Vinay Gowda: ಆಕೆ ಬಿಕಿನಿ ಮಾಡೆಲ್ ನೋವು ಹೇಳಿಕೊಂಡಿದ್ದು ತಪ್ಪಾ? ಚಿತ್ರಾಲ್ ಪರ ದನಿ ಎತ್ತಿದ ಆನೆ ವಿನಯ್ ಗೌಡ

Written by Soma Shekar

Published on:

---Join Our Channel---

Vinay Gowda: ರೇಣುಕಾ ಸ್ವಾಮಿ (Renuka Swamy) ಬಹಳಷ್ಟು ಜನ ಮಹಿಳೆಯರಿಗೆ ಕೆಟ್ಟದಾಗಿ ಮೆಸೆಜ್ ಗಳನ್ನು ಮಾಡಿದ್ದ ಎನ್ನುವ ವಿಚಾರವೊಂದು ಮಾದ್ಯಮಗಳಲ್ಲಿ ಸುದ್ದಿಯಾದ ಮೇಲೆ ಬಿಗ್ ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಮತ್ತು ಸೋನು ಗೌಡ ಸಹಾ ಸೋಶಿಯಲ್ ಮೀಡಿಯಾದಲ್ಲಿ ರೇಣುಕಾ ಸ್ವಾಮಿ ನಮಗೂ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎನ್ನುವ ವಿಚಾರವನ್ನು ಹಂಚಿಕೊಂಡು ಒಂದಷ್ಟು ಸುದ್ದಿಗಳಿಗೆ ಕಾರಣವಾಗಿದ್ದರು. ಈ ವಿಷಯಕ್ಕೆ ನೆಟ್ಟಿಗರಿಂದಲೂ ತರಹೇವಾರಿ ಕಾಮೆಂಟ್ ಗಳು ಹರಿದು ಬಂದಿತ್ತು.

ಚಿತ್ರಾಲ್ ರಂಗಸ್ವಾಮಿ ಈ ವಿಚಾರವನ್ನು ಹಂಚಿಕೊಂಡು ನನಗೆ ಯಾರಾದರೂ ಕೆಟ್ಟದಾಗಿ ಮೆಸೆಜ್ ಮಾಡಿದರೆ ನಾನು ಅವರನ್ನು ಬ್ಲಾಕ್ ಮಾಡುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಚಿತ್ರಾಲ್ ಅವರ ಪೋಸ್ಟ್ ನೋಡಿದ ಮೇಲೆ ಅನೇಕರು ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ, ಇನ್ನೂ ಕೆಲವರು ಟೀಕೆಗಳನ್ನು ಸಹಾ ಮಾಡಿದ್ದರು. ಚಿತ್ರಾಲ್ ಅವರು ಟ್ರೋಲ್ ಆದ ವಿಚಾರವಾಗಿ ಈಗ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ (Vinay Gowda) ಅವರು ಮಾತನಾಡಿದ್ದಾರೆ.

ಆ ಫೇಕ್ ಅಕೌಂಟ್ ನಿಂದ ಸಾಕಷ್ಟು ಜನರಿಗೆ ಕೆಟ್ಟ ಮೆಸೆಜ್ ಹೋಗಿದೆ ಎನ್ನುವ ವಿಚಾರ ನನಗೂ ಗೊತ್ತಾಗಿದೆ. ಈಗ ಎಲ್ಲಾ ಹೊರಗೆ ಬರುತ್ತಿದೆ. ಚಿತ್ರಾಲ್ ಒಬ್ಬ ಧೈರ್ಯಶಾಲಿ ಹೆಣ್ಣು. ಆಕೆ ಧೈರ್ಯವಾಗಿ ಬಂದು ನನಗೆ ಕೆಟ್ಟದಾಗಿ ಮೆಸೆಜ್ ಮಾಡಿದ್ದ ವಿಚಾರವನ್ನು ಹೇಳಿದರೆ ಯಾಕೆ ಅದನ್ನು ಒಪ್ಪುತ್ತಿಲ್ಲ ಅಂತಾ ವಿನಯ್ ಅವರು ಪ್ರಶ್ನೆಯನ್ನು ಮಾಡಿದ್ದಾರೆ. ತನಗಾದ ಕಹಿ ಅನುಭವ ಹೇಳಿದ ಆಕೆಯ ಮೇಲೆ ಟೀಕೆ ವ್ಯಕ್ತವಾಗ್ತಿದೆ.

ಆಕೆನೆ ಸರಿ ಇಲ್ಲ ಅಂತ ಯಾಕೆ ಹೇಳ್ತಿದ್ದಾರೆ. ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕಿದ್ರು ಕಾಮೆಂಟ್ ಮಾಡ್ತಾ ಇದ್ದಾರೆ.. ಬಿಕಿನಿ ಹಾಕ್ಕೊಂಡ್ರು ಏನೇನೋ ಹೇಳ್ತಾರೆ. ಆಕೆ ಬಿಕಿನಿ ಮಾಡೆಲ್ ಅದು ಅವರ ವೃತ್ತಿ. ಅದರ ಮೇಲೂ ಕೆಟ್ಟದಾಗಿ ಕಾಮೆಂಟ್ ಮಾಡಿ ಫೋಟೋ ಕಳ್ಸಿ ನನ್ನತ್ರ ಬಾ ಅಂತೆಲ್ಲಾ ಕೇಳ್ತಾರೆ ಅಂದ್ರೆ ಅದೆಷ್ಟು ಸರಿ ಎಂದೂ ವಿನಯ್ ಅವರು ಪ್ರಶ್ನೆ ಮಾಡಿದ್ದಾರೆ. ನಟನ ಮಾತುಗಳೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Comment