Vijay Sethupathi: ಕಮಲ್ ಹಾಸನ್ ಜಾಗಕ್ಕೆ ಬಂದ ವಿಜಯ್ ಸೇತುಪತಿಗೆ ಬಿಗ್ ಬಾಸ್ ನಿರೂಪಣಗೆ ಭಾರೀ ಸಂಭಾವನೆ

Written by Soma Shekar

Published on:

---Join Our Channel---

Vijay Sethupathi: ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ (Bigg Boss Show) ಪ್ರಸಾರವಾಗುವ ಎಲ್ಲಾ ಭಾಷೆಗಳಲ್ಲೂ ಸಹಾ ದೊಡ್ಡ ಜನಪ್ರಿಯತೆ ಮತ್ತು ಅಭಿಮಾನಿಗಳ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ತಮಿಳಿನಲ್ಲಿ ಬಿಗ್ ಬಾಸ್ 2017 ರಲ್ಲಿ ಆರಂಭವಾಗಿದ್ದು, ಕಮಲ ಹಾಸನ್ (Kamal Haasan) ಈ ಶೋವನ್ನು ನಿರೂಪಣೆ ಮಾಡಿಕೊಂಡು ಬಂದಿದ್ದರು.

ಈ ಬಾರಿ ನಟ ತಮ್ಮ ಕೆಲವೊಂದು ಕಮಿಟ್ಮೆಂಟ್ ಗಳ ಕಾರಣದಿಂದ ಬಿಗ್ ಬಾಸ್ ಅನ್ನು ಇನ್ಮುಂದೆ ನಿರೂಪಣೆ ಮಾಡಲಾಗುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದಾಗಿದೆ. ಕಮಲ ಹಾಸನ್ ಅವರ ಈ ಘೋಷಣೆ ನಂತರ ಬಿಗ್ ಬಾಸ್ ನ ಹೊಸ ಸೀಸನ್ ನಿರೂಪಣೆ ಮಾಡೋದ್ಯಾರು? ಎನ್ನುವ ಚರ್ಚೆ ಆರಂಭವಾಗಿದೆ.

ಸಿಂಬು, ವಿಜಯ್ ಸೇತುಪತಿ (Vijay Sethupathi) ಮತ್ತು ನಯನತಾರ ಹೆಸರುಗಳು ಮುಖ್ಯವಾಗಿ ಹರಿದಾಡುತ್ತಿತ್ತು. ಆದರೆ ಈಗ ವಿಜಯ್ ಸೇತುಪತಿ ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆ ಎನ್ನಲಾಗಿದೆ. ವಿಜಯ್ ಸೇತುಪತಿ ಅವರಿಗೆ ಶೋ ನಿರೂಪಣೆಗೆ ಸುಮಾರು 50 ಕೋಟಿಗಿಂತಲೂ ಅಧಿಕ ಸಂಭಾವನೆ ನೀಡಲಾಗುತ್ತಿದೆ ಎಂದು ಸಹಾ ತಿಳಿದು ಬಂದಿದೆ.

ಕಮಲ ಹಾಸನ್ ಅವರಿಗೆ ಕಳೆದ ಸೀಸನ್ ನಲ್ಲಿ 120 ಕೋಟಿ ಸಂಭಾವನೆ ನೀಡಲಾಗಿತ್ತು. ಕಳೆದ ಸೀಸನ್ ನಲ್ಲಿ ನಟ ತೆಗೆದುಕೊಂಡ ಕೆಲವು ನಿರ್ಧಾರಗಳು ತೀವ್ರ ಟೀಕೆಗೆ ಒಳಗಾಗಿದ್ದವು ಎನ್ನುವುದು ಸಹಾ ನಿಜ. ಇನ್ನೂ ವಿಜಯ್ ಸೇತುಪತಿ ಶೋ ಹೇಗೆ ನಡೆಸಿಕೊಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಮೂಡಿದೆ.

Leave a Comment