ್ (Stardom) ಹೆಸರಿನ ವೆಬ್ ಸೀರೀಸ್ ನಿರ್ದೇಶನ ಮಾಡುತ್ತಿದ್ದು ಇದು ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದು 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅದಾದ ನಂತರ ಆರ್ಯನ್ ಹೀರೋ ಆಗಿ ಲಾಂಚ್ ಆಗ್ತಾರಾ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಫ್ಯಾನ್ಸ್.

Milana Nagaraj: ಹೆಣ್ಣು ಮಗುವಿನ ತಾಯಿಯಾದ ಮಿಲನಾ ನಾಗರಾಜ್; ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

Leave a Comment