Padmaja Rao: ಕನ್ನಡದ ಕಿರುತೆರೆಯ ಜನಪ್ರಿಯ ನಟಿ ಪದ್ಮಜಾ ರಾವ್ (Padmaja Rao) ಅವರ ಹೆಸರು ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬಂದಿತ್ತು. ಈಗ ಈ ಪ್ರಕರಣದ ತೀರ್ಪು ಹೊರ ಬಂದಿದೆ. ಪ್ರಸ್ತುತ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ನಟಿ ಪದ್ಮಜಾ ರಾವ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಕೋರ್ಟ್ ನೀಡಿರುವ ತೀರ್ಪಿಗೆ ಅವರು ಹೇಗೆ ಪ್ರತಿಕ್ರಿಯೆ ನೀಡ್ತಾರೆ ಅನ್ನೋದೇ ಪ್ರಶ್ನೆ
40 ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ನಟಿ ಪದ್ಮಜಾ ರಾವ್ ಅವರು ದೋಷಿ ಎಂದು ತೀರ್ಪನ್ನು ನೀಡಿರುವ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ನಟಿ ಪದ್ಮಜಾ ರಾವ್ ಅವರು ತುಳು ಸಿನಿಮಾ ನಿರ್ದೇಶಕ ಮತ್ತು ನಟ ವೀರೇಂದ್ರ ಶೆಟ್ಟಿ ಅವರ ವೀರೂ ಟಾಕಿಸ್ ನಿರ್ಮಾಣ ಸಂಸ್ಥೆಯಿಂದ ಹಂತ ಹಂತವಾಗಿ ಸಾಲ ಪಡೆದಿದ್ದರು ಎನ್ನಲಾಗಿದೆ.
ಸಾಲ ಮರುಪಾವತಿ ವೇಳೆಯಲ್ಲಿ ನಟಿ ವಂಚಿಸಿದ್ದರು ಮತ್ತು ಒತ್ತಡಕ್ಕೆ ಮಣಿದು ವೀರೂ ಟಾಕೀಸ್ ಹೆಸರಲ್ಲಿ ತಮ್ಮ ICICI ಬ್ಯಾಂಕ್ ಚೆಕ್ ಅನ್ನು ನೀಡಿದ್ದರು. ಆದರೆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿತ್ತು.ಆಗ ವಿರೇಂದ್ರ ಶೆಟ್ಟಿ ಅವರು ಮಂಗಳೂರಿನ JMFC ಎಂಟನೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ನ್ಯಾಯಾಲಯ ಸಮನ್ಸ್ ನೀಡಿದರೂ ಪದ್ಮಜಾ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅನಂತರ ಕೋರ್ಟ್ ನಟಿಯನ್ನು ಬಂಧಿಸುವ ಆದೇಶ ನೀಡಿದಾಗ ನಟಿ ಶರಣಾಗಿದ್ದರು. ಈಗ ನಾಲ್ಕು ವರ್ಷ ನಡೆದ ಈ ಕೇಸ್ ವಿಚಾರದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದು, ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ 40,17,000 ಸಾವಿರ ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ನೀಡಬೇಕು.
ಇದಲ್ಲದೇ ಜುಲ್ಮಾನೆಯಾಗಿ ಸರಕಾರಕ್ಕೆ 3000 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಆದೇಶವನ್ನು ನೀಡಿದೆ. ಒಟ್ಟು 40,20,000 ರೂಪಾಯಿಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಪದ್ಮಜಾ ರಾವ್ ಅವರಿಗೆ ವಿಧಿಸಿದೆ.
Nag Ashwin: ಸಿಟ್ಟು ಯಾಕೆ? ಆಡೋಕೆ ಬುಜ್ಜಿ ಕಾರು ಕಳಿಸ್ತೀನಿ, ಪ್ರಭಾಸ್ ಜೋಕರ್ ಎಂದ ನಟನಿಗೆ ನಾಗ್ ಅಶ್ವಿನ್ ಮಾತು