Manushi Chillar: ನನಗೆ ನಿಮ್ಮ ಬಿಕಿನಿಯೇ ಬೇಕು, ಮಾಜಿ ಮಿಸ್ ವರ್ಲ್ಡ್ ಮುಂದೆ ಬಾಲಿವುಡ್ ನಟಿಯ ಬೇಡಿಕೆ

Written by Soma Shekar

Published on:

---Join Our Channel---

Manushi Chillar: 2017 ರಲ್ಲಿ ಮಿಸ್ ವರ್ಲ್ಡ್ (Miss World) ಕಿರೀಟವನ್ನು ಗೆದ್ದು, ಅದನ್ನು ಧರಿಸಿ ಮಿಂಚಿದವರು ಮಾನುಷಿ ಚಿಲ್ಲರ್ (Manushi chillar). ಸಿನಿಮಾ ರಂಗಕ್ಕೂ ಎಂಟ್ರಿ ನೀಡಿರುವ ಮಾನುಷಿಗೆ ಈಗ ಪರಿಚಯದ ಅಗತ್ಯ ಖಂಡಿತ ಇಲ್ಲ. ಮತ್ತೊಂದು ಕಡೆ ಮಾನುಷಿ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯರಾಗಿದ್ದು, ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತಾರೆ.‌

ಇತ್ತೀಚಿಗೆ ಮಾನುಷಿ ಒಂದು ಸುಂದರವಾದ ದ್ವೀಪಕ್ಕೆ ವೆಕೇಷನ್ ಮೂಡ್ ಅನ್ನ ಎಂಜಾಯ್ ಮಾಡಲು ಹೋಗಿದ್ದು, ಈ ವೇಳೆ ಅಲ್ಲಿನ ಮನೋಹರವಾದ ಬೀಚ್ ಒಂದರಲ್ಲಿ ಕ್ಲಿಕ್ಕಿಸಿಕೊಂಡ ತಮ್ಮ ಸಖತ್ ಬೋಲ್ಡ್ ಫೋಟೋಗಳನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‌

ಫೋಟೋಗಳನ್ನು ಶೇರ್ ಮಾಡಿದ ಮಾನುಷಿ ಚಿಲ್ಲರ್ ಅವರು ಅದರ ಜೊತೆಗೆ ನಿಮ್ಮೆಲ್ಲರ ಜೊತೆಗೆ ಇಲ್ಲಿನ ರೋಮಾಂಚಕರವಾದ ಅನುಭವವನ್ನು ಶೇರ್ ಮಾಡಿಕೊಳ್ಳುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ‌

ಸೂರ್ಯನ ಬೆಳಕಿಗೆ ತನ್ನ ಮೈಮಾಟವನ್ನು ಒಡ್ಡಕೊಂಡಿರುವ ಮಾನುಷಿ ಅವರ ದೇಹ ಸೌಂದರ್ಯವಂತೂ ಹೊಳೆಯುತ್ತಿದೆ ಎಂದು ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನ ಆಡಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಿಸಿಯನ್ನು ಏರಿಸುತ್ತಿದೆ.

ಮಾನುಷಿ ಚಿಲ್ಲರ್ ಶೇರ್ ಮಾಡಿಕೊಂಡ ಫೋಟೋಗೆ ನಟಿ ಅಲಾಯಾ (Alaya) ಕಾಮೆಂಟ್ ಮಾಡಿದ್ದಾರೆ. ಅವರು ಮಾನುಷಿ ಎದುರು ಒಂದು ಬೇಡಿಕೆಯನ್ನು ಇಟ್ಟಿದ್ದು ನೀವು ಧರಿಸಿರುವ ಬಿಕಿನಿ ನನಗೆ ಬೇಕೆಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಮಾನುಷಿ ಶೀಘ್ರದಲ್ಲೇ ತಲುಪಿಸಲಾಗುತ್ತೆ ಎಂದಿದ್ದಾರೆ.

Leave a Comment