A R Rahman Divorce : ಎ ಆರ್ ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ? ಲಾಯರ್ ಕೊಟ್ರು ಸ್ಪಷ್ಟನೆ

Written by Soma Shekar

Published on:

---Join Our Channel---

A R Rahman Divorce : ಆಸ್ಕರ್ (Oscar) ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ (A R Rahman Divorce) ತಮ್ಮ 29 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯವನ್ನು ಹಾಡಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಪ್ರೀತಿ ಇದ್ದರೂ ಕೂಡಾ ಅವರ ನಡುವೆ ಸುಧಾರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಬಿರುಕು ಉಂಟಾಗಿದೆ. ಹೀಗಾಗಿ ಪತಿ ರೆಹಮಾನ್ ಅವರಿಂದ ದೂರವೇ ಇರಲು ನನ್ನ ಕಕ್ಷಿದಾರರಾಗಿರುವ ಸಾಯಿರಾ ಬಾನು ನಿರ್ಧರಿಸಿದ್ದಾರೆ ಎನ್ನುವುದಾಗಿ ವಿಚ್ಚೇದನದ ಕುರಿತಾಗಿ ಸಾಯಿರಾ ಬಾನು (Saira Banu) ಅವರ ವಕೀಲರು ಘೋಷಣೆಯನ್ನು ಮಾಡಿದ್ದರು.

ಈ ಸುದ್ದಿಯ ಕೆಲವೇ ಗಂಟೆಗಳ ನಂತರ ರೆಹಮಾನ್ ಅವರ ತಂಡದ ಸದಸ್ಯೆ ಆಗಿರುವ ಗಿಟಾರ್ ವಾದಕಿ ಮೋಹಿನಿ ಡೇ (Mohini Dey) ತಮ್ಮ ಪತಿ ಸಂಗೀತ ಸಂಯೋಜಕ ಮಾರ್ಕ್ಸ್ ಹಾರ್ಟ್ಸುಚ್ ನಿಂದ ದೂರವಾಗುವ ವಿಚ್ಚೇದನದ ನಿರ್ಧಾರವನ್ನು ಘೋಷಣೆಯನ್ನು ಮಾಡಿದ್ದು ಎಲ್ಲರ ಗಮನವನ್ನು ಸೆಳೆದಿದ್ದು ಮಾತ್ರವೇ ಅಲ್ಲದೇ ಚರ್ಚೆಯ ವಿಷಯವಾಗಿದೆ ಬದಲಾಗಿದೆ.

ರೆಹಮಾನ್ ಮತ್ತು ಮೋಹಿನಿ ಡೇ ಅವರು ಒಂದೇ ಸಮಯದಲ್ಲಿ ವಿಚ್ಚೇದನ ಘೋಷಣೆ ಮಾಡಿರುವುದು ಒಂದಷ್ಟು ಅನುಮಾನಗಳನ್ನು ಮೂಡಿಸಿದೆ. ಈ ವಿಚ್ಚೇದನದ ಹಿಂದೆ ಏನೋ ಕಾರಣವಿದೆ ಎನ್ನುವುದಾಗಿಯೂ ಕೆಲವರು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಈಗ ಈ ಎಲ್ಲಾ ಅನುಮಾನಗಳಿಗೆ, ಗೊಂದಲಗಳಿಗೆ ರೆಹಮಾನ್ ಪತ್ನಿ ಸಾಯಿರಾ ಅವರ ಪರ ವಕೀಲೆ ವಂದನಾ ಶಾ (Vandana Shah) ಸ್ಪಷ್ಟನೆಯನ್ನು ನೀಡಿದ್ದಾರೆ.

ಮೋಹಿನಿ ಡೇ ವಿಚ್ಚೇದನಕ್ಕೂ ಮತ್ತು ರೆಹಮಾನ್ ಸಾಯಿರಾ ವಿಚ್ಚೇದನಕ್ಕೂ ಯಾವುದೇ ಸಂಬಂಧವಿಲ್ಲ. ಇದು ರೆಹಮಾನ್ ಮತ್ತು ಅವರ ಪತ್ನಿಯ ನಿರ್ಧಾರವಾಗಿದೆ. ಅವರ ಈ ನಿರ್ಧಾರದ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ಆದ ವಿಚ್ಚೇದನ ಇದಾಗಿರುವುದರಿಂದ ಯಾವುದೇ ಕಾನೂನಿನ ಪರಿಹಾರದ ಬಗ್ಗೆ ಇದುವರೆಗೂ ನಿರ್ಧಾರವಾಗಿಲ್ಲ ಎಂದಿದ್ದಾರೆ.

Bhagya Lakshmi : ಕಣ್ಣಲ್ಲಿ ನೋಡೋಕಾಗ್ತಿಲ್ಲ, ಕಿವೀಲಿ ಕೇಳೋಕಾಗ್ತಿಲ್ಲ, ಭಾಗ್ಯಳ ಕಣ್ಣೀರಿಂದ ಬೇಸತ್ತ ಜನ

Leave a Comment