Bhagya Lakshmi: ಮೊದ್ಲು ಮನೆಗೆ ಹೋಗು ತಾಯಿ, ಪಾನೀಪುರಿ ತಿಂತಾ ಟೆನ್ಷನ್ ಕೊಡಬೇಡ ಅಂತಿದ್ದಾರೆ ಪ್ರೇಕ್ಷಕರು

Written by Soma Shekar

Published on:

---Join Our Channel---

Bhagya Lakshmi: ಭಾಗ್ಯಲಕ್ಷ್ಮಿ ಸೀರಿಯಲ್ (Bhagya Lakshmi) ನಲ್ಲಿ ಸದ್ಯಕ್ಕಂತೂ ಭಾಗ್ಯದ ಗೋಳು ಮುಗಿಯುವಂತೆ ಕಾಣುತ್ತಿದೆ. ಸ್ಟಾರ್ ಹೋಟೆಲ್ ನಲ್ಲಿ ಶೆಫ್ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾಳೆ ಭಾಗ್ಯ. ಅಲ್ಲದೇ ಮ್ಯಾನೇಜರ್ (Manager) ಭಾಗ್ಯಾಳಿಗೆ 1 ಲಕ್ಷಗಳ ಅಡ್ವಾನ್ಸ್ ಹಣವನ್ನ ನೀಡಿದ್ದಾರೆ. ಒತ್ತು ಶ್ಯಾವಿಗೆ ಮತ್ತು ಮಾವಿನ ರಸಾಯನದ ಮೂಲಕ ಭಾಗ್ಯ ಕೆಲಸವನ್ನು ಸಂಪಾದಿಸಿಕೊಂಡಿದ್ದಾಳೆ. ಗಂಡ ತಾಂಡವ್ ಯಾವಾಗ್ಲೂ ಒಂದು ರೂಪಾಯಿ ಸಂಪಾದನೆ ಮಾಡುವ ಯೋಗ್ಯತೆ ಇಲ್ಲ ಅಂತ ಭಾಗ್ಯಳನ್ನ ಮಾಡ್ತಿದ್ದ ನಿಂದನೆಗೆ ತಕ್ಕ ಪ್ರತಿಕ್ರಿಯೆ ಅನ್ನುವ ಹಾಗೆ ಭಾಗ್ಯ 1 ಲಕ್ಷ ಸಂಪಾದನೆ ಮಾಡಿದ್ದಾಳೆ.

ಅಲ್ಲದೇ ತನ್ನ ದುಡಿಮೆಯ ಹಣದಿಂದ ಬಹಳ ಖುಷಿಯಾಗಿದ್ದು, ಆ ಹಣದಲ್ಲಿ ಮಕ್ಕಳಿಗೆ ಒಂದಷ್ಟು ತಿನಿಸುಗಳನ್ನ ತೆಗೆದುಕೊಂಡಿರುವ ಭಾಗ್ಯ ತನ್ನ ಸ್ವಂತ ಹಣದಲ್ಲಿ ಪಾನಿಪುರಿ ತಿಂದಿದ್ದಾಳೆ. ಈ ವೇಳೆ ಪಾನೀಪುರಿ ಅಂಗಡಿಯವನ ಜೊತೆ ಮಾತನಾಡ್ತಾ ಇಷ್ಟು ದಿನ ಚಿಕ್ಕಪುಟ್ಟ ಖರ್ಚುಗಳಿಗೂ ಗಂಡನ ಬಳಿ ಕೈ ಚಾಚ್ತಾ ಇದ್ದೆ. ಆದರೆ ಈಗ ಸ್ವಂತ ದುಡಿಮೆಯಿಂದ ತಿಂತಾ ಇದ್ದೀನಿ ಅಂತ ಭಾಗ್ಯ ಹೇಳಿಕೊಂಡಿದ್ದಾಳೆ.‌

ಆದರೆ ಈ ದೃಶ್ಯವನ್ನು ನೋಡಿದ ಅಭಿಮಾನಿಗಳಿಗೆ ಮಾತ್ರ ಟೆನ್ಶನ್ ಆಗಿದೆ. ಬ್ಯಾಗಲ್ಲಿ 1 ಲಕ್ಷ ಇಟ್ಕೊಂಡು ಯಾರಾದರೂ ಹೀಗೆ ಬೀದಿ ಬದಿಯಲ್ಲಿ ನಿಂತ್ಕೊಂಡಿರ್ತಾರಾ? ಭಾಗ್ಯಗೆ ತಲೆ ಸರಿ ಇಲ್ವಾ? ನಮಗೆ ಟೆನ್ಶನ್ ಆಗ್ತಿದೆ. ಮೊದಲು ಮನೆಗೆ ಹೋಗಮ್ಮಾ, ಸಿಕ್ಕಿರೋ ಒಂದು ಲಕ್ಷ ರೂಪಾಯಿ ಕಳ್ಕೊಂಡು ಮತ್ತೆ ಗೋಳಾಡಬೇಡ ಅಂತಿದ್ದಾರೆ ಅಭಿಮಾನಿಗಳು.

ಸೋಶಿಯಲ್ ಮೀಡಿಯಾ ಗಳಲ್ಲಿ (Social Media) ಕಾಮೆಂಟ್ ಮಾಡಿದವರು ಸಹಾ, ಪಾನಿಪುರಿ ಆಮೇಲೆ ತಿನ್ನು, ಮೊದಲು ಮನೆಗೆ ಹೋಗು ತಾಯಿ ಅಂತ ಕಾಮೆಂಟ್ ಹಾಕುತ್ತಿದ್ದಾರೆ. ಪಾನಿಪುರಿ ಅವನ ಹತ್ತಿರ ನಿನ್ನ ವೈಯಕ್ತಿಕ ಜೀವನದ ಕಥೆಯನ್ನು ಹೇಳಿಕೊಳ್ಳೋದು ಸ್ವಲ್ಪ ಓವರ್ ಅನಿಸ್ತಿದೆ ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ.‌ ಇನ್ನು ಕೆಲವರು ಈ ಪೆದ್ದು ಭಾಗ್ಯ ಸಿಕ್ಕಿರೋ ಒಂದು ಲಕ್ಷ ರೂಪಾಯಿಯನ್ನು ಕೂಡ ಕಳ್ಕೊಂಡ್ರೆ ನಮಗೆ ಟೆನ್ಶನ್ ಆಗ್ತಿದೆ ಅಂತ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ.

ಈ ರೀತಿ ಕಾಮೆಂಟ್ ಗಳನ್ನು ಮಾಡೋದಕ್ಕೂ ಕಾರಣ ಇದೆ. ಇದಕ್ಕೆ ಕಾರಣ ಭಾಗ್ಯಾಳ ಪಾತ್ರವಾಗಿದೆ. ಯಾಕಂದ್ರೆ ಭಾಗ್ಯ ಪ್ರತಿಯೊಂದು ವಿಷಯದಲ್ಲಿ ಅಳೋದು ಸಾಮಾನ್ಯವಾಗಿದೆ.. ಸ್ಟಾರ್ ಹೋಟೆಲ್ ನಲ್ಲಿ ಯಾರದೋ ಹೆಸರಿನಲ್ಲಿ ತನಗೇ ಗೊತ್ತಿಲ್ಲದೇ ಕೆಲಸ ಪಡೆದಿದ್ದು, ನಂತರ ಅಸಲಿ ವಿಚಾರ ಗೊತ್ತಾಗಿ , ಅಲ್ಲಿಂದ ಅವಳನ್ನ ಹೊರ ಹಾಕೋಪ್ರಯತ್ನ ಮಾಡಿದ್ದು, ಭಾಗ್ಯ ಅಡುಗೆ ಕೆಲಸ ಕೊಡಿ ಅಂದ್ರೂ ಕೊಡೋದಕ್ಕೆ ಆ ಹೋಟೆಲ್ ನವರು ಸಿದ್ದ ಇಲ್ಲದೇ ಇದ್ದಿದ್ದು ನೋಡಾಗಿದೆ.

ಭಾಗ್ಯ ಒಬ್ಬ ಅಪ್ಪಟ ಗೃಹಿಣಿ, ಇಂಗ್ಲಿಷ್ ಮಾತಾಡಕ್ಕೆ ಬರೋದಿಲ್ಲ ಅಂತ ತಾತ್ಸಾರ ಮಾಡಿದ್ರು. ಭಾಗ್ಯ ಎಲ್ಲಿ ಹೋದರೂ ಇಂಥದೇ ಗೋಳು ಅಂತ ಪ್ರೇಕ್ಷಕರು ಇತ್ತೀಚಿನ ಸಂಚಿಕೆಗಳನ್ನು ನೋಡಿ ರೋಸಿ ಹೋಗಿದ್ದರು. ಇವೆಲ್ಲವುಗಳ ನಡುವೆ ಸ್ಟಾರ್ ಹೊಟೇಲ್ ಗೆ ರಿವ್ಯೂ ಮಾಡೋಕೆ ಬರುವಂತ ಖ್ಯಾತ ಪತ್ರಕರ್ತ ಅಲ್ಲಿನ ವಿಶೇಷ ತಿನಿಸೇ ತನಗೆ ಬೇಕು ಅಂತ ಕೇಳ್ತಾರೆ. ಆದ್ರೆ ಅದು ಬೇರೆ ಹೊಟೇಲ್ ನಿಂದ ತರಿಸೋದು ಅನ್ನೋದು ಪತ್ರಕರ್ತ‌ನಿಗೆ ಗೊತ್ತಿಲ್ಲ.‌

ಈ ವೇಳೆ ಭಾಗ್ಯ ತಾನೇ ಆ ತಿನಿಸನ್ನ ತಯಾರು ಮಾಡಿದ್ದಾಳೆ. ಭಾಗ್ಯಳ ಒತ್ತು ಶಾವಿಗೆ ಮತ್ತು ಮಾವಿನ ರಸಾಯನವನ್ನು ಬಹಳವಾಗಿ ಮೆಚ್ಚಿಕೊಂಡ ಪತ್ರಕರ್ತರಿಂದ ಹೊಟೇಲ್ ನ ಮರ್ಯಾದೆ ಉಳಿದಿದೆ. ಅದರ ಫಲಿತಾಂಶವಾಗಿ ಭಾಗ್ಯಗೆ ಕೆಲಸ ಸಿಕ್ಕಿದ್ದು, ಸೀರಿಯಲ್ ಪ್ರೇಕ್ಷಕರಿಗೆ ಖುಷಿ ನೀಡಿದೆ ಆದ್ರೆ ಕೆಲಸದ ಅಡ್ವಾನ್ಸ್ ಆಗಿ ಭಾಗ್ಯ ತನಗೆ ಸಿಕ್ಕ ಹಣವನ್ನ ತಗೊಂಡು ಇನ್ನೂ ಮನೆಗೆ ಹೋಗಿಲ್ಲ ಅನ್ನೋದು ಎಲ್ಲರ ಟೆನ್ಶನ್ ಗೆ ಕಾರಣ ಆಗಿದೆ.

Leave a Comment