Bigg Boss Kannada : ಬಿಗ್ ಬಾಸ್ ಆರಂಭಕ್ಕೆ ದಿನಗಣನೆ, ಮುಗಿಯಲಿದೆ ಈ ಮೂರು ಜನಪ್ರಿಯ ಸೀರಿಯಲ್ ಗಳು

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ನ ಹೊಸ ಸೀಸನ್ (Bigg Boss Kannada) ಒಂದು ಆರಂಭವಾಗುತ್ತೆ ಅನ್ನೋದಾದ್ರೆ ಆಗ ಕಿರುತೆರೆಯ ಕೆಲವೊಂದು ಸೀರಿಯಲ್ ಗಳು ಮುಕ್ತಾಯವಾಗಬೇಕಾಗುತ್ತದೆ. ಈಗ ಕನ್ನಡದಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಅಂದರೆ ಸೀಸನ್ 11 ರ ಆರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಅಕ್ಟೋಬರ್ ಮೂರನೇ ವಾರದಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದ್ದು, ಈಗ ಯಾವ ಸೀರಿಯಲ್ ಗಳು ಮುಕ್ತಾಯವಾಗುತ್ತದೆ ಅನ್ನೋದನ್ನು ತಿಳಿಯೋಣ.

ತನ್ವಿ ಬಾಲರಾಜ್, ಚಂದನ್ ಗೌಡ, ಶರ್ಮಿಳಾ ಚಂದ್ರಶೇಖರ್, ಎಸ್ ನಾರಾಯಣ್, ಜ್ಯೋತಿ ಕಿರಣ್, ಮಂಜು ಪಾವಗಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಇರುವ ಅಂತರಪಟ (Antarapata) ಸೀರಿಯಲ್ ಮುಗಿಯಬಹುದು ಎನ್ನಲಾಗಿದ್ದು, ಸ್ವಪ್ನ ಕೃಷ್ಣ ಅವರ ನಿರ್ಮಾಣ, ನಿರ್ದೇಶನದ ಈ ಸೀರಿಯಲ್ ನ ಅಂತಿಮ ಸಂಚಿಕೆಗಳು ಶೀಘ್ರದಲ್ಲೇ ಪ್ರಸಾರ ಕಾಣಲಿದೆ ಎನ್ನಲಾಗಿದೆ.

ಕೆಂಡಸಂಪಿಗೆ (Kenda Sampige) ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗಲಿದೆ, ಕೊನೆಯ ಸಂಚಿಕೆಗಳು ಪ್ರಸಾರವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಸೀರಿಯಲ್ 2022 ರಲ್ಲಿ ಪ್ರಸಾರವನ್ನು ಆರಂಭ ಮಾಡಿತ್ತು. ಕಲರ್ಸ್ ವಾಹಿನಿಯ ಜನಪ್ರಿಯ ಸೀರಿಯಲ್ ಗಳಲ್ಲಿ ಇದು ಸಹಾ ಒಂದಾಗಿದೆ.

ಮತ್ತೊಂದು ಜನಪ್ರಿಯ ಸೀರಿಯಲ್ ಚುಕ್ಕಿತಾರೆ (Chukkithare) ಸಹಾ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಸೀರಿಯಲ್ ನಲ್ಲಿ ನವೀನ್ ಸಜ್ಜು, ದಿವ್ಯಶ್ರೀ, ವಿಶಾಲ್, ಜಯಶ್ರೀ, ರಾಧಿಕಾ ಶ್ರವಂತ್ ಅವರು ನಟನೆ ಮಾಡುತ್ತಿದ್ದಾರೆ. ಒಂದೂವರೆ ಗಂಟೆ ಪ್ರಸಾರ ಆಗುವ ಬಿಗ್ ಬಾಸ್ ಗಾಗಿ ಮೂರು ಸೀರಿಯಲ್ ಮುಕ್ತಾಯವಾಗೋದಂತೂ ಖಚಿತ.

Shah Rukh Khan: ವೃದ್ಧನ ಮೇಲೆ ದರ್ಪ, ನಾಚಿಕೆ ಆಗಬೇಕು; ಶಾರೂಖ್ ವರ್ತನೆಗೆ ರೊಚ್ಚಿಗೆದ್ದ ನೆಟ್ಟಿಗರು

Leave a Comment