Bigg Boss Kannada: ಬಿಗ್ ಬಾಸ್ ಆರಂಭ, ಸೀರಿಯಲ್ ಗಳ ಮುಕ್ತಾಯ; ನಡುವೆಯೇ ಪ್ರೇಕ್ಷಕರಿಗೆ ಗುಡ್ ನ್ಯೂಸ್

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ ಶೋ ನ (Bigg Boss Kannada) ಅಭಿಮಾನಿಗಳ ನಿರೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಅವರ ಕಣ್ಮುಂದೆ ಬರಲಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11 ಬರೋದಕ್ಕೆ ಸಜ್ಜಾಗಿದ್ದು, ವಾಹಿನಿ ನಿನ್ನೆಯಷ್ಟೇ ಮೊದಲ ಪ್ರೊಮೊ ಬಿಡುಗಡೆ ಮಾಡಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಗೆ ಒಂದೂವರೆ ಗಂಟೆ ಸಮಯದ ಸ್ಲಾಟ್ ಬೇಕಾಗುತ್ತೆ ಅನ್ನೋದು ಗೊತ್ತಿರುವ ವಿಚಾರವೇ ಆಗಿದೆ.

ಬಿಗ್ ಬಾಸ್ ಬಂದರೆ ಅರ್ಧಗಂಟೆ ಪ್ರಸಾರ ಆಗೋ ಮೂರು ಸೀರಿಯಲ್ ಗಳಿಗೆ ಮುಕ್ತಾಯ ಹಾಡಲೇಬೇಕಾಗುವುದು. ಹಾಗಾದ್ರೆ ಈಗ ಮುಗಿಯೋ ಸೀರಿಯಲ್ ಗಳು ಯಾವುವು ಅನ್ನೋ ವಿಚಾರದಲ್ಲಿ ಕೆಂಡ ಸಂಪಿಗೆ, ಚುಕ್ಕಿ ತಾರೆ ಮತ್ತು ನನ್ನ ದೇವರು ಸೀರಿಯಲ್ ಗಳ ಹೆಸರು ಮಾದ್ಯಮ ಸುದ್ದಿಗಳಲ್ಲಿ ಹರಿದಾಡಿತ್ತು.. ಇದನ್ನ ನೋಡಿದಾಗ ಕೆಲವು ಸೀರಿಯಲ್ ಗಳ ಸಮಯ ಬದಲಾಗುವ ಸಾಧ್ಯತೆ ಇದೆ.

ಹೌದು, ಟಿ ಆರ್ ಪಿ ಲೆಕ್ಕಾಚಾರದಲ್ಲಿ ಹಿಂದೆ ಇರುವ ಸೀರಿಯಲ್ ಗಳು ಮುಕ್ತಾಯ ಆಗಿ ಆ ಸಮಯಕ್ಕೆ ಜನಪ್ರಿಯ ಸೀರಿಯಲ್ ಗಳು ಶಿಫ್ಟ್ ಆಗುತ್ವೆ. ಕಲರ್ಸ್ ನಲ್ಲಿ ಈಗ ರಾಮಾಚಾರಿ (Ramachari), ಅಂತರಪಟ (Antarapata) ಮತ್ತು ಕರಿಮಣಿ ಸೀರಿಯಲ್ ಗಳ ಸಮಯ ಬದಲಾಗಬಹುದು ಎನ್ನಲಾಗಿದ್ದು, ಬಿಗ್ ಬಾಸ್ ಆರಂಭದ ದಿನಾಂಕ ಘೋಷಣೆ ಆದರೆ ಈ ಸೀರಿಯಲ್ ಬದಲಾದ ಸಮಯವನ್ನು ವಾಹಿನಿ ಅಧಿಕೃತವಾಗಿ ತಿಳಿಸುವ ನಿರೀಕ್ಷೆ ಇದೆ.

ಬಿಗ್ ಬಾಸ್ ಆರಂಭಕ್ಕೆ ಮುನ್ನ ಪ್ರತಿ ಬಾರಿಯೂ ಕೆಲವು ಸೀರಿಯಲ್ ಗಳು ಮುಕ್ತಾಯವಾದಾಗ ಆ ಸೀರಿಯಲ್ ನ ಕಲಾವಿದರು ಸಹಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡೋದು ನಡೆಯುತ್ತೆ. ಇನ್ನು ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರಲ್ಲಿ ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಬರ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Amruthadhaare Serial: ಜೈದೇವ್ ನ ಕುತಂತ್ರ ಗೌತಮ್ ಮುಂದೆ ಬಯಲಾಯ್ತು; ಗೌತಮ್ ಮುಂದಿನ ನಿರ್ಧಾರ ಏನು?

Leave a Comment