Tukali Santosh: ಯಾರೂ ಮೋಸ ಹೋಗಬೇಡಿ; ಹೊರ ಬಿತ್ತು ಶಾಕಿಂಗ್ ಸುದ್ದಿ, ತುಕಾಲಿ ಸಂತೋಷ್ ಪತ್ನಿ ಸ್ಪಷ್ಟನೆ

Written by Soma Shekar

Published on:

---Join Our Channel---

Tukali Santosh: ಕಾಮಿಡಿ ರಿಯಾಲಿಟಿ ಶೋ ಗಳ ಮೂಲಕ ಹೆಸರನ್ನು ಪಡೆದುಕೊಂಡು ಅನಂತರ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರಲ್ಲಿ (Bigg Boss Kannada 10) ಸ್ಪರ್ಧಿಯಾಗಿ ಭಾಗವಹಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡವರು ತುಕಾಲಿ ಸಂತೋಷ್ (Tukali Santosh). ತುಕಾಲಿ ಸಂತೋಷ್ ಅವರ ಪತ್ನಿ ಕೂಡಾ ಈಗ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಪತಿ ಪತ್ನಿ ಇಬ್ಬರೂ ಕೂಡಾ ಹಾಸ್ಯ ಕಲಾವಿದರಾಗಿ ಹೆಸರನ್ನು ಮಾಡುತ್ತಾ, ಇನ್ನಷ್ಟು ಯಶಸ್ಸನ್ನ ಪಡೆದುಕೊಳ್ಳುವತ್ತ ಸಾಗುತ್ತಿದ್ದಾರೆ.

ಈಗ ತುಕಾಲಿ ಮತ್ತು ಅವರ ಪತ್ನಿ ಜನರ ಮುಂದೆ ಒಂದು ವಿಶೇಷವಾದ ಮನವಿಯನ್ನು ಮಾಡಿಕೊಂಡಿದ್ದಾರೆ. ತುಕಾಲಿ ಮತ್ತು ಪತ್ನಿ ಮಾನಸ (Manasa) ಅವರು ಯಾರೂ ಮೋಸ ಹೋಗಬೇಡಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಹೌದು, ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಹೆಸರಿನಲ್ಲಿ ಒಂದು ಇನ್ಸ್ಟಾಗ್ರಾಂ ಖಾತೆಯಿದ್ದು (Instagram), ಅದರಲ್ಲಿ 45 ಸಾವಿರಕ್ಕೂ ಅಧಿಕ ಹಿಂಬಾಲಕರು ಇದ್ದರು ಎನ್ನಲಾಗಿದ್ದು, ಆ ಖಾತೆ ಹ್ಯಾಕ್ ಆಗಿದೆಯಂತೆ.

ಹ್ಯಾಕ್ ಆದ ನಂತರ ಅದರ ಮೂಲಕ ಕೆಲವರಿಗೆ ಮೆಸೆಜ್ ಗಳನ್ನು ಮಾಡಿ ಹಣವನ್ನು ಕೇಳಲಾಗುತ್ತಿದೆ ಎನ್ನುವ ವಿಚಾರವನ್ನು ಗಮನಿಸಿರುವ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಸೋಶಿಯಲ್ ಮೀಡಿಯಾ ಮೂಲಕ ಒಂದು ವೀಡಿಯೋ ಮುಖಾಂತರ ಸ್ಪಷ್ಟನೆಯನ್ನು ನೀಡಿದ್ದಾರೆ. ತುಕಾಲಿ ಸಂತೋಷ್ ವೀಡಿಯೋವನ್ನು ಮಾಡಿದ್ದು, ಅದರಲ್ಲಿ ಮಾನಸ ಅವರು ಕೆಲವೊಂದು ವಿಚಾರಗಳನ್ನ ಶೇರ್ ಮಾಡಿಕೊಂಡಿದ್ದಾರೆ.

ನನ್ನ ಮಾನಸಾ ಸಂತೋಷ್ ಅನ್ನೋ ಅಧಿಕೃತ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಆ ಅಕೌಂಟ್ ನಿಂದ ‘ನೀವು 40 ಸಾವಿರ ರೂ. ಹೂಡಿಕೆಯನ್ನ ಮಾಡಿ, ನಿಮಗೆ ವಾಪಸ್ 4.90 ಲಕ್ಷ ರೂ. ವಾಪಸ್ ಕೊಡ್ತೀವಿ’ ಅಂತ ಮೇಸೆಜ್ ಅನ್ನ ಕಳಿಸ್ತಿದ್ದಾರೆ. ದಯವಿಟ್ಟು ಯಾರೂ ಕೂಡಾ ಅದನ್ನ ನಂಬಬಾರದು. ನಂಬಿ, ದುಡ್ಡು ಹಾಕಿ ಕಳೆದುಕೊಳ್ಳಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿರೋದ್ರಿಂದ ಬೇರೆ ಯಾರೋ ರೀತಿ ಮೇಸೆಜ್ ಹಾಕುತ್ತಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

Leave a Comment