Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್ ಗೆ (Bhagyalakshmi Serial) ಅಭಿಮಾನಿಗಳ ಬಳಗ ದೊಡ್ಡದಾಗಿದೆ ಅನ್ನೋದ್ರಲ್ಲಿ ಖಂಡಿತ ಅನುಮಾನ ಇಲ್ಲ. ಆದ್ರೆ ಕೆಲವೊಂದು ಸಲ ಕೆಲವೊಂದು ಎಪಿಸೋಡ್ ಗಳು ಅಭಿಮಾನಿಗಳು ಮತ್ತು ವೀಕ್ಷಕರ ತಾಳ್ಮೆ ಕೆಡಿಸುವಂತೆ ಇದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಅಸಮಾಧಾನವನ್ನು ಹೊರ ಹಾಕುವುದು ಸಹಾ ನಡೆದೇ ಇರುತ್ತದೆ. ಈಗ ಮತ್ತೊಮ್ಮೆ ವೀಕ್ಷಕರು ತಾಳ್ಮೆ ಕಳೆದುಕೊಂಡ ಹಾಗೆ ಕಾಣ್ತಿದೆ.
ಶ್ರೇಷ್ಠ (Shreshta) ಮದುವೆ ನಿಲ್ಲಿಸೋಕೆ ಬಂದ ಭಾಗ್ಯ ಮತ್ತು ಕುಸುಮಾ ಅದು ಸಾಧ್ಯವಾಗದೇ ಅಲ್ಲಿಂದ ವಾಪಸ್ ಬಂದಾಗಿದೆ. ಇದೇ ವೇಳೆ ಕುಸುಮಾ ರೂಮ್ ನಲ್ಲಿದ್ದ ಶ್ರೇಷ್ಠಾ ಮದುವೆ ಲಗ್ನ ಪತ್ರಿಕೆ ನೋಡಿ ಶಾಕ್ ಆಗಿದ್ದು, ತನ್ನ ಸೊಸೆಗೆ ಅನ್ಯಾಯ ಆಗಬಾರದು ಅಂತ ಆಲೋಚನೆ ಮಾಡಿದ್ದಾಳೆ. ಮದುವೆ ನಿಲ್ಲಿಸಬೇಕಂತ ಕೋಣೆಯಲ್ಲಿ ಅತ್ತು, ಗೋಳಾಡಿ ಕಣ್ಣೀರು ಹಾಕಿದ್ದಾಳೆ.
ಕೋಣೆಯಲ್ಲಿ ತನ್ನ ಭಾವನೆಗಳನ್ನು ವ್ಯಕ್ತಿಪಡಿಸುತ್ತಾ ಮದುವೆ ನಿಲ್ಲಿಸಿ ನಿರ್ಧಾರ ಮಾಡಿದ್ದಾಳೆ ಕುಸುಮ. ಆದರೆ ಇದೆಲ್ಲಾ ನೋಡಿ ಪ್ರೇಕ್ಷಕರು ಸಿಟ್ಟಾಗಿದ್ದಾರೆ. ಕುಸುಮಾ ತಲೆಯಿಂದ ಕೈ ತೆಗೆಯೋಕೆ ಒಂದು ವಾರ, ಮನೆಯಿಂದ ಮಂಟಪಕ್ಕೆ ಹೋಗೋಕೆ ಇನ್ನೊಂದು ವಾರ ಮಾಡಿ. ನಿಜ ಜೀವನದಲ್ಲಿ ಇಷ್ಟೊತ್ತಿಗೆ ಮದುವೆ ನಡೆದೇ ಹೋಗಿರ್ತಿತ್ತು ಎಂದು ಹೇಳಿದ್ದಾರೆ.
ಕುಸುಮಾ ಗೋಳು ನೋಡಿ ನೋಡಿ ಸಾಕಾಗಿದೆ ಬೇಗ ಮದುವೆ ನಿಲ್ಲಿಸಿ ಅಂತ ನೆಟ್ಟಿಗರು ಅಸಹನೆ ಹೊರ ಹಾಕಿದ್ದಾರೆ. ಕುಸುಮಾ ಯಾವ ರೀತಿ ಶ್ರೇಷ್ಠ ಮದುವೆ ನಿಲ್ಲಿಸ್ತಾರೆ ಅಂತ ನೋಡೋಕೆ ಕಾಯ್ತಾ ಇರೋ ಪ್ರೇಕ್ಷಕರಿಗೆ ಕುಸುಮಾ ಗೋಳಾಟ ಅತಿಯಾಯ್ತು ಅನ್ನೋಷ್ಟು ಬೇಸರ ಆಗಿರೋ ಕಾಣ್ತಿದೆ.
Malaika Arora: ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ