Bigg Boss: ಬದಲಾದ್ರು ಬಿಗ್ ಬಾಸ್ ನಿರೂಪಕ, ಹೊರ ಬಂತು ಅಧಿಕೃತ ಪ್ರೊಮೋ, ಇನ್ಮೇಲೆ ಹೊಸ ಹೋಸ್ಟ್ ಜೊತೆ ಹೊಸ ಸೀಸನ್

Written by Soma Shekar

Published on:

---Join Our Channel---

Bigg Boss: ಬಿಗ್ ಬಾಸ್ (Bigg Boss) ಕಾರ್ಯಕ್ರಮ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಎಲ್ಲಾ ಕಡೆಗಳಲ್ಲೂ ಸಾಕಷ್ಟು ಜನ ಮೆಚ್ಚುಗೆ ಪಡೆದಿದೆ. ಈ ಕಾರ್ಯಕ್ರಮದಲ್ಲಿ ವಾರವೆಲ್ಲಾ ಕಾಣುವ ಸ್ಪರ್ಧಿಗಳು ಎಷ್ಟು ಮುಖ್ಯವೋ ವಾರಾಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರುವ ನಿರೂಪಕ ಸಹಾ ಅಷ್ಟೇ ಮುಖ್ಯವಾಗಿರುತ್ತಾರೆ. ಬಿಗ್ ಬಾಸ್ ನಿರೂಪಣೆಗೆ ವಿಶೇಷವಾದ ಮನ್ನಣೆ ಇದೆ.

ಹಿಂದಿಯಲ್ಲಿ ಸೀಸನ್ ನಾಲ್ಕರಿಂದಲೂ ಸಲ್ಮಾನ್ ಖಾನ್ (Salman Khan) ನಡೆಸಿಕೊಡುತ್ತಿದ್ದು, ಈಗಾಗಲೇ ಹದಿನೆಂಟು ಸೀಸನ್ ಮುಗಿದಿದೆ. ಕನ್ನಡದಲ್ಲಿ ಹತ್ತು ಸೀಸನ್ ಆಗಿದ್ದು ಕಿಚ್ಚ ಸುದೀಪ್ (Kichcha Sudeep) ಅವರೇ ಎಲ್ಲಾ ಸೀಸನ್ ಗಳ ನಿರೂಪಣಾ‌ ಸಾರಥ್ಯ ವಹಿಸಿದ್ದಾರೆ.‌ ಇನ್ನು ತಮಿಳಿನಲ್ಲಿ ಹಿರಿಯ ನಟ ಕಮಲ ಹಾಸನ್ ನಿರೂಪಣೆ ಮಾಡುತ್ತಾ ಬಂದಿದ್ದರು.

ಆದರೆ ಈ ಬಾರಿ ಕಮಲಹಾಸನ್ (Kamal Haasan) ಅವರು ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ದಾರೆ. ಅವರ ನಂತರ ಯಾರು ಎನ್ನುವ ಪ್ರಶ್ನೆಗೆ ವಿಜಯ್ ಟಿವಿ ಅಧಿಕೃತ ಉತ್ತರ ನೀಡಿದ್ದು, ಹೊಸ ಸೀಸನ್ ಅನ್ನು ವಿಜಯ್ ಸೇತುಪತಿ (Vijay Sethupathi) ಹೋಸ್ಟ್ ಮಾಡುತ್ತಾರೆಂದು ಅಧಿಕೃತ ಪ್ರೊಮೋವನ್ನು ಬಿಡುಗಡೆ ಮಾಡಿದೆ.

ವಿಜಯ್ ಸೇತುಪತಿ ಅವರು ನಿರೂಪಣೆಯಲ್ಲಿ ಕಮಲ ಹಾಸನ್ ಅವರನ್ನು ಮೀರಿಸುತ್ತಾರಾ? ಜನ ಮೆಚ್ಚುಗೆ ಪಡೆಯುತ್ತಾರಾ? ಅನ್ನೋದು ಈಗ ಬಿಗ್ ಬಾಸ್ ಶೋ‌ನ ಅಭಿಮಾ‌ನಿಗಳನ್ನು ಕಾಡುತ್ತಿರುವ ಪ್ರಶ್ನೆಗಳಾಗಿದ್ದು, ಉತ್ತರಕ್ಕಾಗಿ ಕಾದು ನೋಡಬೇಕಾಗಿದೆ.

Pawan Kalyan: ಪ್ರವಾಹ ಪೀಡಿತರ ನೆರವಿಗೆ ಯಾರೊಬ್ಬರೂ ನೀಡದಷ್ಟು ದೇಣಿಗೆ ಘೋಷಿಸಿದ ಪವನ್ ಕಲ್ಯಾಣ್, ನಟನ ದೇಣಿಗೆ ಬರೋಬ್ಬರಿ

Leave a Comment