Namratha Gowda: ಪದೇ ಪದೇ ದೇಹದ ಆ ಭಾಗ ಮುಟ್ಟಿಕೊಳ್ಳೋ ನಮ್ರತಾ; ವಿಚಿತ್ರ ಅನಿಸಿದ್ರೂ ಕಾರಣ ಹೇಳಿದ ನಟಿ

Written by Soma Shekar

Published on:

---Join Our Channel---

Namratha Gowda : ಕಿರುತೆರೆಯ ಮೂಲಕ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯರಲ್ಲಿ ನಮ್ರತಾ ಗೌಡ (Namratha Gowda) ಅವರು ಸಹಾ ಒಬ್ಬರು. ಬಾಲನಟಿಯಾಗಿ ಸಿನಿಮಾಗಳಲ್ಲಿ ನಟಿಸಿರುವ ಇವರು ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡ ಸೀರಿಯಲ್ ಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡವರು. ನಾಗಿಣಿ 2 ನಲ್ಲಿ (Nagini 2) ನಾಗಿಣಿಯ ಪಾತ್ರದ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡ ನಮ್ರತಾ ಅವರು ನಾಗಿಣಿ ನಂತರ ಬೇರೆ ಯಾವುದೇ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

ನಮ್ರತಾ ಅವರು ಮತ್ತೆ ಯಾವಾಗ ಕಿರುತೆರೆಗೆ ಬರ್ತಾರೆ ಅಂತ ಕಾಯ್ತಿದ್ದ ಅವರ ಅಭಿಮಾನಿಗಳಿಗೆ ನಟಿ ನೇರವಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಶಾಕ್ ನೀಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರ್ತಿಸಿಕೊಂಡ ನಮ್ರತಾ ಗೌಡ ಅವರು ಫೈನಲ್ ವಾರದವರೆಗೆ ಬಂದು ಕೊನೆಯ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರು.

ಬಿಗ್ ಬಾಸ್ ನಿಂದಾಗಿ ನಮ್ರತಾ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದ್ದು, ಬಿಗ್ ಬಾಸ್ ನಂತರ ನಟಿ ಯಾವುದೇ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲವಾದರೂ ಒಂದಷ್ಟು ಸಂದರ್ಶನಗಳಲ್ಲಿ ಭಾಗವಹಿಸಿ ಕೆಲವೊಂದು ವಿಚಾರಗಳನ್ನ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈಗ ಹೊಸದೊಂದು ಸಂದರ್ಶನದಲ್ಲಿ ನಟಿ ಮತ್ತೊಂದು ವಿಚಾರವನ್ನು ಶೇರ್ ಮಾಡಿದ್ದಾರೆ.

ನಮ್ರತಾ ಅವರಿಗೆ ಪದೇ ಪದೇ ತಮ್ಮ ಮೂಗನ್ನು ಮುಚ್ಚಿಕೊಳ್ಳುವ ಅಭ್ಯಾಸವಿದ್ದು, ಇದರ ಬಗ್ಗೆ ನಟಿ ಮಾತನಾಡಿದ್ದಾರೆ. ನಟಿ ಮೂಗನ್ನ ಮುಚ್ಚಿಕೊಳ್ಳುವುದೇಕೆ ಎಂಬುದನ್ನು ತಿಳಿಸಿದ್ದಾರೆ. ತನಗೆ ನರ್ವಸ್ ಆದಾಗ, ಕೋಪ ಬಂದಾಗ, ಮನಸ್ಸಿನೊಳಗೆ ಭಾವನೆಗಳು ಬಂದಾಗ ನನಗೆ ಗೊತ್ತಿಲ್ಲದೇ ಮೂಗನ್ನು ಮುಚ್ಚಿಕೊಳ್ಳುತ್ತೇನೆ. ಟೆನ್ಷನ್ ಆದಾಗ ನನಗೆ ನಾನು ನೀಡುವ ಪ್ರತಿಕ್ರಿಯೆ ಅದಾಗಿರುತ್ತದೆ. ಇದಕ್ಕೆ ಕಾರಣ ಅಂತದೇನೂ ಇಲ್ಲ.

ಮನುಷ್ಯರು ಅಂದ ಮೇಲೆ ಎಲ್ಲರೂ ಒಂದೇ ರೀತಿ ಇರೋದಿಲ್ಲ. ಪ್ರತಿಯೊಬ್ಬ ರಿಗೂ ಅವರದ್ದೇ ಆದ ಹವ್ಯಾಸಗಳು, ಅಭ್ಯಾಸಗಳು ಇರುತ್ತವೆ. ನನಗೂ ಸಹಾ ಒಂದಷ್ಟು ಹಾವ ಭಾವಗಳಿವೆ. ಅದರಲ್ಲಿ ಇದೊಂದು. ಪ್ರಾರಂಭದಲ್ಲಿ ನಾನು ಹೀಗೆ ಮೂಗು ಮುಚ್ಚಿಕೊಳ್ಳೋ ಅಭ್ಯಾಸ ನನ್ನ ಗಮನಕ್ಕೆ ಬಂದಿರಲಿಲ್ಲ. ಆಪ್ತವಲಯದಲ್ಲಿ ಕೆಲವರು ಇದನ್ನು ಗಮನಿಸಿ ನನ್ನ ಗಮನಕ್ಕೆ ತಂದಿದ್ದರು. ಹೇಳಿದರು ಅಂದ ಮಾತ್ರಕ್ಕೆ ಆ ಅಭ್ಯಾಸ ಬಿಡೋದಕ್ಕೆ ಸಾಧ್ಯ ಇಲ್ಲ. ಬಿಡಬೇಕಂತ ನಾನು ನಿಂತಿಲ್ಲ, ಅದು ನನ್ನ ಐಡೆಂಟಿಟಿ ಆಗಿರಬಹುದು ಎಂದಿದ್ದಾರೆ ನಟಿ.

Leave a Comment