Nanna Devaru Serial: ಇಷ್ಟು ಬೇಗ ಮುಗಿತಿದ್ಯಾ ನನ್ನ ದೇವ್ರು ಸೀರಿಯಲ್? ಇಂತದೊಂದು ಸುದ್ದಿಗೆ ಕಾರಣ ಏನು, ಇಲ್ಲಿದೆ ಉತ್ತರ

Written by Soma Shekar

Published on:

---Join Our Channel---

Nanna Devaru Serial: ನನ್ನ ದೇವ್ರು (Nanna Devaru Serial) ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿದ ಸೀರಿಯಲ್. ಕೇವಲ 45 ಎಪಿಸೋಡ್ ಗಳ ಪ್ರಸಾರ ಕಂಡಿರುವ ಈ ಸೀರಿಯಲ್ ಮುಗಿಯುತ್ತೆ ಅನ್ನೋ ಮಾತೊಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಶೀಘ್ರದಲ್ಲೇ ಈ ಸೀರಿಯಲ್ ನ ಅಂತಿಮ ಹಂತದ ಎಪಿಸೋಡ್ ಗಳು ಪ್ರಸಾರ ಆಗಲಿದೆಎನ್ನುವ ಸುದ್ದಿಗಳು ಹರಿದಾಡುತ್ತಿದೆ.

ಹಾಗಾದ್ರೆ‌ ಇಂತಹ ಸುದ್ದಿ ಏಕೆ ಬಂದಿದೆ ಎನ್ನುವ ವಿವರಗಳಿಗೆ ಹೋದರೆ, ಸೀರಿಯಲ್ ಆರಂಭವಾದ ಮೇಲೆ ಇದಕ್ಕೆ ಮೂರಕ್ಕಿಂತ ಹೆಚ್ಚು ರೇಟಿಂಗ್ ಸಿಕ್ಕಿಲ್ಲ ಎನ್ನಲಾಗಿದೆ. ಟಿ ಆರ್ ಪಿ ಕಡಿಮೆ ಆಗುತ್ತಿದೆ ಎನ್ನುವ ಕಾರಣಕ್ಕೆ ಈಗ ಸೀರಿಯಲ್ ಮುಗಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀರಿಯಲ್ ಗಳಲ್ಲಿ ಚುಕ್ಕಿತಾರೆ ಮತ್ತು ನನ್ನ ದೇವ್ರು ಮಾತ್ರವೇ ಕಡಿಮೆ ರೇಟಿಂಗ್ ಪಡೆಯುತ್ತಿರುವ ಸೀರಿಯಲ್ ಗಳಾಗಿದೆ ಎನ್ನಲಾಗಿದೆ. ನಟಿ ಮಯೂರಿ (Mayuri) ಮತ್ತು ಅವಿನಾಶ್ ದಿವಾಕರ್ (Avinash Divakar) ಅವರು ಪ್ರಮುಖ ಪಾತ್ರ ದಲ್ಲಿದ್ದ ನನ್ನ ದೇವ್ರು ಸೀರಿಯಲ್ ಅದ್ಭುತ ಆರಂಭವನ್ನು ಕಂಡಿತ್ತು.

ಒಂದು ನೂತನ ಕಥೆಯಂತೆ‌‌ ಕಂಡಿದ್ದ ಸೀರಿಯಲ್ ದಿನಗಳು ಕಳೆದಂತೆ ಬೇರೆಲ್ಲಾ‌‌ ಸೀರಿಯಲ್ ಗಳಲ್ಲಿ ಇರುವಂತಹ ಅದೇ ಕುತಂತ್ರಗಳು, ಅದನ್ನ ಬೇಧಿಸುವ ಪ್ರಯತ್ನ ಇದೆಲ್ಲವೂ ಸಹಾ ಪ್ರೇಕ್ಷಕರಿಗೆ ಬೇಸರವನ್ನ ಮೂಡಿಸಿತಾ ಎನ್ನುವ ಅನುಮಾನ ಸಹಾ ಇದೆ. ನನ್ನ ದೇವ್ರು ಮುಗಿಯಿತ್ತೊ ಇಲ್ವೋ ಅನ್ನೋದನ್ನ ಕಾದು ನೋಡಬೇಕಾಗಿದೆ.

Bigg Boss Kannada 11: ಪ್ರೇಕ್ಷಕರು ಮಿಸ್ ಮಾಡ್ಕೊಂಡ ಆ ವಿಷ್ಯಗಳು ಈ ಸಲ ಬಿಗ್ ಬಾಸ್ ನಲ್ಲಿ ಇರುತ್ತಾ? ಇಲ್ವಾ?

Leave a Comment