Bigg Boss Kannada 11: ಬಿಗ್ ಬಾಸ್ ಕನ್ನಡದ (Bigg Boss Kannada-11) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಮನೆಯೊಳಕ್ಕೆ ಜನ ಸಾಮಾನ್ಯರು ಎಂಟ್ರಿಯನ್ನ ಕೊಟ್ಟಿದ್ದಾರೆ. ಈ ವಾರದ ಟಾಸ್ಕ್ ಗಾಗಿ ಮನೆಯ ಸ್ಪರ್ಧಿಗಳನ್ನು ಎರಡು ಪಕ್ಷಗಳಾಗಿ ವಿಭಜಿಸಿದ್ದಾರೆ. ರಾಜಕೀಯ ಪಕ್ಷಗಳ ಹವಾ ಮನೆಯಲ್ಲಿ ಜೋರಾಗಿದೆ.
ಐಶ್ವರ್ಯಾ (Aishwarya) ಒಂದು ಪಕ್ಷದ ಅಧ್ಯಕರಾಗಿದ್ದರೆ, ತಿವಿಕ್ರಮ್ (Trivikram) ಅವರು ಇನ್ನೊಂದು ಪಕ್ಷದ ಅಧ್ಯಕ್ಷರಾಗಿದ್ದಾರೆ. ಟಾಸ್ಕ್ ನ ಭಾಗವಾಗಿ ಪೋಸ್ಟರ್ ಅಂಟಿಸುವ ಟಾಸ್ಕ್ ಗಳನ್ನು ನೀಡಲಾಗಿತ್ತು. ಆದರೆ ಎರಡು ಪಕ್ಷಗಳು ಟಾಸ್ಕ್ ನಲ್ಲಿ ಮಾಡಿದ ಕಿತ್ತಾಟ, ಕಾದಾಟದಿಂದ ಕಿತ್ತಾಟ ಎರಡು ಹಂತದಲ್ಲಿ ನಡೆದ ಟಾಸ್ಕ್ ಫಲಿತಾಂಶ ಹೊರ ಬಿದ್ದಿಲ್ಲ.
ರಾಜಕೀಯ ಅಂದ್ಮೇಲೆ ಸಮಾವೇಶಕ್ಕೆ ಜನ ಸಾಮಾನ್ಯರು ಇರಲೇ ಬೇಕಲ್ವಾ? ಅದೇ ಕಾರಣದಿಂದಾಗಿ ಬಿಗ್ ಬಾಸ್ ಮನೆಯ ರಾಜಕೀಯ ಸಮಾವೇಶಕ್ಕೆ ಈಗ ಜನ ಸಾಮಾನ್ಯರ ಎಂಟ್ರಿ ಆಗಿದೆ. ಸ್ಪರ್ಧಿಗಳಿಗೆ ಜೈಕಾರ ಹಾಕಿದ್ದಾರೆ ಮತ್ತು ಪ್ರಶ್ನೆಗಳನ್ನು ಸಹಾ ಕೇಳಿದ್ದಾರೆ.
ತಿವಿಕ್ರಮ್ ಜನರನ್ನು ನೋಡಿ ಬಹಳ ದಿನಗಳ ನಂತರ ನನ್ನ ಅಕ್ಕ, ತಾಯಿ ನೆನಪು ಆಗ್ತಾ ಇದ್ದಾರೆ ಎನ್ನುವ ಮಾತನ್ನು ಹೇಳಿದರೆ, ಜನ ಹನುಮಂತನನ್ನ ಪಂಚೆ ಎಲ್ಲಿ ಎಂದು ಕೇಳಿದ್ದಾರೆ. ಮಾನಸ ಅವರೇ ನಿಮ್ಮ ಕಣ್ಣಿಗೆ ಇಡೀ ಕರ್ನಾಟಕ ಭಯ ಪಡ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಇದಲ್ಲದೇ ಜನ ದಿಕ್ಕಾರ ಸಹಾ ಕೂಗಿರೋದು ಕಂಡಿದೆ.