Bigg Boss: ವಿಜಯ್ ಸೇತುಪತಿ VS ನಯನತಾರಾ, ಶುರುವಾಯ್ತು ಜಿದ್ದಾಜಿದ್ದಿ ಪೈಪೋಟಿ, ಇಬ್ಬರಲ್ಲಿ ಗೆಲುವು ಯಾರಿಗೆ?

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ‌ ಶೋಗೆ ಸ್ಪರ್ಧಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರುತ್ತಾರೆ ಇದರ ನಿರೂಪಕರು. ಬಿಗ್ ಬಾಸ್ ಪ್ರಸಾರವಾಗುವ ಪ್ರತಿ ಭಾಷೆಯಲ್ಲೂ ಸಹಾ ಅಲ್ಲಿನ ಜನಪ್ರಿಯ ಸ್ಟಾರ್ ನಟರು ಶೋನ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan), ಕನ್ನಡದಲ್ಲಿ ಕಿಚ್ಚ ಸುದೀಪ್ (Sudeep), ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ಕಮಲ ಹಾಸನ್ ಹಾಗೂ ಮಲೆಯಾಳಂ ನಲ್ಲಿ ಮೋಹನ್ ಲಾಲ್.

ಆದರೆ ಈ ಬಾರಿ ಬಿಗ್ ಬಾಸ್ ತಮಿಳಿನ ಹೊಸ ಸೀಸನ್ ಅಂದರೆ ಸೀಸನ್ ಎಂಟನ್ನ ನಿರೂಪಣೆ ಮಾಡೋಕಾಗಲ್ಲ ಎಂದು ನಟ ಕಮಲ ಹಾಸನ್ (Kamal Hassan) ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿಯಾಗಿದೆ. ಅವರು ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ ಕೂಡಲೇ ಈ ಬಾರಿ ತಮಿಳು ಬಿಗ್ ಬಾಸ್ ಅನ್ನು ಹೋಸ್ಟ್ ಮಾಡೋದು ಯಾರು ಎನ್ನುವ ಹೊಸ ಚರ್ಚೆಯೊಂದು ಶುರುವಾಗಿದೆ.

ತಮಿಳು ಬಿಗ್ ಬಾಸ್ ಗೆ ಈಗಾಗಲೇ ಸ್ಟಾರ್ ನಟರುಗಳ ಹೆಸರು ಕೇಳಿ ಬಂದಿದೆ. ಅದರಲ್ಲಿ ವಿಜಯ್ ಸೇತುಪತಿ ಹೆಸರು ಜೋರಾಗಿದ್ದು, ಅನೇಕರು ಈ ನಟನೇ ಈ ಸೀಸನ್ ನ ನಿರೂಪಕ ಎಂದು ನಿರ್ಧರಿಸಿರುವಾಗಲೇ ಹೊಸದೊಂದು ಶಾಕಿಂಗ್ ವಿಚಾರವು ಹೊರಗೆ ಬಂದಿದ್ದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಅದೇನೆಂದರೆ ತಮಿಳು ಬಿಗ್ ಬಾಸ್ ನ ಹೊಸ ಸೀಸನ್ ಅನ್ನು ನಟಿಯು ಹೋಸ್ಟ್ ಮಾಡುತ್ತಾರೆ ಎನ್ನುವುದಾಗಿದೆ.

ಮಹಿಳೆಯೊಬ್ಬರು ಬಿಗ್ ಬಾಸ್ ಹೋಸ್ಟ್ ಮಾಡುತ್ತಾರೆನ್ನುವ ಸುದ್ದಿಯ ಬೆನ್ನಲ್ಲೇ ಈಗ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ (Nayanthara) ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆ ಎನ್ನುವ ಸುದ್ದಿ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಕಾರ್ಯಕ್ರಮದ ಸಂಘಟಕರು ಸಹಾ ನಟಿಯನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚೆಗಳನ್ನು ನಡೆಸಿದ್ದಾರೆ ಎನ್ನುವ ವಿಷಯ ಹರಿದಾಡಿದೆ. ನಯನತಾರಾ ಸಹಾ ಒಪ್ಪಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Shravani Subramanya: ಸುಬ್ಬು ಫ್ಯಾಮಿಲಿಗೆ ಅವಮಾನ, ಕಾಂತಮ್ಮ ಸುಂದರನ ದುರಾಸೆಗೆ ಮಾನ ಹೋಗೋ ಪರಿಸ್ಥಿತಿ

Leave a Comment