Bigg Boss Kannada ::ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada) ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಹವಾ ಮನೆಯಲ್ಲಿ ಜೋರಾಗಿಯೇ ಇದೆ. ಮನೆಗೆ ಬಂದ ಮೊದಲ ದಿನವೇ ಇಬ್ಬರನ್ನೂ ಹೊರಗೆ ಕಳಿಸೋದು ಹೇಗೆ ಅನ್ನೋ ಚರ್ಚೆಗಳು ಆರಂಭವಾಗಿದೆ. ಬಿಗ್ ಬಾಸ್ ಅಡುಗೆ ಮನೆಯ ಸಂಪೂರ್ಣ ಅಧಿಕಾರವನ್ನು ಶೋಭಾ ಮತ್ತು ರಜತ್ ಅವರಿಗೆ ನೀಡಿದ್ದಾರೆ. ಅಡುಗೆ ಮನೆಯಲ್ಲಿ ಏನೇ ಬೇಕಾದರೂ ಶೋಭಾ ಅಥವಾ ರಜತ್ ಅವರಿಂದ ಅನುಮತಿ ಪಡೆಯಬೇಕಾಗಿದೆ. ಕ್ಯಾಪ್ಟನ್ ಆಗಿರೋ ಭವ್ಯ ಕೂಡಾ ಶೋಭಾ ಬಳಿ ಅನುಮತಿ ಕೇಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಬಿಗ್ ಬಾಸ್.
![](https://news9kannada.com/wp-content/uploads/2024/11/IMG-20241119-WA0006.jpg)
ಈಗ ಬಿಗ್ ಬಾಸ್ ಶೋಭಾ ಮತ್ತು ರಜತ್ ಇಬ್ಬರಲ್ಲಿ ಒಬ್ಬರನ್ನು ನಾಯಕತ್ವದಿಂದ ಹೊರಗಿಡುವ ಟಾಸ್ಕ್ ಅನ್ನು ನೀಡಿದ್ದು, ಈ ವೇಳೆ ಮಂಜು (Ugram Manju) ಶೋಭಾ ಹೆಸರನ್ನು ತಗೊಂಡಿದ್ದು, ರೂಲ್ಸ್ ಅಂಡ್ ರೆಗ್ಯುಲೇಷನ್ ನ ಅಲ್ಲಾಡಿಸಿದ್ದು ಶೋಭಾ ಅಂತ ನನಗೆ ಅನಿಸುತ್ತೆ ಎಂದಿದ್ದಾರೆ. ಇದಕ್ಕೆ ಶೋಭಾ ಸಿಟ್ಟಾಗಿದ್ದಾರೆ. ಮಂಜುಗೆ ಕ್ಲಾರಿಟಿನೇ ಇಲ್ಲ, ನಾನ್ ಸೆನ್ಸ್ ರೀಸನ್ ಕೊಡ್ತಿದ್ದಾರೆ ಅಂದಿದ್ದು ಮಂಜು ಕೂಡಾ ಆಕ್ರೋಶದಿಂದ ಶೋಭಾ ಮೇಲೆ ಅರಚಾಡಿದ್ದಾರೆ.
![](https://news9kannada.com/wp-content/uploads/2024/11/IMG-20241119-WA0001.jpg)
ಆಗ ಶೋಭಾ ಹೇಳೋದನ್ನ ಕೇಳಿಸಿಕೊಳ್ಳಿ ಅಂತ ಗಟ್ಟಿಯಾಗಿ ಅರಚಿದ್ದಾರೆ. ಇದಾದ ಮೇಲೆ ಹೊರಗೆ ಬಂದ ಹನುಮಂತ ಮತ್ತು ಧನರಾಜ್ ಮಾತನಾಡಿಕೊಂಡಿದ್ದಾರೆ. ಹನುಮಂತ ಯಪ್ಪಾ, ಏನು ಮಾತಾಡ್ತಾಳೆ, ನಾವು ನೀವೇನಾದ್ರು ಹೋದ್ರೆ ಉಚ್ಚೇನೇ ಹೊಯ್ಕೊಳ್ತೀವಿ ಅಂದಿದ್ದಾರೆ. ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೊ ನೋಡಿದಾಗ ಶೋಭಾ ವಾಕ್ಸಮರಕ್ಕೆ ದೊಡ್ಮನೆ ಮೌನಕ್ಕೆ ಜಾರಿದಂತೆ ಕಂಡಿದೆ.
![](https://news9kannada.com/wp-content/uploads/2024/11/IMG-20241119-WA0003.jpg)
ಹೊಸ ಪ್ರೊಮೊ ನೋಡಿದ ಪ್ರೇಕ್ಷಕರು ಈಗ ಬಿಗ್ ಬಾಸ್ ಗೆ (BBK 11) ಈಗ ಖಂಡಿತ ಒಂದು ಹೊಸ ಕಳೆ ಬಂತು. ಅಸಲಿ ಆಟ ಈಗ ಶುರುವಾಗಿದೆ. ಶೋಭಾ ರಾಕ್ ಮಂಜು ಶಾಕ್, ಇಂತಹ ಒಂದು ಹೆಣ್ಣು ಹುಲಿ ಆ ಮನೆಗೆ ಬೇಕಾಗಿತ್ತು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಾ ಇಂದಿನ ಎಪಿಸೋಡ್ ನೋಡೋದಕ್ಕೆ ಉತ್ಸುಕರಾಗಿರೋದನ್ನ ತಮ್ಮ ಮಾತುಗಳ ಮೂಲಕವೇ ತಿಳಿಸಿದ್ದಾರೆ.